ಡಿಎಂಕೆ ಶಾಸಕನ ಕಾರಿಗೆ ಲಾರಿ ಢಿಕ್ಕಿ; ಪವಾಡ ಸದೃಶ ಪಾರು
Team Udayavani, Sep 9, 2017, 3:33 PM IST
ಕೊಯಮುತ್ತೂರು : ಸಿಂಗನಲ್ಲೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಿಎಂಕೆ ಶಾಸಕ ಎನ್ ಕಾರ್ತಿಕ್ ಅವರ ಕಾರಿಗೆ ತಿರುಚ್ಚಿ ರಸ್ತೆಯಲ್ಲಿ ಲಾರಿಯೊಂದು ಢಿಕ್ಕಿಯಾದರೂ ಕಾರ್ತಿಕ್ ಅವರು ಪವಾಡ ಸದೃಶವಾಗಿ ಯಾವುದೇ ಗಾಯಗಳಿಲ್ಲದೆ ಪಾರಾದರೆಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆಯ ಜಡಿ ಮಳೆಗೆ ನೀರಿನಲ್ಲಿ ಮುಳುಗಿದ್ದ ಪ್ರದೇಶಗಳ ವೀಕ್ಷಣೆಗೆ ತೆರಳಿ ಮರಳುತ್ತಿದ್ದ ವೇಳೆ ಕಾರ್ತಿಕ್ ಅವರ ಕಾರಿಗೆ ಲಾರಿ ಢಿಕ್ಕಿಯಾಗಿದೆ.
ಕಾರು ಪರ್ಕ್ ಸ್ಕೂಲ್ ಜಂಕ್ಷನ್ ತಲುಪುತ್ತಿದ್ದಂತೆ ಧಾವಿಸಿ ಬರುತ್ತಿದ್ದ ಲಾರಿ, ಕಾರ್ತಿಕ್ ಕಾರಿಗೆ ಢಿಕ್ಕಿಯಾಗಿ ಸುಮಾರು 10 ಅಡಿ ದೂರಕ್ಕೂ ಅದನ್ನು ಎಳೆದುಕೊಂಡು ಹೋಯಿತು.
ಈ ಅವಘಡದಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