ದೀಪಾವಳಿಯೆಂದರೆ ಆತಂಕದ ಅಂತ್ಯ; ಕಾರ್ಗಿಲ್‌ನಲ್ಲಿ ಉಗ್ರವಾದ ಹೊಸಕಿಹಾಕಿದ ಯೋಧರು
Team Udayavani, Oct 25, 2022, 6:10 AM IST
ಕಾರ್ಗಿಲ್/ಹೊಸದಿಲ್ಲಿ: “ದೀಪಾವಳಿಯ ಅರ್ಥವೇ ಆತಂಕ(ಭಯೋತ್ಪಾದನೆ)ದ ಅಂತ್ಯ ಎಂದು. ಅದನ್ನು ಸಾಧ್ಯವಾಗಿಸಿದ್ದು ಕಾರ್ಗಿಲ್.’
ಇದು ಪ್ರಧಾನಿ ನರೇಂದ್ರ ಮೋದಿಯವರ ಮಾತು. ಸೋಮವಾರ ಕಾರ್ಗಿಲ್‌ನಲ್ಲಿ ಯೋಧ ರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿ ಮಾತ ನಾಡಿದ ಅವರು, “ಕಾರ್ಗಿಲ್‌ನಲ್ಲಿ ನಮ್ಮ ಸಶಸ್ತ್ರ ಪಡೆಯು ಭಯೋತ್ಪಾದನೆಯನ್ನು ಹೊಸಕಿ ಹಾಕಿತು. ಭಾರತೀಯ ಯೋಧರ ಶಕ್ತಿ-ಚೈತನ್ಯಕ್ಕೆ ನಾನು ತಲೆಬಾಗುತ್ತೇನೆ. ನಿಮ್ಮ ತ್ಯಾಗವು ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ. ಸಶಸ್ತ್ರ ಪಡೆಗಳು ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ಕಾರಣ, ದೇಶದ ಪ್ರತಿಯೊಬ್ಬ ನಾಗರಿಕನೂ ನೆಮ್ಮದಿಯಿಂದ ನಿದ್ರಿಸುತ್ತಾನೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಹಿಂದಿನ ಸರಕಾರಗಳ ವಿರುದ್ಧ ವಾಗ್ಧಾಳಿ ನಡೆಸಿದ ಮೋದಿ, “ಹಿಂದೆ ಅಧಿಕಾರ ದಲ್ಲಿದ್ದ ಸರಕಾರಗಳೆಲ್ಲ ದೇಶದ ಸಾಮರ್ಥ್ಯವನ್ನು ಹೀಗಳೆದವು. ಅಭಿವೃದ್ಧಿಯನ್ನು ಸೀಮಿತಗೊಳಿಸಿ ದವು. ಆದರೆ ಆ ಲೋಪಗಳು, ಕೊರತೆಗಳನ್ನೆಲ್ಲ ನಮ್ಮ ಸರಕಾರ ತೊಡೆದುಹಾಕಿದೆ. ದೇಶವು ಈಗ ತನ್ನ ಆಂತರಿಕ ಹಾಗೂ ಬಾಹ್ಯ ಶತ್ರುಗಳನ್ನು ಪರಿ ಣಾಮಕಾರಿಯಾಗಿ ಎದುರಿಸುತ್ತಿದೆ. ಭ್ರಷ್ಟಾ ಚಾರದ ವಿರುದ್ಧದ ಯುದ್ಧವೂ ನಿರ್ಣಾಯಕ ಹಂತ ತಲುಪಿದೆ’ ಎಂದೂ ಹೇಳಿದ್ದಾರೆ. ರಕ್ಷಣ ಸಾಮಗ್ರಿಗಳ ಆಮದುದಾರ ರಾಷ್ಟ್ರವಾಗಿದ್ದ ಭಾರತ ಈಗ ರಫ್ತುದಾರ ರಾಷ್ಟ್ರವಾಗಿದೆ ಎಂದೂ ಹೇಳುವ ಮೂಲಕ ದೇಶವು ಆತ್ಮನಿರ್ಭರತೆಯನ್ನು ಸಾಧಿಸುತ್ತಿರುವುದನ್ನು ಮೋದಿ ಒತ್ತಿಹೇಳಿದ್ದಾರೆ.
