ಈಗ ಡಿಜಿಟಲ್ ಘಟಿಕೋತ್ಸವ; 3ಡಿ ಅನಿಮೇಷನ್‌ನಿಂದ ಪ್ರತಿಸೃಷ್ಟಿ
ಮುಖ್ಯ ಅತಿಥಿ, ನೊಬೆಲ್ ವಿಜೇತ ಪ್ರೊ| ಹಾಲ್ದೇನ್‌ನಿಂದ ಮೆಚ್ಚುಗೆ
Team Udayavani, Aug 25, 2020, 6:00 AM IST
ಮುಂಬಯಿ: ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಫೇಸ್-ಟು-ಫೇಸ್ ಬೋಧನೆಯನ್ನು ತಪ್ಪಿಸಿ, ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಒತ್ತು ಕೊಟ್ಟ ದೇಶದ ಮೊದಲ ಉನ್ನತ ಶಿಕ್ಷಣ ಸಂಸ್ಥೆಯೆಂಬ ಹೆಗ್ಗಳಿಕೆ ಪಡೆದಿರುವ ಬಾಂಬೆ ಐಐಟಿ, 58ನೇ ಘಟಿಕೋತ್ಸವ ಸಮಾರಂಭವನ್ನು ಡಿಜಿಟಲ್ ರೂಪದಲ್ಲಿ ನಡೆಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ಯನ್ನಾಗಿ 2016ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕ ಪಡೆದಿದ್ದ ಬ್ರಿಟನ್ ಮೂಲದ ಪ್ರೊ| ಡಿ. ಹಾಲ್ದೇನ್ ಅವರು ಭಾಗವಹಿಸಿದ್ದರು. ಆ ಸಂಸ್ಥೆಯಿಂದ 2020-21ರ ಶೈಕ್ಷಣಿಕ ವರ್ಷದಲ್ಲಿ ಪದವಿ ಪಡೆದು ನಿರ್ಗಮಿಸಬೇಕಿದ್ದ ನೂರಾರು ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು. ರ್‍ಯಾಂಕ್ ವಿಜೇತರನ್ನು ಒಬ್ಬೊಬ್ಬರನ್ನಾಗಿ ವೇದಿಕೆ ಮೇಲೆ ಕರೆದು ರಾಷ್ಟ್ರಪತಿಯವರ ಚಿನ್ನದ ಪದಕವನ್ನೂ ಪ್ರದಾನ ಮಾಡಲಾಯಿತು. ಆದರೆ, ಇದೆಲ್ಲವೂ ನಡೆದಿದ್ದು ಕಂಪ್ಯೂಟರ್ ಪರದೆಯ ಮೇಲೆ.
ಎಲ್ಲ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲೇ ಕುಳಿತು ಅಲ್ಲಿಂದಲೇ ಆನ್‌ಲೈನ್ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ, ಕಂಪ್ಯೂಟರ್ ಪರದೆಯ ಮೇಲೆ ಎಲ್ಲ ವಿದ್ಯಾರ್ಥಿಗಳು ಕುಳಿತು ಘಟಿ ಕೋತ್ಸವದಲ್ಲಿ ಪಾಲ್ಗೊಂಡಿದ್ದಂತೆ 3ಡಿ ಅನಿಮೇಷನ್ ಮತ್ತು ಗ್ರಾಫಿಕ್ಸ್ ತಂತ್ರಜ್ಞಾನದ ಸಹಾಯದಿಂದ ಸಿದ್ಧಪಡಿಸಲಾಗಿತ್ತು. ವೇದಿಕೆಯ ಮೇಲೆ ಕೂರಬೇಕಿದ್ದ ಗಣ್ಯರ ಮುಖಭಾವವನ್ನೂ ಬಳಸಿ ತ್ರೀಡಿ ಅನಿಮೇಷನ್ ಮೂಲಕ ಅವರನ್ನು ಅಲ್ಲಿ ಪ್ರತಿ ಸೃಷ್ಟಿ ಮಾಡಲಾಗಿತ್ತು.
ರ್‍ಯಾಂಕ್ ವಿಜೇತರನ್ನು ಒಬ್ಬೊಬ್ಬರನ್ನಾಗಿ ವೇದಿಕೆ ಮೇಲೆ ಕರೆದಾಗ ಪ್ರೊ| ಹಾಲ್ದೇನ್ ಅವರು ರ್‍ಯಾಂಕ್ ವಿಜೇತರಿಗೆ ಪದಕ ಪ್ರದಾನ ಮಾಡಿದರು. “ವಿದ್ಯಾರ್ಥಿಗಳು’ ಶಿರಬಾಗಿ ನಮಿಸಿ ಪದಕಕ್ಕೆ ಕೊರಳೊಡ್ಡಿದರು. ಹಿನ್ನೆಲೆಯಲ್ಲಿ ಪ್ರೇಕ್ಷಕರ ಚಪ್ಪಾಳೆ ಸದ್ದು ಕೇಳಿಸುತ್ತಿತ್ತು. ಈ ರೀತಿಯ ಡಿಜಿಟಲ್ ಸಮಾರಂಭದ ಮೂಲಕ ಘಟಿಕೋತ್ಸವ ಪೂರ್ಣಗೊಳಿಸಲಾಯಿತು.
ಗಣ್ಯರ ಭಾಷಣಗಳನ್ನು ಮಾತ್ರ ಡಿಜಿಟಲ್ ಸ್ಟ್ರೀಮಿಂಗ್ ಮೂಲಕ ನೇರ ಪ್ರಸಾರ ಮಾಡಲಾಯಿತು. ಬ್ರಿಟನ್‌ನಿಂದಲೇ ಮಾತ ನಾಡಿದ ಹಾಲ್ದೇನ್, ಡಿಜಿಟಲ್ ಘಟಿಕೋತ್ಸವದಂಥ ಹೊಸ ಆವಿಷ್ಕಾರಗಳಿಗೆ ಭಾರತ ಸದ್ಯದಲ್ಲೇ ತವರೂರು ಆಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.