ಇಕ್ಬಾಲನೇ ಮಿರ್ಚಿ ಎಂದು ಗೊತ್ತಿರಲಿಲ್ಲ
Team Udayavani, Oct 21, 2019, 5:06 AM IST
ಮುಂಬೈ: ಇಕ್ಬಾಲ್ ಮೆಮನ್ ಮತ್ತು ಇಕ್ಬಾಲ್ ಮಿರ್ಚಿ ಇಬ್ಬರೂ ಒಬ್ಬರೇ ಎಂಬ ವಿಚಾರವೇ ನನಗೆ ಗೊತ್ತಿರ ಲಿಲ್ಲ ಎಂದು ಶುಕ್ರವಾರ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿಕೆ ನೀಡಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚ ರನ ಕುಟುಂಬ ನಡೆಸಿರುವ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧ ಇ.ಡಿ. ಅಧಿಕಾರಿ ಗಳು ಸುಮಾರು 12 ಗಂಟೆಗಳ ಕಾಲ ಪ್ರಫುಲ್‌ರ ವಿಚಾರಣೆ ನಡೆಸಿದೆ. ಪ್ರಫುಲ್ ಕುಟುಂಬದ ಒಡೆತನದ ಮಿಲೇನಿಯಂ ಡೆವಲ ಪರ್ಸ್ ಮತ್ತು ಮಿರ್ಚಿಯ ಕುಟುಂಬದ ನಡುವಿನ ವ್ಯವಹಾರಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ.
ಇಕ್ಬಾಲ್ ಮೆಮನೇ ಮಿರ್ಚಿ ಎಂದು ನನಗೆ ಗೊತ್ತಿರಲಿಲ್ಲ. ಅಲ್ಲದೆ ನನ್ನ ಸಂಬಂಧಿಯೊಬ್ಬನ ಪರಿಚಯದಿಂದ ಮಿರ್ಚಿ ಜೊತೆ ಮಾತುಕತೆ ನಡೆದಿತ್ತು. ಆ ಸಂಬಂಧಿಕ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಪಟೇಲ್ ತಿಳಿಸಿದ್ದಾರೆ.
ಇನ್ನು ಮಿರ್ಚಿಯ ಪತ್ನಿಯು ಮಿಲೇನಿಯಂ ಡೆವಲಪರ್ಸ್‌ಗೆ 5 ಕೋಟಿ ರೂ. ವರ್ಗಾವಣೆ ಮಾಡಿರುವ ಕುರಿತ ಪ್ರಶ್ನೆಗೆ ಅವರು, ಅದು ಕಟ್ಟಡದ ನಿರ್ವಹಣೆಗಾಗಿ ಕೊಟ್ಟ ಮೊತ್ತವಿರಬಹುದು ಎಂದಿದ್ದಾರೆ. ಇದೇ ವೇಳೆ ಪಟೇಲ್ ಹಾಗೂ ಮಿರ್ಚಿ ನಡುವಿನ ದೂರವಾಣಿ ಸಂಭಾಷಣೆಯನ್ನೂ ತನಿಖೆಗೊಳಪಡಿಸಲು ಇ.ಡಿ. ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.