ಯೋಧರೊಂದಿಗೆ ಮೋದಿ ದೀಪಾವಳಿ: 2014 ರಲ್ಲಿ ಸಿಯಾಚಿನ್, 2015ರಲ್ಲಿ ಪಂಜಾಬ್, 2016ರಲ್ಲಿ ಚೀನ ಗಡಿ, 2017ರಲ್ಲಿ ಕಾಶ್ಮೀರದ ಗುರೇಜ್ ವಲಯ, 2018ರಲ್ಲಿ ಉತ್ತರಾಖಂಡದ ಹಾರ್ಸಿಲ್, 2019ರಲ್ಲಿ ಜಮ್ಮು-ಕಾಶ್ಮೀರದ ರಜೌರಿ ಯಲ್ಲಿ ಪ್ರಧಾನಿ ಮೋದಿ ದೀಪಾವಳಿ ಆಚರಿಸಿ ದ್ದರು. ಕಳೆದ ವರ್ಷ ಜಮ್ಮು-ಕಾಶ್ಮೀರದ ನೌಶೆರಾ ವಲಯದಲ್ಲಿ ಯೋಧರೊಂದಿಗೆ ಹಬ್ಬ ಆಚರಿಸಿದ್ದರು.
“ಮಾ ತುಜೇ ಸಲಾಂ’ ಹಾಡಿದ ಮೋದಿ: ಪ್ರಧಾನಿ ಮೋದಿ ಕಾರ್ಗಿಲ್‌ನಲ್ಲಿ ಭದ್ರತಾ ಪಡೆಗಳ ಕಾರ್ಯಕ್ರಮ ವೀಕ್ಷಣೆ ಆರಂಭಿಸುತ್ತಿದ್ದಂತೆ, “ವಂದೇ ಮಾತರಂ’, “ಭಾರತ್ ಮಾತಾ ಕಿ ಜೈ’ ಎಂಬ ಉದ್ಘೋಷಗಳು ಮುಗಿಲುಮುಟ್ಟಿದವು. ಯೋಧರು ಸಂಗೀತ ಉಪಕರಣಗಳನ್ನು ಬಳಸಿಕೊಂಡು ಹಾಡುವಾಗ ಅವರ ಮಧ್ಯೆ ನಿಂತು ಪ್ರಧಾನಿ ಮೋದಿ ಅವರೂ “ಮಾ ತುಜೇ ಸಲಾಂ’ ಹಾಡನ್ನು ಹಾಡಿದ್ದು ಕಂಡುಬಂತು.
ಟೆಕ್ಸಾಸ್‌ನಲ್ಲಿ ಸಂಭ್ರಮ: ಅಮೆರಿಕದ ಟೆಕ್ಸಾಸ್‌ನ ಗವರ್ನರ್ ಗ್ರೆಗ್ ಅಬೋಟ್ ಅವರು ಸೋಮ ವಾರ ಆಸ್ಟಿನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅದ್ದೂರಿ ಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಭಾರ ತೀಯ- ಅಮೆರಿಕನ್ ಸಮುದಾಯದೊಂದಿಗೆ ಹಬ್ಬ ಆಚರಣೆ ಮಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಬ್ಬದ ಶುಭಾಶಯ ಹೇಳಿದ್ದಾರೆ. ಅಬೋಟ್ ಮತ್ತು ಪತ್ನಿ ಸೆಸಿಲಿಯಾ ಅವರು ಭಾರತದ ಸಾಂಪ್ರದಾಯಿಕ ಉಡುಗೆ ತೊಟ್ಟೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗಡಿಯಲ್ಲಿ ಹಬ್ಬ ಆಚರಿಸಿಕೊಂಡ ರಕ್ಷಣ ಪಡೆಗಳ ಮುಖ್ಯಸ್ಥರು
ರಕ್ಷಣ ಪಡೆಗಳ ಮುಖ್ಯಸ್ಥ ಜ. ಅನಿಲ್ ಚೌಹಾಣ್, ಭೂಸೇನಾ ಮುಖ್ಯಸ್ಥ ಜ. ಮನೋಜ್ ಪಾಂಡೆ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರೂ ಸೋಮವಾರ ವಿವಿಧ ಗಡಿಗಳಲ್ಲಿ ದೀಪದ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜತೆಗೆ ಸೇನಾ ಸನ್ನದ್ಧತೆಯ ಪರಿಶೀಲನೆಯನ್ನೂ ನಡೆಸಿದ್ದಾರೆ.
