ಭಿನ್ನಮತ ಕರಗಿಸಿದ ಮದುವೆ
Team Udayavani, Sep 18, 2017, 7:30 AM IST
ಚೆನ್ನೈ: ತಮಿಳುನಾಡಿನ ರಾಜಕೀಯವೇ ಅಂಥಾದ್ದು. ಕೌಟುಂಬಿಕ ಕಾರ್ಯಕ್ರಮಗಳಲ್ಲಿಯೂ ರಾಜಕೀಯ ಲಾಭಶೋಧಿಸಿ, ಅದನ್ನು ಸಾಧಿಸುತ್ತಾರೆ. ಎಐಡಿಎಂಕೆಯ ಭಿನ್ನಮತೀಯ ನಾಯಕ ಟಿ.ಟಿ.ವಿ.ದಿನಕರನ್ ಬಣದ ಪ್ರಭಾವಿ ನಾಯಕ ಎನ್.ತಲವಿ ಸುಂದರಂ ಅವರನ್ನು ತಮ್ಮ ಬಳಿಗೆ ಸೆಳೆಯುವಲ್ಲಿ ಸಿಎಂ ಪಳನಿಸ್ವಾಮಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಅವರು ಬಳಕೆ ಮಾಡಿಕೊಂಡದ್ದು ಸುಂದರಂ ಪುತ್ರಿಯ ಮದುವೆ!
ದಿನಕರನ್ ಬಣದ 19 ಮಂದಿ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ಮೇಲೆ ವಿಶ್ವಾಸ ಕಳೆದುಕೊಂಡಿ ರುವುದಾಗಿ ಹೇಳಿ ದೂರು ಸಲ್ಲಿಸಲು ತೆರಳಬೇಕಾಗಿತ್ತು. ಆದರೆ ಕೆಲವೊಂದು ತಾತ್ವಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಸುಂದರಂ ಅವರು ಶಾಸಕರ ನಿಯೋಗದ ಜತೆಗೆ ತೆರಳಿರಲಿಲ್ಲ. ಇದರಿಂದ ಕ್ರುದ್ಧಗೊಂಡ ದಿನಕರನ್ ಹೊಸದಿಲ್ಲಿಯಲ್ಲಿ ತಮಿಳುನಾಡಿನ ಶಾಶ್ವತ ರಾಯಭಾರಿ ಸ್ಥಾನದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದಕ್ಕೆ ಹೆದರಿದ ಸುಂದರಂ ಅವರು ಮುಖ್ಯಮಂತ್ರಿ ಪಳನಿ ಬಳಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು. ಆದರೆ ಪಳನಿ ಅವರು ಅದನ್ನು ಸ್ವೀಕರಿಸದೆ ಹರಿದು ಹಾಕಿದರು.
ಅಷ್ಟೇ ಅಲ್ಲ, ನೀವು ಮೊದಲು ನಿಮ್ಮ ಪುತ್ರಿಯ ಮದುವೆಯ ಕೆಲಸದಲ್ಲಿ ನಿರತರಾಗಿ. ಸದ್ಯಕ್ಕೆ ಪಕ್ಷದ ಬೆಳವಣಿಗೆ ಬಗ್ಗೆ ಯೋಚಿಸುವುದು ಬೇಡ ಎಂದು ಹೇಳಿ ಕಳುಹಿಸಿದ್ದರು. ಜತೆಗೆ ಸೆ.8, 10ರಂದು ನಡೆದಿದ್ದ ವಿವಾಹ ಕಾರ್ಯಕ್ರಮಕ್ಕೆ ಸಿಎಂ ಪಳನಿ ಅವರು ಪನ್ನೀರ್ ಸೇರಿ ಸಂಪುಟ ಸದಸ್ಯರ ಸಮೇತ ತೆರಳಿ ಆಶೀರ್ವದಿಸಿದ್ದರು. ಇದರಿಂದ ಸಂತೋಷಗೊಂಡ ಸುಂದರಂ ಬಂಡಾ ಯದ ಯೋಚನೆ ಕೈಬಿಟ್ಟು ಸುಮ್ಮನಾಗಿ ದ್ದಾರೆ. ಅತ್ತಕಡೆ ದಿನಕರನ್‌ಗೆ ಮರ್ಮಾಘಾತ ನೀಡುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.