ಯೋಧರಿಗೆ ದೀಪಾವಳಿಯ ಕೊಡುಗೆ
Team Udayavani, Oct 20, 2017, 6:00 AM IST
ಹೊಸದಿಲ್ಲಿ: ಕುಟುಂಬ, ಬಂಧು, ಬಳಗ, ಆಪ್ತರನ್ನು ಬಿಟ್ಟು ಗಡಿಯಲ್ಲಿ ತಮ್ಮ ಜೀವ ಒತ್ತೆಯಿಟ್ಟು ಸೇವೆ ಸಲ್ಲಿಸುವ ಯೋಧರಿಗೆ ಕೇಂದ್ರ ದೂರಸಂಪರ್ಕ ಇಲಾಖೆ ಈ ಬಾರಿಯ ದೀಪಾವಳಿಗೆ ಎರಡು ಕೊಡುಗೆಗಳನ್ನು ಪ್ರಕಟಿಸಿದೆ.
ಗಡಿಯಲ್ಲಿರುವ ಸಶಸ್ತ್ರ ಪಡೆ ಯೋಧರು ಹಾಗೂ ಅರೆಸೇನಾಪಡೆ ಯೋಧರು, ಸ್ಯಾಟಲೈಟ್ ಫೋನ್‌ಗಳ ಮೂಲಕ ತಮ್ಮ ಬಂಧುಗಳೊಂದಿಗೆ ಮಾತನಾಡಲು ವಿಧಿಸಲಾಗುತ್ತಿದ್ದ ಕರೆಯ ದರವನ್ನು 5 ರೂ.ಗಳಿಂದ 1 ರೂ.ಗೆ ಇಳಿಸಲಾಗಿದೆ. ಅಲ್ಲದೆ, ಸ್ಯಾಟಲೈಟ್ ಫೋನ್ ಬಳಕೆಗೆ ಮಾಸಿಕವಾಗಿ ವಿಧಿಸಲಾಗುತ್ತಿದ್ದ 500 ರೂ. ಶುಲ್ಕವನ್ನೂ ರದ್ದುಗೊಳಿಸಲಾಗಿದೆ. ಬುಧವಾರ ಪತ್ರ ಕರ್ತರ ಜತೆ ಮಾತನಾಡಿದ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಈ ಎರಡು ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಈ ಎರಡೂ ಕೊಡುಗೆಗಳು ಗುರುವಾರ (ಅಕ್ಟೋಬರ್ 19)ದಿಂದಲೇ ಅನುಷ್ಠಾನಗೊಂಡಿವೆ.
2009-10ರಿಂದ ಗಡಿ ಭಾಗಗಳಲ್ಲಿನ ಸೈನಿಕರಿಗೆ ಸ್ಯಾಟಲೈಟ್ ಫೋನ್ ಮೂಲಕ ತಮ್ಮ ಬಂಧುಗಳಿಗೆ ಕರೆ ಮಾಡುವ ಸೌಕರ್ಯ ನೀಡಲಾಗಿದೆ. ಆರಂಭದಲ್ಲಿ ಈ ಸೇವೆಯನ್ನು ಟಾಟಾ ಟೆಲಿ ಸಂಸ್ಥೆ ನೀಡು ತ್ತಿತ್ತು. ಈಗ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಈ ಸೇವೆ ಒದಗಿಸುತ್ತಿದೆ. ಪ್ರತಿ 5 ವರ್ಷಗಳಿಗೊಮ್ಮೆ ಈ ದರವನ್ನು ಪರಿಷ್ಕರಿಸ ಲಾಗುತ್ತದೆ. ಕರೆ ದರ ಇಳಿಕೆಯಿಂದ ಇಲಾಖೆಗೆ ವಾರ್ಷಿಕವಾಗಿ 3ರಿಂದ 4 ಕೋಟಿ ರೂ. ಹೊರೆ ಬೀಳಲಿದ್ದು, ಇದನ್ನು ಸರಕಾರ ಭರಿಸುತ್ತದೆ ಎಂದು ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಅರುಣಾ ಸುಂದರರಾಜನ್ ತಿಳಿಸಿದ್ದಾರೆ.
ಫೋನ್‌ಗಿಲ್ಲ ಬಾಡಿಗೆ: ಪ್ರತಿ ತಿಂಗಳು ಸ್ಯಾಟಲೈಟ್ ಫೋನ್‌ಗೆ ನೀಡಬೇಕಾಗಿದ್ದ 500 ರೂ. ಬಾಡಿಗೆಯಿಂದಲೂ ಯೋಧರಿಗೆ ವಿನಾಯಿತಿ ನೀಡಲಾಗಿದೆ. ಇನ್ನು ಮುಂದೆ ಅವರು ಉಚಿತವಾಗಿ ಫೋನ್ ಬಳಸ ಬಹು ದಾಗಿದೆ. ಪ್ರಸ್ತುತದ ದೇಶದಲ್ಲಿ 2,500 ಸ್ಯಾಟಲೈಟ್ ಫೋನ್ ಸಂಪರ್ಕ ನೀಡಲಾಗಿದೆ.
ಪಾಕಿಸ್ಥಾನಕ್ಕೆ ಸುಷ್ಮಾ “ವೀಸಾ’ ಗಿಫ್ಟ್
ಹೊಸದಿಲ್ಲಿ: ಅರ್ಹತೆಯ ಆಧಾರದಲ್ಲಿ ಪಾಕಿಸ್ಥಾನ ಸಹಿತ ವೈದ್ಯಕೀಯ ನೆರವು ಯಾಚಿಸುತ್ತಿರುವವರಿಗೆ ವೀಸಾ ನೀಡಲಾಗುವುದು. ಇದು ದೀಪಾವಳಿಗೆ ನೀಡುತ್ತಿರುವ ಗಿಫ್ಟ್’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಪಾಕಿಸ್ಥಾನದ ಮಹಿಳೆ ಅಮ್ನಾ ಶಮೀನ್ ಅವರ ಅಪ್ಪ ಈಗಾಗಲೇ ದಿಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ನೋಡಲು ತಮಗೆ ವೀಸಾ ಕಲ್ಪಿಸಿ ಎಂದು ಶಮೀನ್ ಕೇಳಿಕೊಂಡಿದ್ದರು. ಅದಕ್ಕೆ ಗುರುವಾರ ಪ್ರತಿಕ್ರಿಯಿಸಿರುವ ಸುಷ್ಮಾ, ಪಾಕ್‌ನಲ್ಲಿರುವ ಭಾರತೀಯ ಹೈಕಮಿಷನ್ ಭೇಟಿಯಾಗುವಂತೆ ಸೂಚಿಸಿದ್ದು, ವೀಸಾ ಕಲ್ಪಿಸುವ ಭರವಸೆ ನೀಡಿದ್ದಾರೆ. ಬುಧವಾರ ವಷ್ಟೇ ಚಿಕಿತ್ಸೆ ಬಯಸಿದ್ದ ಮಗು ವಿನ ಕುಟುಂಬಕ್ಕೂ ವೀಸಾ ದಯಪಾಲಿಸಿದ್ದರು ಸುಷ್ಮಾ. ಈ ಮೂಲಕ ವೈದ್ಯಕೀಯ ನೆರವು ಬಯಸಿದ ಅನೇಕರ ಬಾಳಲ್ಲಿ ಬೆಳಕು ಮೂಡಿಸುವತ್ತ ಸುಷ್ಮಾ ಹೆಜ್ಜೆಯಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.