21 ವರ್ಷಗಳ ಬಳಿಕ ಅಚ್ಚರಿಯ ಭೇಟಿ!
ಯೋಧರೊಂದಿಗೆ ದೀಪಾವಳಿ ಆಚರಣೆಗೆಂದು ಕಾರ್ಗಿಲ್‌ಗೆ ತೆರಳಿ ರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಚ್ಚರಿಯೊಂದು ಕಾದಿತ್ತು! ಅಲ್ಲಿ ಯುವ ಸೇನಾಧಿಕಾರಿ ಮೇಜರ್ ಅಮೃತ್ ಎಂಬವರು ಮೋದಿಯವರಿಗೆ ಫೋಟೋ ವೊಂದನ್ನು ಉಡು ಗೊರೆಯಾಗಿ ನೀಡಿದರು. ಮೋದಿ ಗುಜರಾತ್ ಸಿಎಂ ಆಗಿದ್ದಾಗ ಯಾವುದೋ ಸೈನಿಕ ಶಾಲೆಯಲ್ಲಿ ಅವ ರಿಂದ ವಿದ್ಯಾರ್ಥಿಗಳಿಬ್ಬರು ಮೆಡಲ್ ಸ್ವೀಕರಿಸುತ್ತಿದ್ದ ಫೋಟೋವದು.
21 ವರ್ಷಗಳ ಹಿಂದೆ ಅಂದರೆ 2001ರಲ್ಲಿ ಮೋದಿ ಅವರು ಗುಜರಾತ್‌ನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಲ್ಲಿನ ಸೈನಿಕ ಶಾಲೆಗೆ ಭೇಟಿ ನೀಡಿದ್ದರು. ಆಗ ಮೇ.ಅಮೃತ್ ಅವರು ಅದೇ ಶಾಲೆಯ ವಿದ್ಯಾರ್ಥಿ. ಅಂದು ತಮಗೆ ಮೋದಿಯವರು ಪದಕ ಪ್ರದಾನ ಮಾಡಿದ ಫೋಟೋ ವನ್ನು ಹಾಗೆಯೇ ಎತ್ತಿಟ್ಟು, ಅದಕ್ಕೆ ದೊಡ್ಡ ಫ್ರೆàಮ್ ಹಾಕಿ ಸೋಮ ವಾರ ಅದನ್ನು ಮೋದಿಯವರಿಗೆಯೇ ಉಡುಗೊರೆಯಾಗಿ ನೀಡಿದ್ದಾರೆ ಮೇಜರ್ ಅಮೃತ್. 21 ವರ್ಷಗಳ ಬಳಿಕ ಕಾರ್ಗಿಲ್‌ನಲ್ಲಿ ಮೋದಿ-ಮೇಜರ್ ಅಮೃತ್ ಭೇಟಿ ನಡೆದಿದ್ದು, ಈ ಭಾವನಾತ್ಮಕ ಕ್ಷಣಕ್ಕೆ ಹಲವು ಯೋಧರು ಸಾಕ್ಷಿಯಾದರು.
ಗಡಿಯಲ್ಲಿ ಸಿಹಿ ವಿನಿಮಯ
ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತದ ಬಿಎಸ್‌ಎಫ್ ಮತ್ತು ಪಾಕಿಸ್ಥಾನದ ರೇಂಜರ್‌ಗಳು ದೀಪಾವಳಿ ನಿಮಿತ್ತ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಇನ್ನು ಪಶ್ಚಿಮ ಬಂಗಾಲದ ಫುಲ್ಬರಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಸೇನೆಗಳು ಕೂಡ ಸಿಹಿ ವಿನಿಮಯ ಮಾಡಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.