ಅಂಚೆಯಲ್ಲಿ ಮೊದಲ ಬಾರಿಗೆ ಡಿಜಿಟಲ್ ಲಾಕರ್ ಸೇವೆ
Team Udayavani, Mar 12, 2020, 7:54 PM IST
ಕೋಲ್ಕತಾ: ಆಧುನಿಕ ಯುಗಕ್ಕೆ ತೆರೆದುಕೊಳ್ಳುತ್ತಿರುವ ಭಾರತೀಯ ಅಂಚೆ ಇಲಾಖೆಯು ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಡಿಜಿಟಲ್ ಲಾಕರ್ ಸೇವೆಯನ್ನು ಪರಿಚಯಿಸಿದೆ.
ಕೋಲ್ಕತಾದಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಕಲ್ಪಿಸಿದ್ದು, ನಬದಿಗಂತ ಐಟಿ ಪೋಸ್ಟ್ ಆಫೀಸ್ ಹಾಗೂ ನ್ಯೂಟೌನ್ ಶಾಖೆಯಲ್ಲಿ ಡಿಜಿಟಲ್ ಲಾಕರ್ ಸೇವೆ ಸಿಗಲಿದೆ. ಗುರುವಾರ ಸೇವೆಗೆ ಚಾಲನೆ ನೀಡಿದ ಪಶ್ಚಿಮ ಬಂಗಾಳ ವೃತ್ತದ ಪ್ರಧಾನ ಅಂಚೆ ಮುಖ್ಯಸ್ಥ ಗೌತಮ್ ಭಟ್ಟಾಚಾರ್ಯ, ಯುರೋಪಿನಲ್ಲಿ ಈ ವ್ಯವಸ್ಥೆ ಖ್ಯಾತಿ ಪಡೆದಿದೆ. ಭಾರತದಲ್ಲಿ ಪ್ರಪ್ರಥಮ ಬಾರಿಗೆ ಈ ಸೇವೆಯನ್ನು ಪರಿಚಯಿಸುತ್ತಿದ್ದು, ನೌಕರರು ಹಾಗೂ ಸಾಮಾನ್ಯ ಜನತೆಗೆ ಇದು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಡಿಜಿಟಲ್ ಲಾಕರ್ ಸೇವೆ:
ಗ್ರಾಹಕರಿಗೆ ಅಂಚೆ ಕಚೇರಿಯ ಡಿಜಿಟಲ್ ಲಾಕರ್‌ನ ನಿರ್ದಿಷ್ಟ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. ಗ್ರಾಹಕರಿಗೆ ತಲುಪಬೇಕಾದ ವಸ್ತು/ಸರಕು ಡಿಜಿಟಲ್ ಲಾಕರ್‌ನಲ್ಲಿ ಇರುತ್ತದೆ. ಬಳಿಕ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಒಟಿಪಿ ನಂಬರ್ ಕಳುಹಿಸಲಾಗುತ್ತದೆ. ಆ ವಸ್ತು ಏಳು ದಿನಗಳ ಕಾಲ ಕಚೇರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಯಾವಾಗ ಬೇಕಾದರೂ ಹೋಗಿ ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.