ಇಂಗ್ಲಿಷ್ ಬಾರದಂತೆ ನಟಿಸಿದ ಅಬೆ!
Team Udayavani, Jul 22, 2017, 6:45 AM IST
ಹೊಸದಿಲ್ಲಿ: ಸ್ವಯಂಕೃತ ಅಪರಾಧಗಳಿಂದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಮತ್ತೆ ಸಾರ್ವಜನಿಕವಾಗಿ ಅವಮಾನಕ್ಕೆ ಒಳಗಾಗುವುದು ಮಾಮೂಲಿ. ಆಲೋಚಿಸದೆ ಮಾತನಾಡುವ ಟ್ರಂಪ್, ಮಹಿಳೆಯರ ಬಗ್ಗೆ ಮಾತನಾಡುವಾಗಲಂತೂ ನಾಲಿಗೆಗೆ ಲಗಾಮೇ ಹಾಕುವುದಿಲ್ಲ.
ಈ ವಿಷಯ ಈಗೇಕೆ ಅಂದ್ರೆ, ಈಚೆಗೆ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಆಯೋಜಿಸಿದ್ದ ಜಿ-20 ರಾಷ್ಟ್ರಗಳ ಮುಖಂಡರ ಔತಣ ಕೂಟದಲ್ಲಿ ಜಪಾನ್‌ನ ಪ್ರಥಮ ಮಹಿಳೆ (ಪ್ರಧಾನಿ ಪತ್ನಿ) ಅಕಿ ಅಬೆ, ಟ್ರಂಪ್ ಅವರ ಪಕ್ಕದ ಆಸನದಲ್ಲೇ ಕುಳಿತಿದ್ದರು. ಕೂಟ ಸುಮಾರು ಒಂದು ತಾಸು ನಡೆದಿದ್ದು, ಅಷ್ಟೂ ಹೊತ್ತು ಅಬೆ ಅವರು ಟ್ರಂಪ್‌ರನ್ನು ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲ. ಟ್ರಂಪ್ ತಾವಾಗೇ ಮಾತನಾಡಿಸಿದರೆ, ಇಂಗ್ಲಿಷ್ ಬಾರದವರ ರೀತಿ ಜಪಾನಿ ಭಾಷೆಯಲ್ಲೇ ಸಂವಾದಿಸಿದ್ದರು.
ಬುಧವಾರ ನ್ಯೂಯಾರ್ಕ್ ಟೈಮ್ಸ್‌ಗೆ ಸಂದರ್ಶನ ನೀಡುತ್ತಾ ಟ್ರಂಪ್, “ಅಕಿ ಅಬೆ ಒಬ್ಬ ಅದ್ಭುತ ಮಹಿಳೆ. ಆದರೆ ಅವರಿಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಅವರು “ಹೆಲೋ’ ಎಂದು ಕೂಡ ನೆಟ್ಟಗೆ ಹೇಳಲಾರರು’ ಎಂದಿದ್ದಾರೆ. ವಿಷಯ ಏನೆಂದರೆ ಅಕಿ ಅಬೆ, ಅತ್ಯಂತ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲರು. ಟ್ರಂಪ್‌ರಿಂದ ಅಂತರ ಕಾಪಾಡಿಕೊಳ್ಳಲು ಉದ್ದೇಶಪೂರ್ವಕ ವಾಗಿಯೇ ಅವರು ಅಂದು ಇಂಗ್ಲಿಷ್ ಬಾರದಂತೆ ನಟಿಸಿದ್ದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.