ಕೋವಿಡ್ ನಡುವೆಯೇ ವಿಜ್ಞಾನಿಗಳ ಆವಿಷ್ಕಾರ
Team Udayavani, Dec 29, 2020, 6:35 AM IST
ಒಂದೆಡೆ ಇಡೀ ವರ್ಷ ದೇಶವು ಕೋವಿಡ್ ವಿರುದ್ಧದ ಹೋರಾಟ ದಲ್ಲೇ ತನ್ನ ಬಹುಪಾಲು ಸಮಯವನ್ನು ಕಳೆಯಿತಾದರೂ, ಇದೇ ವೇಳೆಯಲ್ಲೇ ಭಾರತೀಯ ಸಂಶೋಧಕರು ವಿಶಿಷ್ಟ ಆವಿಷ್ಕಾರಗಳ ಮೂಲಕ ವಿಜ್ಞಾನ ಲೋಕಕ್ಕೆ ಕೊಡುಗೆ ನೀಡುತ್ತಲೇ ಇದ್ದರು ಎನ್ನುವುದು ವಿಶೇಷ.
ಈ ವರ್ಷದ ಭಾರತೀಯ ವಿಜ್ಞಾನಿಗಳು, ಸಂಶೋಧಕರ ಕೆಲ ಆವಿಷ್ಕಾರಗಳ ಪರಿಚಯ ಇಲ್ಲಿದೆ…
ಫೋಕಸ್ ಅಗತ್ಯವಿಲ್ಲದ ಲೆನ್ಸ್
ಕೆಮೆರಾ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರವೆನ್ನಿಸುವಂಥ ಸಂಶೋಧನೆಯನ್ನು ಭಾರತೀಯ ಮೂಲದ ವಿಜ್ಞಾನಿ ರಾಜೇಶ್ ಮೇನನ್ ಅಭಿವೃದ್ಧಿಪಡಿಸಿದ್ದಾರೆ. ಅವರು ಅಭಿವೃದ್ಧಿಪಡಿಸಿರುವ ಲೆನ್ಸ್ ಬಳಸಿದರೆ ಕೆಮರಾವನ್ನು ಫೋಕಸ್ ಮಾಡುವ ಅಗತ್ಯವೇ ಇರುವುದಿಲ್ಲ. ಎಲ್ಲÉ ವಸ್ತುಗಳನ್ನೂ ಒಂದೇ ಸಮಯದಲ್ಲಿ ಈ ಹಗುರವಾದ ಲೆನ್ಸ್ ಫೋಕಸ್ ಮಾಡಬಲ್ಲದು. ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಕೆಮೆರಾಗಳು, ಡಿಜಿಟಲ್ ಕೆಮೆರಾಗಳು, ಎಂಡೋಸ್ಕೋಪಿಯಂಥ ವೈದ್ಯಕೀಯದಲ್ಲಿ ಬಹಳ ಬದಲಾವಣೆ ತರಲಿದೆ ಎನ್ನಲಾಗುತ್ತದೆ.
ಮೊದಲ ಹೈಡ್ರೋಜನ್
ರಾಷ್ಟ್ರೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನ ಮಂಡಳಿ(ಸಿಎಸ್‌ಐಆರ್) ದೇಶದ ಮೊದಲ ಹೈಡ್ರೋಜನ್ ಚಾಲಿತ ಕಾರನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಈ ತಂತ್ರಜ್ಞಾನವು ವಿದ್ಯುತ್ ಶಕ್ತಿಯನ್ನು ಉತ್ಪಾ ಹೈಡ್ರೋಜನ್ ಮತ್ತು ಆಮ್ಲಜನಕ (ಗಾಳಿಯಿಂದ) ನಡುವಿನ ರಾಸಾಯನಿಕ ಪ್ರತಿಕ್ರಿಯೆಗಳನ್ನು ಬಳಸುತ್ತದಾದ್ದರಿಂದ, ಪಳೆಯುಳಿಕೆ ಇಂಧನಗಳ ಬಳಕೆಯನ್ನು ತಪ್ಪಿಸುತ್ತದೆ. ಅಲ್ಲದೇ ಈ ತಂತ್ರಜ್ಞಾನವು ಕೇವಲ ನೀರಿನ ಆವಿಯನ್ನು ಹೊರಸೂಸುವುದರಿಂದಾಗಿ ವಾಯುಮಾಲಿನ್ಯವೂ ಉಂಟಾಗುವುದಿಲ್ಲ.
