ಮುಂಗಾರು ಅಧಿವೇಶನಕ್ಕೆ ಅಭೂತಪೂರ್ವ ಸಿದ್ಧತೆ

ಆಗಸ್ಟ್‌ ಕೊನೆಯ ವಾರ, ಸೆಪ್ಟಂಬರ್‌ ಮೊದಲ ವಾರ ಸಾಧ್ಯತೆ

Team Udayavani, Aug 17, 2020, 6:37 AM IST

ಮುಂಗಾರು ಅಧಿವೇಶನಕ್ಕೆ ಅಭೂತಪೂರ್ವ ಸಿದ್ಧತೆ

ಹೊಸದಿಲ್ಲಿ: ಕೋವಿಡ್ 19 ಕಾಟದ ನಡುವೆಯೇ ಪ್ರಸಕ್ತ ವರ್ಷದ ಮುಂಗಾರು ಅಧಿವೇಶನಕ್ಕೆ ಸಂಸತ್ತು ಸಿದ್ಧಗೊಳ್ಳುತ್ತಿದೆ.

ಆಗಸ್ಟ್‌ ಕೊನೆಯ ವಾರ ಅಥವಾ ಸೆಪ್ಟಂಬರ್‌ ಮೊದಲ ವಾರದಲ್ಲಿ ಅಧಿವೇಶನ ಆರಂಭವಾಗುವ ಸಾಧ್ಯತೆಯಿದೆ.

ಅದಕ್ಕಾಗಿ 68 ವರ್ಷಗಳ ಇತಿಹಾಸವಿರುವ ಸಂಸತ್‌ ಭವನದಲ್ಲಿ ಇದೇ ಮೊದಲ ಬಾರಿಗೆ ವಿನೂತನ ಕಟ್ಟುಪಾಡುಗಳು ಮತ್ತು ಮುನ್ನೆಚ್ಚರಿಕೆಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.

ಇದರನ್ವಯ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ಅವಧಿ ಬದಲಾಗಲಿದ್ದು, ದಿನದ ಬೇರೆ ಬೇರೆ ಅವಧಿಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಂಸತ್ತಿನ ಅಲ್ಲಲ್ಲಿ ಥರ್ಮಲ್‌ ಸ್ಕ್ಯಾನಿಂಗ್‌, ಸ್ಯಾನಿಟೈಸಿಂಗ್‌ ಮತ್ತು ಮಾಸ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ.

ಸದಸ್ಯರಿಗೂ ಗ್ಯಾಲರಿ ವ್ಯವಸ್ಥೆ
ಮುಖ್ಯ ಚೇಂಬರ್‌ನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸೀಮಿತ ಸಂಖ್ಯೆಯ ಪ್ರಮುಖ ಸದಸ್ಯರಿಗಷ್ಟೇ ಆಸೀನರಾಗಲು ಅವಕಾಶ ಕಲ್ಪಿಸಲಾಗಿದ್ದು, ಮಿಕ್ಕವರು ಗ್ಯಾಲರಿಯಿಂದ ಕಲಾಪವನ್ನು ವೀಕ್ಷಿಸಬೇಕಿದೆ. ಪ್ರತಿಯೊಂದು ಆಸನಕ್ಕೂ ಆಡಿಯೋ ಕನ್ಸೋಲ್‌ಗ‌ಳನ್ನು ಅಳವಡಿಸಲಾಗಿದ್ದು, ಸದಸ್ಯರು ಕುಳಿತೇ ಮಾತನಾಡಬಹುದು.

ಅಧಿಕಾರಿಗಳ ಚೇಂಬರ್‌ ಮತ್ತು ಸದನವನ್ನು ಪ್ರತ್ಯೇಕಿಸಲು ಅವರಿಗೂ ವಿಭಾಗಗಳ ನಡುವೆ ಪಾಲಿಕಾಬೊìನೇಟ್‌ ಶೀಟ್‌ ಅಳವಡಿಸಲಾಗಿದೆ. ರಾಜ್ಯಸಭೆಯ ಏರ್‌ ಕಂಡೀಷನ್‌ ವ್ಯವಸ್ಥೆಯಲ್ಲಿ ಸೂಕ್ಷ್ಮಾಣು ನಿರ್ಮೂಲನೆ ಮಾಡುವಂಥ ಅಲ್ಟ್ರಾವಯಲೇಟ್‌ ಜರ್ಮಿಸೈಡ್‌ ಇರ್ಯಾಡಿಯೇಶನ್‌ ಸಿಸ್ಟಂ ಅಳವಡಿಸಲಾಗಿದೆ.

