ಬಿಡಿ ಬಿಡಿ ಬಜೆಟ್
Team Udayavani, Jul 6, 2019, 3:00 AM IST
ಆರೋಗ್ಯ ವಲಯಕ್ಕೆ 62,000 ಕೋಟಿ ರೂ.: ಆರೋಗ್ಯ ಇಲಾಖೆಗೆ 62,659.12 ಕೋಟಿ ರೂ. ನೀಡಲಾಗಿದೆ. ಕಳೆದೆರಡು ವರ್ಷಗಳಲ್ಲಿ ಈ ವಲಯಕ್ಕೆ ನೀಡಿರುವ ಅತಿ ಹೆಚ್ಚು ಅನುದಾನವಿದು. ಕಳೆದ ಬಾರಿ 52,800 ಕೋಟಿ ರೂ. ನೀಡಲಾಗಿತ್ತು. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರ ತಕ್ಕೆ (ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ; ಎಬಿ-ಪಿಎಂಜೆಎವೈ) 6,400 ಕೋಟಿ ರೂ. ನಿಗ ದಿಗೊಳಿಸಲಾಗಿದೆ. 249.96 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಒಟ್ಟು 62,659.12 ಕೋಟಿ ರೂ.ಗಳಲ್ಲಿ 60,908.22 ಕೋಟಿ ರೂ.ಗ ಳನ್ನು ಆರೋಗ್ಯ ಇಲಾಖೆಯ ನಿರ್ವಹಣೆಗೆ, 249.96 ಕೋಟಿ ರೂ.ಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿ ಸಲು ಹಾಗೂ 1,349.97 ಕೋಟಿ ರೂ.ಗಳನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ನಡಿ ಆರೋಗ್ಯ ಕೇಂದ್ರಗಳನ್ನು ತೆರೆಯಲು ಬಳಸಲಾಗುತ್ತದೆ.
ಲೋಕಪಾಲಕ್ಕೆ 100 ಕೋಟಿ ರೂ.: ಜನಸಾಮಾನ್ಯರ ತೀವ್ರ ಒತ್ತಾಸೆಯ ಮೇರೆಗೆ ಮಾರ್ಚ್ನಲ್ಲಿ ರೂಪು ಗೊಂಡ ಭ್ರಷ್ಟಾಚಾರ ನಿಗ್ರಹ ಸಂಸ್ಥೆ “ಲೋಕಪಾಲ’ಕ್ಕೆ ಈ ಸಾಲಿನ ಬಜೆಟ್ನಲ್ಲಿ 101.29 ಕೋಟಿ ರೂ. ಅನುದಾನ ನೀಡಲಾಗಿದೆ. ಜೊತೆಗೆ, ಕೇಂದ್ರೀಯ ವಿಚಕ್ಷಣ ಸಂಸ್ಥೆ (ಸಿವಿಸಿ)ಗೆ 35.55 ಕೋಟಿ ರೂ. ಎತ್ತಿಡಲಾಗಿದೆ. ಜೊತೆಗೆ, 2018-19ನೇ ಸಾಲಿನ ಮಧ್ಯಂತರ ಬಜೆಟ್ನಲ್ಲಿ ಲೋಕಪಾಲಕ್ಕೆ ನೀಡಲಾಗಿದ್ದ 4.29 ಕೋಟಿ ರೂ. ಅನುದಾನವನ್ನು ಮುಂದುವರೆಸುವುದಾಗಿ ನಿರ್ಮಲಾ ತಿಳಿಸಿದ್ದಾರೆ. ಸದ್ಯ ಪಂಚತಾರಾ ಹೋಟೆಲ್ ಒಂದರಲ್ಲಿ ಲೋಕಪಾಲ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಅದರದ್ದೇ ಕಚೇರಿ ಹೊಂದುವುದಕ್ಕಾಗಿಯೂ ಬಜೆಟ್ನಲ್ಲಿ ನೀಡಲಾಗಿರುವ ಸೌಲಭ್ಯ ಬಳಸಿಕೊಳ್ಳುವಂತೆ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.