ರೈಲು ಟಿಕೆಟ್‌ಗೂ ಡಿಸ್ಕೌಂಟ್?
Team Udayavani, Jan 19, 2018, 8:24 AM IST
ಹೊಸದಿಲ್ಲಿ: ವಿಮಾನ ಪ್ರಯಾಣ ಮಾಡುವವರಿಗೆ 2-3 ತಿಂಗಳ ಮೊದಲೇ ಟಿಕೆಟ್ ಬುಕಿಂಗ್ ಮಾಡಿದ್ರೆ ರಿಯಾಯಿತಿ ಸಿಗುವಂತೆ, ರೈಲು ಟಿಕೆಟ್ ಪಡೆಯುವವರಿಗೂ ಮೊದಲೇ ಕಾಯ್ದಿರಿಸಿದರೆ ಟಿಕೆಟ್ ದರದಲ್ಲಿ ರಿಯಾಯಿತಿ ಸಿಕ್ಕಿದರೆ ಹೇಗಿರುತ್ತದೆ? ಇಂತಹುದೊಂದು ಶಿಫಾರಸನ್ನು ರೈಲ್ವೇ ಮಂಡಳಿ ರಚಿಸಿದ್ದ ಸಮಿತಿಯೊಂದು ಮಾಡಿದೆ. ಒಂದು ವೇಳೆ ಅದಕ್ಕೆ ಒಪ್ಪಿಗೆ ಸಿಕ್ಕಿದರೆ ಪ್ರಯಾಣಿಕರಿಗೆ ಲಾಭವಾಗಲಿದೆ.
ರೈಲು ಪ್ರಯಾಣಿಕರಿಗೂ ನಿಗದಿತ ದಿನ ಕ್ಕಿಂತ ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಿದರೆ ಶೇ.50ರಿಂದ ಶೇ.20ರಷ್ಟು ರಿಯಾಯಿತಿ ನೀಡಬಹುದು. ಆದರೆ ಎಷ್ಟು ಸೀಟ್‌ಗಳು ಖಾಲಿ ಉಳಿದಿರುತ್ತವೆ ಎನ್ನುವು ದರ ಮೇಲೆ ಡಿಸ್ಕೌಂಟ್ ನಿಗದಿ ಮಾಡಲಾಗು ತ್ತದೆ. ಚಾರ್ಟಿಂಗ್ ಮಾಡಿದ ಬಳಿಕ ಕಾಯ್ದಿರಿ ಸಿದ ಟಿಕೆಟ್‌ಗೂ ರಿಯಾಯಿತಿ ನೀಡಬಹುದು. ಅದನ್ನು ಎರಡು ದಿನಗಳಿಂದ 2 ಗಂಟೆಯ ವರೆಗೆ ಮಾಡಲು ಅವಕಾಶ ಕಲ್ಪಿಸಬಹುದು ಎಂದಿದೆ ಸಮಿತಿ.
ಅಷ್ಟೇ ಅಲ್ಲ, ಕೆಳಗಿನ ಬರ್ತ್ ಬೇಕು ಎಂದು ಆಯ್ಕೆ ಮಾಡುವ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆಯೂ ಶಿಫಾರಸು ಮಾಡಲಾಗಿದೆ. ಆದರೆ, ಈ ಸೀಟು ಗಳನ್ನು ಹಿರಿಯ ನಾಗರಿಕರು, ದಿವ್ಯಾಂಗರು, ಗರ್ಭಿಣಿಯರಿಗೆ ಯಾವುದೇ ಶುಲ್ಕ ವಿಲ್ಲದೇ ನೀಡಲು ಸಲಹೆ ನೀಡಿದೆ. ವಿಶೇಷ ಸಂದರ್ಭಗಳಲ್ಲಿ ಓಡುವ ರೈಲುಗಳಿಗೆ ಹೆಚ್ಚು ವರಿ ಶುಲ್ಕ ವಿಧಿಸುವಂತೆಯೂ ಸೂಚಿ ಸಿದೆ. ಅಂದರೆ ಮಧ್ಯರಾತ್ರಿಯಿಂದ ಬೆಳಗ್ಗೆ 4 ಗಂಟೆ ವರೆಗೆ, ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ವರೆಗೆ ಸಂಚರಿಸುವ ರೈಲುಗಳಿಗೆ ಈ ಮಾದರಿ ದರ ವಿಧಿಸಬಹುದು ಎಂದಿದೆ. ಸ್ಥಳೀಯವಾಗಿ ಪ್ರಯಾಣಿಕರ ಒತ್ತಡ ಇರು ವಾಗ ದರ ಹೆಚ್ಚು ಅಥವಾ ಕಡಿಮೆ ಮಾಡುವ ಅಧಿಕಾರ ಆಯಾ ವಿಭಾಗೀಯ ಮ್ಯಾನೇಜರ್‌ಗಳಿಗೆ ನೀಡಲೂ ಶಿಫಾರಸು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pension ನೀಡಿಕೆ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆ: ಸಚಿವ ಮಾಂಡವೀಯ
Lahore; ಭಗತ್ ಸಿಂಗ್ ಉಗ್ರವಾದಿ: ಕೋರ್ಟ್‌ಗೆ ಪಾಕ್ ವರದಿ
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
MUST WATCH
ಹೊಸ ಸೇರ್ಪಡೆ
Pension ನೀಡಿಕೆ ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆ: ಸಚಿವ ಮಾಂಡವೀಯ
Lahore; ಭಗತ್ ಸಿಂಗ್ ಉಗ್ರವಾದಿ: ಕೋರ್ಟ್‌ಗೆ ಪಾಕ್ ವರದಿ
Ripponpete: ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
Gangolli: ಪಿಸ್ತೂಲ್ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು
Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್.ಎಸ್.ಬಲ್ಲಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.