ಗ್ಯಾಲರಿ ಮತ್ತು ಪ್ರಸ್‌ ಗ್ಯಾಲರಿಗಳಲ್ಲಿ ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ. ಸೀಮಿತ ಸಂಖ್ಯೆಯ ಅಧಿಕಾರಿಗಳು ಮತ್ತು ವರದಿಗಾರರಿಗೆ ಮಾತ್ರ ಸದನದೊಳಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಎಲ್ಲ ಸಿದ್ಧತೆಗಳನ್ನು ಆಗಸ್ಟ್‌ ಮೂರನೇ ವಾರದೊಳಗೆ ಪೂರ್ಣ ಗೊಳಿಸುವಂತೆ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಹಾಗೂ ಲೋಕಸಭೆಯ ಸಭಾಪತಿ ಓಂ ಬಿರ್ಲಾ ಅವರು ಸಮಿತಿ ಅಧಿಕಾರಿಗಳಿಗೆ ಸೂಚಿಸಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ರಾಜ್ಯಸಭಾ ಟಿವಿ, ಲೋಕಸಭಾ ಟಿವಿಗಳು ಸದನದಲ್ಲಿ ತಾವು ಹೊಂದಿರುವ ಸೌಕರ್ಯಗಳ ಮೂಲಕವೇ ಎಲ್ಲ ಕಲಾಪಗಳನ್ನು ನೇರವಾಗಿ ಪ್ರಸಾರ ಮಾಡಲಿವೆ.

ಲೋಕಸಭೆಯ ಸಿದ್ಧತೆಗಳು
– ಆಯಾ ಪಕ್ಷಗಳ ಸದಸ್ಯ ಬಲಕ್ಕೆ ಅನುಗುಣವಾಗಿ ಆಸನ ಮೀಸಲಿರಿಸಲಾಗಿದೆ. ಹೆಚ್ಚು ಸ್ಥಾನಗಳನ್ನು ಪಡೆದಿರುವ ಪಕ್ಷಗಳು ಮುಖ್ಯ ಸದನದಲ್ಲಿ ಸ್ಥಾನ ಪಡೆಯಲಿದ್ದು, ಕಡಿಮೆ ಸ್ಥಾನಗಳನ್ನು ಹೊಂದಿರುವ ಪಕ್ಷಗಳ ಸದಸ್ಯರು ಗ್ಯಾಲರಿಯಲ್ಲಿ  ಆಸೀನರಾಗಬೇಕಾಗುತ್ತದೆ.

– ಮುಖ್ಯ ಚೇಂಬರಿನಲ್ಲಿ ಪ್ರಧಾನಿ ಮತ್ತು ಅವರ ಸಂಪುಟ ದರ್ಜೆ ಸಚಿವರು ಹಾಗೂ ವಿಪಕ್ಷಗಳ ಪ್ರಮುಖ ಸದಸ್ಯರಿಗಷ್ಟೇ ಅವಕಾಶ ಕಲ್ಪಿಸಲಾಗುತ್ತದೆ.

– ಲೋಕಸಭೆ ಅಧಿಕಾರಿಗಳ ವಿಭಾಗ ಮತ್ತು ಮುಖ್ಯ ಚೇಂಬರನ್ನು ಪಾಲಿ ಕಾರ್ಬೊನೇಟ್‌ ಶೀಟ್‌ಗಳಿಂದ ಪ್ರತ್ಯೇಕಿಸಲಾಗುತ್ತದೆ.

ರಾಜ್ಯಸಭೆಯ ಸಿದ್ಧತೆಗಳು
– 60 ಸದಸ್ಯರು ಮುಖ್ಯ ಚೇಂಬರ್‌ನಲ್ಲಿ, 51 ಸದಸ್ಯರು ಗ್ಯಾಲರಿಯಲ್ಲಿ, ಉಳಿದ 132 ಸದಸ್ಯರು ಲೋಕಸಭೆಯಲ್ಲಿ ಆಸೀನ.

– ಲೋಕಸಭಾ ಚೇಂಬರ್‌ನಲ್ಲಿ ಕುಳಿತ ರಾಜ್ಯಸಭಾ ಸದಸ್ಯರಿಗೆ ವರ್ಚ್ಯುವಲ್‌ ಆಗಿ ಭಾಗವಹಿಸಲು ಅನುಕೂಲವಾಗುವಂತೆ ಎಲ್‌ಸಿಡಿ ಪರದೆ, ಕೆಮರಾ, ಆಡಿಯೋ-ವಿಡಿಯೋ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ ಹೈ ಕ್ವಾಲಿಟಿ ಕೇಬಲ್‌ಗ‌ಳನ್ನು ಅಳವಡಿಸಲಾಗಿದೆ.

– ಹಿರಿಯರಾದ ಡಾ| ಮನಮೋಹನ್‌ ಸಿಂಗ್‌, ಎಚ್‌.ಡಿ. ದೇವೇಗೌಡ, ರಾಮ್‌ ವಿಲಾಸ್‌ ಪಾಸ್ವಾನ್‌, ರಾಮದಾಸ್‌ ಅಠಾವಳೆ ಮುಂತಾದ ಪ್ರಮುಖ ಸಂಸದರ ಆಸನಗಳನ್ನು ಅವರ ಹೆಸರು ಗಳಿಂದ ಗುರುತು ಮಾಡಲಾಗಿದೆ.

– ಪ್ರತಿಯೊಬ್ಬ ಸದಸ್ಯರ ಕುರ್ಚಿಯ ಬಳಿಯೇ ಆಡಿಯೋ ಕನ್ಸೋಲ್‌ಗ‌ಳನ್ನು ಅಳವಡಿಸಲಾಗಿದ್ದು, ಅವರು ಕುಳಿತೇ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ.

ಟಾಪ್ ನ್ಯೂಸ್

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.