ಪಾಕ್ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್ ಆಗ್ರಹ
Team Udayavani, Feb 15, 2019, 10:35 AM IST
ಹೊಸದಿಲ್ಲಿ : ಪಾಕಿಸ್ಥಾನದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ಸಂಪೂರ್ಣ ಧ್ವಂಸ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ಈ ವಿಷಯದಲ್ಲಿ ಭಾರತ ಸರಕಾರ ದೃಡತೆ, ಪರಿಣಾಮಕಾರಿತ್ವ ಮತ್ತು ಖಚಿತತೆಯನ್ನು ತಳೆಯಬೇಕು ಎಂದು ಅದು ಒತ್ತಾಯಿಸಿದೆ.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ ನಿನ್ನೆ ಗುರುವಾರ 40 ಸಿಆರ್‌ಪಿಎಫ್ ಯೋಧನ್ನು ಆತ್ಮಾಹುತಿ ದಾಳಿಯಲ್ಲಿ ಬಲಿ ಪಡೆದಿರುವ ಉಗ್ರನು ಸ್ಥಳೀಯ ತರುಣನಾಗಿದ್ದು ಧರ್ಮದ ಹೆಸರಿನಲ್ಲಿ ಬುದ್ದಿಪಲ್ಲಟಗೊಂಡು ಈ ದುಷ್ಕೃತ್ಯ ಎಸಗಿದ್ದಾನೆ ಎಂದು ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಆಲೋಕ್ ಕುಮಾರ್ ಹೇಳಿದ್ದಾರೆ.
ಪುಲ್ವಾಮಾ ಉಗ್ರ ದಾಳಿಯ ಹೊಣೆ ಹೊತ್ತಿರುವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯು ಪಾಕಿಸ್ಥಾನ ಮೂಲದ್ದಾಗಿದ್ದು ಪಾಕ್ ಬೆಂಬಲಿತವಾಗಿದೆ; ಆದುದರಿಂದ ಉಗ್ರ ಸಮೂಹಗಳಿಗೆ ಬೆಂಬಲ ಕೊಡುವ ಪಾಕಿಸ್ಥಾನದಲ್ಲಿನ ಎಲ್ಲ ಉಗ್ರ ಶಿಬಿರಗಳನ್ನು, ನೆಲೆಗಳನ್ನು ಧ್ವಂಸಗೊಳಿಸಬೇಕಾದ ಅಗತ್ಯವಿದೆ ಎಂದು ವಿಹಿಂಪ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.