Delhi;ನಿಷೇಧದ ಹೊರತಾಗಿಯೂ ಪಟಾಕಿಗಳ ಸದ್ದು: ಆಪ್ vs ಬಿಜೆಪಿ
ಪರಿಸರವಾದಿಗಳ ಆಕ್ರೋಶ... ಹಿಂದೂಗಳಿಗೆ ಹಬ್ಬ ಆಚರಿಸುವ ಹಕ್ಕಿಲ್ಲವೇ ಎಂದು ಪ್ರಶ್ನೆ
Team Udayavani, Nov 13, 2023, 4:43 PM IST
ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ಮಿತಿ ಮೀರಿರುವ ವಾಯುಮಾಲಿನ್ಯ ತಡೆಗಟ್ಟಲು ದೀಪಾವಳಿ ವೇಳೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿದ್ದರೂ ಕೆಲವೆಡೆ ಪಟಾಕಿಗಳನ್ನು ಸಿಡಿಸಲಾಗಿದ್ದು, ಇದು ಆಡಳಿತ ಪಕ್ಷ ಆಮ್ ಆದ್ಮಿ ಪಾರ್ಟಿ ಮತ್ತು ವಿಪಕ್ಷ ಬಿಜೆಪಿ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾಗಿದೆ.
ದೆಹಲಿ, ನೋಯ್ಡಾ ಮತ್ತು ಗುರುಗ್ರಾಮ್ ಮತ್ತು ಎನ್‌ಸಿಆರ್‌ನ ಇತರ ಪ್ರದೇಶಗಳಲ್ಲಿ ಜನರು ಪಟಾಕಿ ಸಿಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಪಾರ್ಕ್‌ಗಳಲ್ಲಿ ಪಟಾಕಿ ಸಿಡಿಸಲು ಜಮಾಯಿಸುತ್ತಿರುವುದು ಕಂಡುಬಂದಿದೆ. ಇನ್ನು ಹಲವರು ಸುಪ್ರೀಂ ಕೋರ್ಟ್ ಹೇರಿರುವ ನಿಷೇಧ ಮತ್ತು ಅದನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ವೈಫಲ್ಯವನ್ನು ಪ್ರಶ್ನಿಸಿದ್ದಾರೆ.
ಬೇರಿಯಂ ಹೊಂದಿರುವ ಪಟಾಕಿಗಳನ್ನು ನಿಷೇಧಿಸುವ ಆದೇಶ ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ಸ್ಪಷ್ಟಪಡಿಸಿತ್ತು. ಸೆಪ್ಟೆಂಬರ್‌ನಲ್ಲಿ, ದೆಹಲಿ ಸರಕಾರದ ಪಟಾಕಿ ನಿಷೇಧ ಕ್ರಮದ ವಿಚಾರದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯ ನಿರಾಕರಿಸಿತ್ತು, ಜನರ ಆರೋಗ್ಯ ಮುಖ್ಯ ಎಂದು ಹೇಳಿತ್ತು.
ದೆಹಲಿ ಭಾನುವಾರ ಸ್ಪಷ್ಟವಾದ ಆಕಾಶ ಮತ್ತು ಹೇರಳವಾದ ಬಿಸಿಲಿನೊಂದಿಗೆ ಎಂಟು ವರ್ಷಗಳಲ್ಲಿ ಅತ್ಯುತ್ತಮ ದೀಪಾವಳಿ ದಿನದ ಗಾಳಿಯ ಗುಣಮಟ್ಟವನ್ನು ದಾಖಲಿಸಿತ್ತು. AQI ಸಂಜೆ 4 ಗಂಟೆಗೆ 218 ರಷ್ಟಿತ್ತು, ಕನಿಷ್ಠ ಮೂರು ವಾರಗಳಲ್ಲಿ ಉತ್ತಮವಾಗಿತ್ತು, ಕಳೆದ ವಾರ ಮಳೆಯು ಬೆಳಕಿನ ಹಬ್ಬಕ್ಕೆ ಸ್ವಲ್ಪ ಮುಂಚಿತವಾಗಿ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆಯನ್ನು ತರಲು ಕಾರಣವಾಗಿತ್ತು. ಕಳೆದ ವರ್ಷ ದೀಪಾವಳಿಯಂದು ದೆಹಲಿಯಲ್ಲಿ AQI 312 ದಾಖಲಾಗಿತ್ತು.
