ದಾಳಿಕೋರ ಕಾಸರಗೋಡು ನಿವಾಸಿ! DNA ಪರೀಕ್ಷೆಯಲ್ಲಿ ದೃಢವಾಯ್ತು ಗುರುದ್ವಾರ ದಾಳಿಕೋರನ ಗುರುತು
Team Udayavani, Aug 16, 2020, 5:45 AM IST
ಹೊಸದಿಲ್ಲಿ: ಮಾರ್ಚ್ 15ರಂದು ಅಫ್ಘಾನಿಸ್ಥಾನದ ಕಾಬೂಲ್ನ ಗುರುದ್ವಾರದಲ್ಲಿ ನಡೆದ ಆತ್ಮಾಹುತಿ ದಾಳಿಯ ದಾಳಿಕೋರ ಕೇರಳ ನಿವಾಸಿ ಮುಹಮ್ಮದ್ ಮುಹ್ಸಿನ್ ಎಂಬುದು ದೃಢಪಟ್ಟಿದೆ. ಹೊಸದಿಲ್ಲಿಯ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ ನಡೆಸಿದ ಆತನ ಡಿಎನ್ಎ ಪರೀಕ್ಷೆಯಲ್ಲಿ ಈ ಅಂಶ ದೃಢವಾಗಿ ರುವುದಾಗಿ ಮೂಲಗಳು ಹೇಳಿವೆ. ಪರೀಕ್ಷೆಯ ವರದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ)ಗೆ ಹಸ್ತಾಂತರಿಸಿರುವುದಾಗಿಯೂ ಮೂಲಗಳು ಮಾಹಿತಿ ನೀಡಿವೆ.
ಆಫ್ಘನ್ ದಾಳಿಯಲ್ಲಿ ಕೇರಳ ಮೂಲದ ಉಗ್ರರ ಕೈವಾಡವಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮುಹ್ಸಿನ್ನ ತಾಯಿ ಮೈಮುನಾ ಅಬ್ದುಲ್ಲಾ ಅವರ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ನಂತರ ಆಫ್ಘನ್ ಅಧಿಕಾರಿಗಳಿಂದ ಆತ್ಮಾಹುತಿ ದಾಳಿಕೋರರ ರಕ್ತದ ಮಾದರಿಗಳನ್ನು ತರಿಸಿ, ಪರೀಕ್ಷೆ ಮಾಡ ಲಾಗಿತ್ತು. ಡಿಎನ್ಎ ಪರೀಕ್ಷೆಯಲ್ಲಿ ಮೈಮುನಾ ಪುತ್ರನೇ ದಾಳಿಕೋರ ಎಂಬುದು ದೃಢಪಟ್ಟಿದೆ.
ಕಾಸರಗೋಡಿನ ಸಮೀಪದ ಗ್ರಾಮವೊಂದರಲ್ಲಿ 1991ರಲ್ಲಿ ಜನಿಸಿದ ಮುಹ್ಸಿನ್ ಇತ್ತೀಚೆಗೆ ಆಫ್ಘನ್ನಲ್ಲಿನ ಭಾರತೀಯ ಉಗ್ರರ ಗುಂಪಿನೊಂದಿಗೆ ಕೈಜೋಡಿಸಿದ್ದ. 27 ಮಂದಿಯನ್ನು ಬಲಿ ಪಡೆದ ಗುರುದ್ವಾರ ದಾಳಿಯ ಬಳಿಕ, ಐಸಿಸ್ ಉಗ್ರ ಸಂಘಟನೆಯು ದಾಳಿಕೋರರ ಫೋಟೋಗಳನ್ನು ಬಿಡುಗಡೆ ಮಾಡಿತ್ತು. ಆಗ ಮುಹ್ಸಿನ್ನ ಗುರುತು ಪತ್ತೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.