ರೈಲ್ವೇ ಬೋಗಿಯೇ ರೆಸ್ಟೋರೆಂಟ್! ಎಲ್ಲಿದೆ ಈ ರೈಲ್ವೇ ರೆಸ್ಟೋರೆಂಟ್..
Team Udayavani, Oct 26, 2022, 8:15 AM IST
ಜಲಪೈಗುರಿ: ರೈಲ್ವೇ ಕೋಚೊಂದನ್ನು ರೆಸ್ಟೋರೆಂಟ್‌ನ್ನಾಗಿ ಈಶಾನ್ಯ ರೈಲ್ವೆ ವಿಭಾಗ ಬದಲಿಸಿದೆ. ಇದರ ವಿಶೇಷವೆಂದರೆ ಟ್ರೈನ್ ಕೋಚೊಂದರಲ್ಲಿ ಕುಳಿತು ಹೊಟೇಲ್‌ನಲ್ಲಿ ಮಾಡಿದಂತೆ ಊಟ ಮಾಡುವ ವಿಶಿಷ್ಟ ಅನುಭವ ಗ್ರಾಹಕರಿಗೆ ಸಿಗುತ್ತಿದೆ.
ಇಂತಹದ್ದೊಂದು ಬದಲಾವಣೆ ನಡೆದಿರುವುದು ಪ.ಬಂಗಾಲದ ಸಿಲಿಗುರಿ ಜಿಲ್ಲೆಯ ಹೊಸ ಜಲಪೈಗುರಿ ರೈಲ್ವೇ ನಿಲ್ದಾಣದಲ್ಲಿ. ಈ ಕೋಚ್‌ನಲ್ಲಿ ಒಮ್ಮೆ 32 ಜನರು ಊಟ ಮಾಡಬಹುದು. ಇಲ್ಲಿ ಉತ್ತರ ಭಾರತದಿಂದ ಹಿಡಿದು ದ.ಭಾರತದವರೆಗೆ, ಮಾತ್ರವಲ್ಲ ಚೀನೀ ತಿನಿಸುಗಳೂ ಸಿಗಲಿವೆ. ಇದರಿಂದ ರೈಲ್ವೇಗೆ ಆದಾಯ ಬರುತ್ತಿರುವುದು ಮಾತ್ರವಲ್ಲ, ಟ್ರೈನ್‌ನಲ್ಲಿ ಊಟ ಮಾಡುವ ವಿಶಿಷ್ಟ ಅನುಭವವೂ ಸಿಗಲಿದೆ. ಇಲ್ಲಿ ಪ್ರಯಾಣಿಕರು ಮಾತ್ರವಲ್ಲ, ಹೊರಗಿನವರೂ ಬರಬಹುದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ರೈಲ್ವೆಯು ಸುಕ್ನಾ, ತಿಂಢಾರ, ಕರ್ಸೆಯಾಂಗ್, ಡಾರ್ಜಿಲಿಂಗ್‌ನಲ್ಲೂ ಇಂತಹದ್ದೇ ರೆಸ್ಟೋರೆಂಟ್‌ಗಳನ್ನು ಆರಂಭಿಸಲು ನಿರ್ಧರಿಸಿದೆ. ಈ ರೈಲ್ವೇ ಕೋಚ್‌ನ ಸ್ವರೂಪ ಬದಲಿಸಿದ ತತ್‌ಕ್ಷಣ ಅದನ್ನು ನಿರ್ವಹಿಸುವ ಪರವಾನಗಿಯನ್ನು ಖಾಸಗಿಯವರಿಗೆ ರೈಲ್ವೇ ಇಲಾಖೆ ಹಸ್ತಾಂತರಿಸಿದೆ.
ಮಹಾರಾಷ್ಟ್ರದ 4 ನಿಲ್ದಾಣಗಳಲ್ಲಿ “ರೆಸ್ಟೋರೆಂಟ್ ಆನ್ ವೀಲ್ಸ್’
ಮುಂಬಯಿ: ಮಹಾರಾಷ್ಟ್ರದ ನಾಲ್ಕು ರೈಲು ನಿಲ್ದಾಣಗಳಲ್ಲಿ “ರೆಸ್ಟೋರೆಂಟ್ ಆನ್ ವೀಲ್ಸ್’ (ರೈಲಿನಲ್ಲಿ ಹೊಟೇಲ್) ಆರಂಭಿಸಲು ಸೆಂಟ್ರಲ್ ರೈಲ್ವೇ ಮುಂದಾಗಿದೆ. ಈಗಾಗಲೇ ಈ ರೀತಿಯ 2 ರೆಸ್ಟೋರೆಂಟ್‌ಗಳು ಮಹಾರಾಷ್ಟ್ರದಲ್ಲಿವೆ. ಇದು ಹಳಿಗಳ ಮೇಲೆ ಇರುವ ಮಾರ್ಪಡಿಸದ ಕೋಚ್‌ಗಳಲ್ಲಿ ಆಹಾರ ಸೇವಿಸುವವರಿಗೆ ಅನನ್ಯ ಅನುಭವ ನೀಡುತ್ತದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಶುಲ್ಕ ರಹಿತ ಆದಾಯ ಯೋಜನೆಯಡಿ ಪುಣೆಯ ಅಕುರ್ಡಿ, ಚಿಂಚಾಡ್, ಬಾರಾಮತಿ ರೈಲು ನಿಲ್ದಾಣಗಳು ಹಾಗೂ ಸಾಂಗ್ಲಿ ಜಿಲ್ಲೆಯ ಮೀರಜ್ ರೈಲು ನಿಲ್ದಾಣದಲ್ಲಿ “ರೆಸ್ಟೋರೆಂಟ್ ಆನ್ ವೀಲ್ಸ್’ ಆರಂಭಿಸಲು ಸೆಂಟ್ರಲ್ ರೈಲ್ವೇ ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.