ಖಾಸಗಿತನದ ಹೆಸರಲ್ಲಿ ಸಂಶೋಧನೆಗೆ ಬ್ರೇಕ್ ಬೇಡ: ಪ್ರಸಾದ್
Team Udayavani, Jan 12, 2018, 7:10 AM IST
ಹೊಸದಿಲ್ಲಿ: ಆಧಾರ್‌ನಲ್ಲಿರುವ ಸಾರ್ವಜನಿಕರ ಖಾಸಗಿ ಮಾಹಿತಿ ರಕ್ಷಣೆ ಪಾಲನೆಯಾಗುತ್ತಿಲ್ಲ ಎಂಬ ವಿವಾದಗಳು ಕೇಳಿ ಬರುತ್ತಿರುವಂತೆಯೇ “ಖಾಸಗಿತನದ ರಕ್ಷಣೆ ನೆಪದಲ್ಲಿ ಹೊಸತನದ ಸಂಶೋಧನೆಯನ್ನು ನಿಲ್ಲಿಸಲಾಗದು’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ. ಮಾಹಿತಿ ರಕ್ಷಣೆಗಾಗಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ವಚ್ಯುìವಲ್ ಐಡಿ ಜಾರಿಗೆ ತಂದಿರುವ ಬಗ್ಗೆ ಮಾತನಾಡಿರುವ ಅವರು ಇದೊಂದು ಉತ್ತಮ ಕ್ರಮ. ಜನರಿಂದ ಸಂಗ್ರಹಿಸಲಾಗಿರುವ ಅಂಗೈ ಗುರುತು, ಕಣ್ಣಿನ ಅಂಶಗಳು ಸೇರಿದಂತೆ ಎಲ್ಲ ಮಾಹಿತಿಯೂ ಸುರಕ್ಷಿತವಾಗಿದೆ. ಪ್ರಾಧಿಕಾರ ಹೊಂದಿರುವ ಮಾಹಿತಿ ರಕ್ಷಣಾ ವ್ಯವಸ್ಥೆ ಅತ್ಯಂತ ಉನ್ನತ ತಂತ್ರಜ್ಞಾನದ್ದು ಎಂದು ಕೇಂದ್ರ ಸಚಿವ ಪ್ರತಿಪಾದಿಸಿದ್ದಾರೆ. ಯಾವುದೇ ಕಾರಣದಿಂದಲೂ ಅದನ್ನು ಸೋರಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ಪ್ರಯಾಣ ಮಾಡುವುದು, ರೆಸ್ಟಾರೆಂಟ್‌ಗಳಲ್ಲಿ ಹೋಗಿ ಊಟ ಮಾಡುವುದು ವೈಯಕ್ತಿಕ ಆಯ್ಕೆ. ಆದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣ ಮಾಡಿದಾಗ ಅದರಲ್ಲಿರುವ ಎಲ್ಲರ ವರ್ತನೆಗಳೂ ದಾಖಲಾಗುತ್ತವೆ. ಆದರೆ ಖಾಸಗಿತನದ ಮಾಹಿತಿ ಸೋರಿಕೆಯಾಗುತ್ತದೆ ಎಂಬ ಅಂಶವನ್ನು ಅಗತ್ಯಕ್ಕಿಂತ ಹೆಚ್ಚು ಬಿಂಬಿಸುವುದು ಬೇಡ. ದೇಶದಲ್ಲಿ ಹೊಸತನದ ಸಂಶೋಧನೆಗಳು ಡಿಜಿಟನಲ್ ಕ್ಷೇತ್ರದ ಕ್ರಾಂತಿಯಿಂದಾಗಿ ನಡೆಯುತ್ತವೆ. ಖಾಸಗಿತನವನ್ನು ನೆಪವಾಗಿಟ್ಟುಕೊಂಡು ಅದನ್ನು ಕೊಲ್ಲುವ ಪ್ರಯತ್ನಗಳು ಬೇಡ’ ಎಂದು ನವದೆಹಲಿಯಲ್ಲಿ ಆಯೋಜಿಸಲಾದ ಆರನೇ ವಾರ್ಷಿಕ ಅಂತಾರಾಷ್ಟ್ರೀಯ ವಾಣಿಜ್ಯ ಸಮ್ಮೇಳನದಲ್ಲಿ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ. ಆಧಾರ್ ಇದ್ದ ಕಾರಣದಿಂದಲೇ ದೇಶದ ವಿವಿಧ ಕಾಲೇಜುಗಳಲ್ಲಿರುವ ನಕಲಿ ಪ್ರಾಧ್ಯಾಪಕರನ್ನು ಪತ್ತೆ ಮಾಡಲು ನೆರವಾಯಿತು ಎಂದು ಹೇಳಿದ್ದಾರೆ.
ವಿರೋಧ ಮಾಡುವೆವು: ಈ ನಡುವೆ ವಚ್ಯುìವಲ್ ಐಡಿ ಜಾರಿ ಮಾಡಿದ ಕ್ರಮದ ವಿರುದ್ಧವೂ ಆಧಾರ್ ವಿರೋಧಿಸಿ ಸುಪ್ರೀಂ ಕೋರ್ಟಲ್ಲಿ ಅರ್ಜಿ ಸಲ್ಲಿಸಿದವರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜ.17ರಿಂದ ಪ್ರಕರಣದ ವಿಚಾರಣೆ ಬರಲಿದೆ. ಈ ಸಂದರ್ಭದಲ್ಲಿ ನ್ಯಾಯಪೀಠಕ್ಕೆ ಅರಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.