ಡಿಜಿಟಲ್ ಉದ್ಯಮ: ಭಾರತ ಸಾಧನೆ
ಚೀನಾ, ರಷ್ಯಾವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ ಭಾರತ
Team Udayavani, Sep 10, 2019, 5:47 AM IST
ನವದೆಹಲಿ: ಡಿಜಿಟಲ್ ವ್ಯಾಪಾರ ಮಾಡಲು ಪ್ರಶಸ್ತವಾದ ದೇಶಗಳ ಶ್ರೇಯಾಂಕ ಪಟ್ಟಿಯಲ್ಲಿ ಚೀನಾ ಮತ್ತು ರಷ್ಯಾಗಳನ್ನೂ ಹಿಂದಿಕ್ಕಿ ಭಾರತ ಎಲ್ಲರ ಹುಬ್ಬೇರುವಂತೆ ಮಾಡಿದೆ.
ವಿಶ್ವಬ್ಯಾಂಕ್ ತಯಾರಿಸುವ ಈ ಪಟ್ಟಿಯಲ್ಲಿ ಭಾರತ 2.17 ಅಂಕ ಗಳಿಸುವ ಮೂಲಕ 38ನೇ ಸ್ಥಾನಕ್ಕೇರಿದ್ದರೆ, 2.14 ಅಂಕ ಪಡೆದಿರುವ ಚೀನಾ 39ನೇ ಸ್ಥಾನ ಹಾಗೂ 1.96 ಅಂಕ ಗಳಿಸಿರುವ ರಷ್ಯಾ 42ನೇ ಸ್ಥಾನದಲ್ಲಿವೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಇದೇ ಶ್ರೇಯಾಂಕ ಪಟ್ಟಿಯಲ್ಲಿ ಭಾರತ, 23 ರಾಷ್ಟ್ರಗಳನ್ನು ಹಿಂದಿಕ್ಕಿ 77ನೇ ಸ್ಥಾನ ಪಡೆದಿತ್ತು. ಅಂದಹಾಗೆ, ಪ್ರಸಕ್ತ ವರ್ಷದ ಪಟ್ಟಿಯಲ್ಲಿ, ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಯು.ಕೆ. ದ್ವಿತೀಯ ಸ್ಥಾನದಲ್ಲಿದೆ. ಉದ್ಯಮಗಳಿಗೆ ಹೆಸರಾಗಿರುವ ಜಪಾನ್ 5ನೇ ಸ್ಥಾನದಲ್ಲಿದೆ. ”ಭಾರತದಲ್ಲಿ ಆನ್‌ಲೈನ್ ಹವ್ಯಾಸಿ ತಂತ್ರಜ್ಞರು, ಅದರಲ್ಲೂ ವಿಶೇಷವಾಗಿ ಸಾಫ್ಟ್ವೇರ್ ಸಂಬಂಧಿತ ತಂತ್ರಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜಗತ್ತಿನ ಪ್ರತಿ 10 ಹವ್ಯಾಸಿ ತಂತ್ರಜ್ಞರಲ್ಲಿ 4 ಮಂದಿ ಭಾರತದವರೇ ಆಗಿರುವುದರಿಂದ ಭಾರತದಲ್ಲಿ ಡಿಜಿಟಲ್ ಉದ್ಯಮಕ್ಕೆ ಹೆಚ್ಚಿನ ಒತ್ತು ಸಿಕ್ಕಿದಂತಾಗಿದೆ” ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.