ಸದ್ದಿಲ್ಲದೇ ಮಂಗಳಯಾನ ಮುಕ್ತಾಯ? ಭೂಮಿ ಜತೆಗಿನ ಸಂಪರ್ಕ ಬಂದ್
ಬರಿದಾದ ಬ್ಯಾಟರಿ ಸಾಮರ್ಥ್ಯ
Team Udayavani, Oct 3, 2022, 7:30 AM IST
ನವದೆಹಲಿ: ಎಂಟು ವರ್ಷಗಳ ಹಿಂದೆ ಭೂಮಿಯಿಂದ ನಭಕ್ಕೆ ನೆಗೆದು, ಮಂಗಳನ ಸುತ್ತ ಸುತ್ತುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಾರ್ಸ್ ಆರ್ಬಿಟರ್(ಮಂಗಳಯಾನ) ನೌಕೆ ಇದೀಗ ಭೂಮಿಯೊಂದಿಗಿನ ಸಂಪರ್ಕವನ್ನು ಕಡಿತಗೊಳಿಸಿಕೊಂಡಿದೆ ಎನ್ನಲಾಗಿದೆ.
ನೌಕೆಯಲ್ಲಿನ ಬ್ಯಾಟರಿ ಸಾಮರ್ಥ್ಯ ಸಂಪೂರ್ಣವಾಗಿ ಬರಿದಾಗಿರುವ ಹಿನ್ನೆಲೆ ಸಂಪರ್ಕ ಕಡಿತವಾಗಿದೆ ಎಂದು ಇಸ್ರೋದ ಮೂಲಗಳು ತಿಳಿಸಿವೆ.
ಮಂಗಳಯಾನ ನೌಕೆಯನ್ನು 450 ಕೋಟಿ ರೂ. ವೆಚ್ಚದಲ್ಲಿ 2013ರ ನವೆಂಬರ್‌ನಲ್ಲಿ ಉಡಾವಣೆ ಮಾಡಲಾಗಿತ್ತು. ಪಿಎಸ್‌ಎಲ್‌ವಿ-ಸಿ25 ರಾಕೆಟ್ ಹೊತ್ತೂಯ್ದಿದ್ದ ಈ ನೌಕೆಯನ್ನು 2014ರ ಸೆ.24ರಂದು ಮಂಗಳನ ಕಕ್ಷೆಯಲ್ಲಿ ಕೂರಿಸಲಾಗಿತ್ತು. ಗ್ರಹಣ ವೇಳೆ ಬ್ಯಾಟರಿ ಬಳಸಿಕೊಳ್ಳುತ್ತಿದ್ದ ನೌಕೆಗೆ ಒಟ್ಟು 1 ಗಂಟೆ 40 ನಿಮಿಷಗಳ ಕಾಲ ಬಳಸುವಷ್ಟು ಬ್ಯಾಟರಿ ಸಾಮರ್ಥ್ಯವಿತ್ತು. ಇದೀಗ ಅದು ಸಂಪೂರ್ಣವಾಗಿ ಬರಿದಾಗಿದೆ. ಇತ್ತೀಚೆಗೆ ಹೆಚ್ಚು ಗ್ರಹಣಗಳು ಸಂಭವಿಸಿವೆ. ಅದರಲ್ಲೂ ಒಂದು ಗ್ರಹಣವು ಏಳೂವರೆ ತಾಸುಗಳಷ್ಟು ಕಾಲ ಆವರಿಸಿತ್ತು. ಅದರಿಂದಾಗಿ ಬ್ಯಾಟರಿ ಖಾಲಿಯಾಗಿದೆ ಎಂದು ಮೂಲವು ತಿಳಿಸಿದೆ.
ಈ ಬಗ್ಗೆ ಇಸ್ರೋ ಆಗಲೀ ಅಥವಾ ಸರ್ಕಾರವಾಗಲೀ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ.
ಈ ನೌಕೆಯು ಆರು ತಿಂಗಳ ಕಾಲ ಕೆಲಸ ಮಾಡುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಉಡಾವಣೆ ಮಾಡಲಾಗಿತ್ತಾದರೂ ಇದು ಬರೋಬ್ಬರಿ 8 ವರ್ಷಗಳ ಕಾಲ ಅತ್ಯುತು½ತವಾಗಿ ಕೆಲಸ ಮಾಡಿದೆ ಎಂದೂ ತಿಳಿಸಲಾಗಿದೆ.
ಏನೇನು ಕಳುಹಿಸಿಕೊಟ್ಟಿದೆ?
ಮಂಗಳಯಾನ ನೌಕೆಯಲ್ಲಿ ವಿವಿಧ ವಿದ್ಯಮಾನಗಳ ಪರೀಕ್ಷೆಗೆಂದು ಒಟ್ಟು ಐದು ರೀತಿಯ ಸಲಕರಣೆಗಳನ್ನು ಕಳುಹಿಸಿಕೊಡಲಾಗಿತ್ತು. ಇವುಗಳು ಮಂಗಳ ಗ್ರಹದ ಎರಡು ಚಂದ್ರಗಳಲ್ಲಿ ಒಂದಾದ ಡಿಮೋಸ್‌ನ ಚಿತ್ರವನ್ನು ಕಳುಹಿಸಿಕೊಟ್ಟಿದೆ. ಗ್ರಹದಲ್ಲಿ ಎಷ್ಟೋ ವರ್ಷಗಳ ಹಿಂದೆ ಇದ್ದ ಟಿಹೆìನಸ್ ಮಾನ್ಸ್ ಅಗ್ನಿಪರ್ವತ ಹಾಗೂ ಅದರಿಂದ ಆದ ಕುಳಿ, ಕಾಲುವೆಗಳ ಚಿತ್ರ, ಗ್ರಹದ ಅತಿದೊಡ್ಡ ಕಣಿವೆ ವ್ಯಾಲ್ಲಿಸ್ ಮರೈನರಿಸ್ ಚಿತ್ರಗಳನ್ನೂ ಕಳುಹಿಸಿದೆ. ಒಟ್ಟಾರೆಯಾಗಿ ಮಂಗಳನ ಸಾವಿರಕ್ಕೂ ಅಧಿಕ ಚಿತ್ರಗಳು ಈ ನೌಕೆಯಿಂದ ಸಿಕ್ಕಿದೆ.
ಮತ್ತೊಂದು ಮಂಗಳಯಾನ:
ಮಂಗಳಯಾನ ಎರಡರ ನೌಕೆಯನ್ನು ನಭಕ್ಕೆ ಕಳುಹಿಸಬೇಕೆಂದು ಇಸ್ರೋ 2016ರಲ್ಲಿಯೇ ಯೋಜನೆ ರೂಪಿಸಿತ್ತು. ಆದರೆ ಗಗನಯಾನ, ಚಂದ್ರಯಾನ-3 ಮತ್ತು ಆದಿತ್ಯಾ-ಎಲ್1 ಯೋಜನೆಗಳ ಹಿನ್ನೆಲೆ ಈ ಯೋಜನೆ ತಡವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.