ಕೌಶಲ ಅಭಿವೃದ್ಧಿಗೆ ಸಂಕಲ್ಪ, ಸ್ಟ್ರೈವ್ ಜಾರಿ
Team Udayavani, Oct 12, 2017, 7:25 AM IST
ಹೊಸದಿಲ್ಲಿ: ಕೌಶಲ ಅಭಿವೃದ್ಧಿಗಾಗಿ ಎರಡು ಯೋಜನೆಗಳನ್ನು ವಿಶ್ವಬ್ಯಾಂಕ್ ನೆರವಿನಲ್ಲಿ ಹಮ್ಮಿಕೊಳ್ಳಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಈ ಯೋಜನೆಯು ಅಂದಾಜು 6,655 ಕೋಟಿ ರೂ.ವೆಚ್ಚದ್ದಾಗಿದೆ. ಜೀವನ ಮಟ್ಟ ಸುಧಾರಣೆ ಪ್ರಚುರಪಡಿಸಲು ಕೌಶಲ ಪಡೆಯುವಿಕೆ ಮತ್ತು ಜ್ಞಾನಗಳಿಕೆ (ಸಂಕಲ್ಪ) ಹಾಗೂ ಔದ್ಯಮಿಕ ಮೌಲ್ಯವರ್ಧನೆಗಾಗಿ ಕೌಶಲ ಸುಧಾರಣೆ (ಸ್ಟ್ರೈವ್) ಎಂಬ ಯೋಜನೆಗಳಿಗೆ ವಿಶ್ವಬ್ಯಾಂಕ್ ನೆರವು ನೀಡಲಿದೆ.
ಸಂಕಲ್ಪ ಯೋಜನೆಯು 4,455 ಕೋಟಿ ರೂ. ಯೋಜನೆಯಾಗಿದ್ದು, ಈ ಪೈಕಿ 3,300 ಕೋಟಿ ರೂ. ವಿಶ್ವಬ್ಯಾಂಕ್ ಒದಗಿಸಲಿದೆ. ಸ್ಟ್ರೈವ್ 2,200 ಕೋಟಿ ರೂ.ಯೋಜನೆ ಯಾಗಿದ್ದು, ಅರ್ಧದಷ್ಟು ಮೊತ್ತವನ್ನು ವಿಶ್ವ ಬ್ಯಾಂಕ್ ನೀಡಲಿದೆ. ಉತ್ತರ ಕನ್ನಡದ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಕೌಶಲಾಭಿ ವೃದ್ಧಿ ಖಾತೆಯ ಸಹಾಯಕ ಸಚಿವರಾಗಿದ್ದಾರೆ.
ಈ ಯೋಜನೆಗಳ ಅಡಿಯಲ್ಲಿ 66ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕೌಶಲ ಸಂಸ್ಥೆಗಳನ್ನು ಸ್ಥಾಪಿಸಲಿದ್ದೇವೆ ಎಂದು ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಸುಮಾರು 30 ಸಾವಿರ ಅಭ್ಯರ್ಥಿಗಳಿಗೆ ಈ ಸಂಸ್ಥೆಯಲ್ಲಿ ತರಬೇತಿ ನೀಡಿ, ಅಂತಾರಾಷ್ಟ್ರೀಯ ಮಾನ್ಯತೆಯ ಸಂಸ್ಥೆಗಳಿಂದ ಪ್ರಮಾಣಪತ್ರ ನೀಡಲಾಗುತ್ತದೆ. ದೇಶದಲ್ಲಿನ 500 ಐಟಿಐಗಳನ್ನು ಮಾದರಿ ಶಿಕ್ಷಣ ಸಂಸ್ಥೆಗಳನ್ನಾಗಿ ರೂಪಿಸಲಾಗುತ್ತದೆ ಮತ್ತು ಅವುಗಳಿಗೆ ಉದ್ಯಮ ದೊಂದಿಗೆ ಸಂಪರ್ಕ ಒದಗಿಸಲಾ ಗುತ್ತದೆ. ಜತೆಗೆ ಆನ್‌ಲೈನ್ ಪರೀಕ್ಷೆಗಳು, ನೇಮಕಾತಿಗೆ ಕೇಂದ್ರೀಯ ವ್ಯವಸ್ಥೆ, ವ್ಯವಸ್ಥೆ ಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ಸುಧಾರಿಸಲಾಗುತ್ತದೆ. ಸುಮಾರು 700 ಉದ್ದಿಮೆ ಗಳಲ್ಲಿ ನಿರ್ದಿಷ್ಟ ಉದ್ಯಮಕ್ಕೆ ಸಂಬಂ ಧಿಸಿದ ಕೌಶಲ ತರಬೇತಿಗೆ ಪ್ರೋತ್ಸಾಹಿಸಲಾ ಗುತ್ತದೆ. ಇದರಿಂದ ಲಕ್ಷಾಂತರ ಜನರಿಗೆ ಕೌಶಲ ತರಬೇತಿ ಲಭ್ಯವಾಗುತ್ತಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.