ಕಪ್ಪುಕುಳಿಯ ಅಳತೆಗೋಲು
ಭಾರತೀಯ ವಿಜ್ಞಾನಿಗಳ ನೇತೃತ್ವದ ತಂಡವೊಂದು ಕಾಸ್ಮಿಕ್ ಎಕ್ಸ್‌ರೇ ಕಿರಣಗಳವಿಶಿಷ್ಟ ವ್ಯಾಪ್ತಿಯನ್ನು ಪತ್ತೆ ಪಚ್ಚುವ ಮೂಲಕ ಕಪ್ಪುಕುಳಿಗಳ ಸುತ್ತಲಿನ ಗಡಿಯನ್ನು ಗುರುತಿಸುವ ದಾರಿಯನ್ನು ಕಂಡುಹಿಡಿದಿದೆ. ಇದರಿಂದಾಗಿ ಬ್ರಹ್ಮಾಂಡದಲ್ಲಿರುವ ನ್ಯೂಟ್ರಾನ್ ನಕ್ಷತ್ರಗಳು ಹಾಗೂ ಇತರೆ ದ್ರವ್ಯ ರಾಶಿಯಿಂದ ಕಪ್ಪು ಕುಳಿಯನ್ನು ಪ್ರತ್ಯೆಕಿಸಿ ಅಳತೆ ಮಾಡಲು ಸಾಧ್ಯವಾಗುತ್ತದೆ.
ಚಂದ್ರನ ಮೇಲೆ ಇಟ್ಟಿಗೆಗೆ ದಾರಿ
ಭವಿಷ್ಯದಲ್ಲಿ ಚಂದ್ರನ ಮೇಲೆ ಮನುಷ್ಯನ ವಾಸಕ್ಕಾಗಿ ಕಟ್ಟಡ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶ ವಿವಿಧ ದೇಶಗಳಿಗಿದೆ. ಆದರೆ ಅದಕ್ಕಾಗಿ ಇಟ್ಟಿಗೆಗಳನ್ನು ಇಲ್ಲಿಂದ ಒಯ್ದರೆ ಬಹಳ ದುಬಾರಿಯಾಗುತ್ತದೆ. 0.45 ಗ್ರಾಂ. ವಸ್ತುಗಳನ್ನು ಭೂಮಿಯಿಂದ ಬಾಹ್ಯಾಕಾಶಕ್ಕೆ ಒಯ್ಯಲು 7.5 ಲಕ್ಷ ರೂಪಾಯಿ ಖರ್ಚಾಗುತ್ತದೆ! ಈ ಕಾರಣಕ್ಕಾಗಿಯೇ ಭಾರತೀಯ ವಿಜ್ಞಾನಸಂಸ್ಥೆ ಹಾಗೂ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲೆಯೇ ಇಟ್ಟಿಗೆನ್ನು ತಯಾರಿಸುವ ವಿಧಾನ ಕಂಡುಹಿಡಿದಿದ್ದಾರೆ! ಚಂದ್ರನ ಮಣ್ಣಗೆ ಒಂದು ತಳಿಯ ಬ್ಯಾಕ್ಟೀರಿಯಾ ಹಾಗೂ ಚವಳಿ ಕಾಯನ್ನು ಮಿಶ್ರಣ ಮಾಡಿದರೆ ಅದು ಇಟ್ಟಿಗೆಯಂತೆ ಗಟ್ಟಿಯಾಗಬಲ್ಲದು ಎನ್ನುವುದನ್ನು ಭಾರತೀಯ ವಿಜ್ಞಾನಿಗಳು ಸಂಶೋಧಿಸಿದ್ದಾರೆ.
ವ್ಯೋಮಮಿತ್ರ ಎಂಬ ರೊಬಾಟ್
ಇಸ್ರೋ, 2021ರ ಡಿಸೆಂಬರ್ ವೇಳೆಗೆ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಗಗನ್ ಯಾನ್ ಮಿಷನ್‌ಗೆ ಸಜ್ಜುಗೊಳ್ಳುತ್ತಿದೆ. ಇದರ ಭಾಗವಾಗಿ ಮೊದಲು ಲೇಡಿ ರೊಬಾಟ್‌ನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳಿಸಲಿದೆ! “ವ್ಯೋಮಮಿತ್ರ’ ಎಂಬ ಹೆಸರಿನ ಈ ರೋಬೋಟ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ರೂಪಿತವಾಗಿದ್ದು, ಬಾಹ್ಯಾಕಾಶ ನೌಕೆಯಲ್ಲಿ ಗಗನ ಯಾತ್ರಿಗಳೊಂದಿಗೆ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಬಾಹ್ಯಾಕಾಶದಲ್ಲಿ ಮಾನವ ಕ್ರಿಯೆಗಳನ್ನು ಅನುಸರಿಸುವ ಸಾಮರ್ಥ್ಯ ಈ ರೋಬೋಟ್ ಹೊಂದಿದೆ. ಎಲ್ಲ ವ್ಯವಸ್ಥೆಗಳೂ ಸರಿ ಇದೆಯೇ ಎಂದು ಪರೀಕ್ಷಿಸಲು ವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.