ಕುಲಾಂತರಿ ಭ್ರೂಣ ಅಭಿವೃದ್ಧಿ
Team Udayavani, Aug 7, 2017, 7:45 AM IST
ಹೊಸದಿಲ್ಲಿ: ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಕುಲಾಂತರಿ ಭ್ರೂಣವೊಂದನ್ನು ಅಮೆರಿಕದ ವಿಜ್ಞಾನಿಗಳು ಬೆಳೆಸಿದ್ದು, ಅದರಲ್ಲಿ ಅನಾರೋಗ್ಯಕ್ಕೆ ಈಡಾಗುವ ವಂಶವಾಹಿಯನ್ನು ಪರಿವರ್ತಿಸಿದ್ದಾರೆ.
ಈ ಮೂಲಕ ಅನಾರೋಗ್ಯಕ್ಕೆ ಕಾರಣವಾಗುವ ವಂಶವಾಹಿಯನ್ನು ತಡೆಹಿಡಿಯ ಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇದು ಆರಂಭಿಕ ಹೆಜ್ಜೆಯಾಗಿದ್ದು, ಪೂರ್ಣ ಪ್ರಮಾಣದ ಮಗು ಜನನದಲ್ಲಿ ಮಹತ್ವದ ಅಂಶವಾಗಿದೆ. ಇದೇ ರೀತಿ ವಂಶವಾಹಿ ಪರಿವರ್ತನೆಗೆ ಹಿಂದೆ ಚೀನಾ ಯತ್ನಿಸಿತ್ತಾದರೂ ಅದರಲ್ಲಿ ಫಲಕಾರಿಯಾಗಲಿಲ್ಲ.
ಸಿಆರ್‌ಐಎಸ್‌ಪಿಆರ್ ಸಿಎಎಸ್9 ಎಂಬ ತಾಂತ್ರಿಕತೆ ಬಳಸಿ, ವಂಶವಾಹಿ ಪರಿವರ್ತಿಸಲಾಗಿದೆ. ಇದರಿಂದ ಹೃದಯಾ ಘಾತಕ್ಕೆ ಕಾರಣವಾಗುವ ವಂಶವಾಹಿಯನ್ನು ತಡೆಯಲಾಗಿದೆ. ಈವರೆಗೆ ಬೆಳೆಸಿದ ಭ್ರೂಣ ಗಳನ್ನು ಮಾನವ ಗರ್ಭದಲ್ಲಿ ಸ್ಥಾಪಿಸುವ ತಂತ್ರಜ್ಞಾನವಿರಲಿಲ್ಲ. ಮುಂದಿನ ದಿನಗಳಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಮಕ್ಕಳನ್ನು (ಪರಿವರ್ತಿತ ವಂಶವಾಹಿಯುಳ್ಳ ಮಗು) ಪಡೆವ ದಿನಗಳು ದೂರವಿಲ್ಲ. ಸಂಶೋಧಕರ ತಂಡದಲ್ಲಿ ಕಾಶ್ಮೀರ ಮೂಲದ ಸಂಜೀವ್ ಕೌಲ್ ಎಂಬುವವರು ಪ್ರಮುಖ ಪಾತ್ರವನ್ನು ವಹಿಸಿದ್ದು, ದಕ್ಷಿಣ ಕೊರಿಯಾ, ಅಮೆರಿಕ, ಚೀನಾ ವಿಜ್ಞಾನಿಗಳು ಭಾಗಿಯಾಗಿದ್ದಾರೆ.
ವಿಜ್ಞಾನಿಗಳು ಮಾಡಿದ್ದೇನು?: ಮಾರಕ ಕಾಯಿಲೆಗಳ ಪೈಕಿ ಹೆಚ್ಚಿನವು ವಂಶವಾಹಿ ಗಳಲ್ಲೇ ಬರುತ್ತವೆ. ಆರೋಗ್ಯವಂತ ಶಿಶು ಸೃಷ್ಟಿ ಈ ಸಂಶೋಧನೆಯ ಉದ್ದೇಶ. ಇದಕ್ಕೆ ಕಾಯಿಲೆ ತರುವ ವಂಶವಾಹಿಯನ್ನು ಪತ್ತೆ ಹಚ್ಚಿ, ಪರಿವರ್ತಿಸಿ ಭ್ರೂಣ ಬೆಳೆಸಲಾ ಗುತ್ತದೆ. ಸದ್ಯ ಕೆಲ ದಿನಗಳಷ್ಟೇ ಭ್ರೂಣ ಬೆಳೆಸಲಾಗುತ್ತದೆ. ಜೊತೆಗೆ ಬೆಳೆಸಿದ ಭ್ರೂಣವನ್ನು ಮಾನವ ಗರ್ಭದೊಳಗೆ ಇಡುವ ತಂತ್ರಜ್ಞಾನವೂ ಇಲ್ಲ. ಮುಂದಿನ ದಿನಗಳಲ್ಲಿ ಕೃತಕ ಗರ್ಭದ ಮೂಲಕ ಅಥವಾ ಬೆಳೆದ ಭ್ರೂಣವನ್ನು ಮಾನವ ಗರ್ಭದಲ್ಲಿಡುವ ತಂತ್ರಜ್ಞಾನ ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.