Tirumala Tirupati Devasthanams; ತಿರುಮಲದಲ್ಲಿ ಅಭಿವೃದ್ಧಿ ಯೋಜನೆಗೆ ಅಸ್ತು
Team Udayavani, Aug 9, 2023, 8:00 AM IST
ಟಿಟಿಡಿಗೆ ಇತ್ತೀಚೆಗೆ ನೂತನ ಮುಖ್ಯಸ್ಥರ ನೇಮಕವಾಗಿದೆ. ಸೋಮವಾರ ಟಿಟಿಡಿ ನಿರ್ಗಮಿತ ಅಧ್ಯಕ್ಷ ವೈ.ವಿ.ಸುಬ್ಟಾ ರೆಡ್ಡಿ ನೇತೃತ್ವದಲ್ಲಿ ಕೊನೆಯ ಸಭೆ ನಡೆದಿದ್ದು, ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಅಂಗೀಕಾರಗೊಂಡ ಯೋಜನೆಗಳು
1. ಕ್ಯೂ ಕಾಂಪ್ಲೆಕ್ಸ್:
ವರ್ಷ ಕಳೆದಂತೆ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಭಕ್ರತ ನಿರ್ವಹಣೆಗಾಗಿ ತಿರುಚನೂರ್‌ನಲ್ಲಿ 23.5 ಕೋಟಿ ರೂ. ವೆಚ್ಚದಲ್ಲಿ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ.
2. ಅವಳಿ ರಸ್ತೆಯಲ್ಲಿ ಸುರಕ್ಷ ಕ್ರಮ
ತಿರುಮಲಕ್ಕೆ ಹೋಗುವ ಮತ್ತು ಬರುವ ಅವಳಿ ಘಾಟ್ ರಸ್ತೆಯಲ್ಲಿ ಪ್ರಯಾಣಿಕರ ಸುರಕ್ಷ ಕ್ರಮ ಕೈಗೊಳ್ಳಲು 24 ಕೋಟಿ ರೂ. ವೆಚ್ಚದ ಯೋಜನೆ.
3. ಶ್ರೀನಿವಾಸ ಸೇತು
ತಿರುಪತಿಯಲ್ಲಿ ಈಗಾಗಲೇ ಆರಂಭವಾಗಿರುವ ಶ್ರೀನಿವಾಸ ಸೇತು ಎಲಿವೇಟೆಡ್ ಎಕ್ಸ್‌ಪ್ರಸ್‌ವೇ ಕಾಮಗಾರಿಗಾಗಿ ನಿರ್ಮಾಣ ಕಂಪೆನಿಗೆ 118 ಕೋಟಿ ರೂ. ಬಿಡುಗಡೆ.
4. ವೈದ್ಯಕೀಯ ಸೌಲಭ್ಯ
ಶ್ರೀ ಪದ್ಮಾವತಿ ಮಕ್ಕಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಸುಧಾರಣೆಗಾಗಿ 75.86 ಕೋಟಿ ರೂ. ಅನುದಾನ.
5. ತುಪ್ಪ ಉತ್ಪಾದನೆ ಘಟಕ
ತಿರುಪತಿಯ ಎಸ್‌ವಿ ಗೋಶಾಲೆಯ ಆವರಣದಲ್ಲಿ 4.25 ಕೋಟಿ ರೂ. ವೆಚ್ಚದಲ್ಲಿ ತುಪ್ಪ ಉತ್ಪಾದನೆ ಘಟಕ ಸ್ಥಾಪನೆ.
6. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ
ತಿರುಪತಿಯಲ್ಲಿ ಬಕುಳಾಮಾತಾ ದೇವಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 9.85 ಕೋಟಿ ರೂ., ಎಸ್‌ವಿ ಆಯುರ್ವೇದ ಆಸ್ಪತ್ರೆಗೆ 14 ಕೋಟಿ ರೂ., ಎಸ್‌ವಿಆರ್‌ಆರ್ ಸರಕಾರಿ ಆಸ್ಪತ್ರೆಯಲ್ಲಿ ಟಿಬಿ ವಾರ್ಡ್ ನಿರ್ಮಾಣಕ್ಕೆ 2.2 ಕೋಟಿ ರೂ., ಎಸ್‌ವಿ ಮ್ಯೂಸಿಕ್ ಕಾಲೇಜಿನಲ್ಲಿ ಹೊಸ ಹಾಸ್ಟೆಲ್ ವಿಭಾಗ ಸ್ಥಾಪನೆಗೆ 11 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.