ಬಿಜೆಪಿ ಮತ್ತು ಆಪ್ ವಾಗ್ಸಮರ
ಪಟಾಕಿ ಸಿಡಿಸುವುದರಿಂದ ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಿದೆ, ಹೆಚ್ಚು ಜನ ಪಟಾಕಿ ಸಿಡಿಸಿಲ್ಲ ಆದರೆ ಕೆಲವೆಡೆ ಗುರಿ ಇಟ್ಟುಕೊಂಡು ಬಿಜೆಪಿ ನಾಯಕರು ಪ್ರಚೋದನೆ ನೀಡುತ್ತಿದ್ದ ರೀತಿಯನ್ನು ನೋಡಬಹುದು ಎಂದು ದೆಹಲಿ ಸಚಿವ ಗೋಪಾಲ್ ರಾಯ್ ಆರೋಪಿಸಿದ್ದಾರೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಪ್ರತಿಕ್ರಿಯಿಸಿ “ಗೋಪಾಲ್ ರಾಯ್ ಅವರು ಪರಿಸರ ಸಚಿವರಲ್ಲ ಎಂದು ಅನೇಕ ಬಾರಿ ಅನಿಸುತ್ತದೆ, ಅವರು ವಕ್ತಾರರಂತೆ ಮಾತನಾಡುತ್ತಾರೆ, ಮಾಲಿನ್ಯವನ್ನು ತಡೆಯಲು ಅವರು ಏನು ಮಾಡಿದರು ಎಂದು ಹೇಳಬೇಕು. ನೀವು ದೆಹಲಿಯ ಮಾಲಿನ್ಯದಲ್ಲಿ ನೀವು ಧ್ರುವೀಕರಣದ ರಾಜಕೀಯ ಮಾಡುತ್ತಿದ್ದೀರಿ, ನೀವು ನಿರ್ದಿಷ್ಟ ವರ್ಗವನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೀರಿ. ನವೆಂಬರ್ 4 ರಂದು ಆನಂದ್ ವಿಹಾರದಲ್ಲಿ AQI 498 ಆಗಿತ್ತು, ಇಂದು ಅದು 240 ಆಗಿದೆ. ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಮಾಲಿನ್ಯದ ಮುಖ್ಯ ಸಮಸ್ಯೆಗಳನ್ನು ಪರಿಹರಿಸದ ಹೊರತು ಮತ್ತು ಪಂಜಾಬ್‌ನಲ್ಲಿ ಕೃಷಿ ತಾಜ್ಯ ಉರಿಸುತ್ತಿರುವುದನ್ನು ತೊಡೆದುಹಾಕಲು ಪ್ರಯತ್ನಿಸದ ಹೊರತು ದೆಹಲಿಯಲ್ಲಿನ ಸಮಸ್ಯೆ ಮುಂದುವರಿಯುತ್ತದೆ ಎಂದು ತಿರುಗೇಟು ನೀಡಿದ್ದಾರೆ.
#WATCH | People burst firecrackers in Delhi on the occasion of #Diwali
Visuals from Punjabi Bagh. pic.twitter.com/h6oM71vR1t
— ANI (@ANI) November 12, 2023
ಇನ್ನೊಂದೆಡೆ ಹಲವರು ಹಿಂದೂಗಳ ಪ್ರಮುಖ ಹಬ್ಬ ದೀಪಾವಳಿಯನ್ನು ಪಟಾಕಿ ಸಿಡಿಸಿ ಸಂಭ್ರಮಿಸುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.