ಬೆಂಕಿ ಜತೆ ಸರಸವಾಡದಿರಿ: ಸುಪ್ರೀಂ ಕೋರ್ಟ್
Team Udayavani, Apr 26, 2019, 6:13 AM IST
ಹೊಸದಿಲ್ಲಿ: “ನ್ಯಾಯಾಂಗಕ್ಕೆ ಕಳಂಕ ತರುವ ಉದ್ದೇಶದಿಂದ ವ್ಯವಸ್ಥಿತ ದಾಳಿ ನಡೆಸಲಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯವು ಅಷ್ಟೊಂದು ದುರ್ಬಲವಾಗಿಲ್ಲ ಮತ್ತು ಹಣ ಅಥವಾ ರಾಜಕೀಯ ಬಲದಿಂದ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಬೆಂಕಿಯೊಂದಿಗೆ ಯಾರೂ ಸರಸವಾಡಬೇಡಿ ಎಂಬ ಖಡಕ್ ಸಂದೇಶವನ್ನು ದೇಶಕ್ಕೆ ರವಾನಿಸುವ ಸಮಯ ಬಂದಿದೆ.’
-ಇಂಥ ಆಕ್ರೋಶಭರಿತ ಮಾತುಗಳ ಮೂಲಕ ಇತ್ತೀಚೆಗಿನ ಬೆಳವಣಿಗೆಗಳ ಕುರಿತು ಕಳವಳ ವ್ಯಕ್ತ ಪಡಿಸುತ್ತಲೇ, ಎಚ್ಚರಿಕೆ ನೀಡುವ ಕೆಲಸವನ್ನು ಮಾಡಿದೆ ಸುಪ್ರೀಂ ಕೋರ್ಟ್.
ಸಿಜೆಐ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಪೀಠ ದಿಂದ ಇಂಥದ್ದೊಂದು ಮಾತು ಕೇಳಿ ಬಂದಿದೆ. ಸಿಜೆಐ ವಿರುದ್ಧ ಆರೋಪ ಹೊರಿಸಿ ಅವರನ್ನು ಕೆಳಗಿಳಿಸಲು ಅತೀ ದೊಡ್ಡ ಷಡ್ಯಂತ್ರ ರೂಪಿಸ ಲಾಗಿದೆ ಎಂದು ವಕೀಲ ಉತ್ಸವ್ ಸಿಂಗ್ ಬೇನ್ಸ್ ಆರೋಪ ಮಾಡಿದ್ದು, ಆ ಕುರಿತ ವಿಚಾರಣೆ ವೇಳೆ ನ್ಯಾ| ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನು ಒಳ ಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸುಧಾರಿಸಲು ಯತ್ನಿಸಿದರೆ ಹತ್ಯೆ!
ಹಣ ಬಲ ಅಥವಾ ರಾಜಕೀಯ ಬಲದಿಂದ ಸುಪ್ರೀಂ ಕೋರ್ಟ್ ಕಾರ್ಯಾಚರಿಸುವುದಿಲ್ಲ. ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ ಎಂದು ದೇಶದಲ್ಲಿನ ಶ್ರೀಮಂತರು ಮತ್ತು ಪ್ರಭಾವಿಗಳಿಗೆ ನಾವು ಹೇಳಲು ಬಯಸುತ್ತೇವೆ. ಕೋರ್ಟ್ ರಿಜಿಸ್ಟ್ರಿಯನ್ನು ಹಣ ಬಲದಿಂದ ಫಿಕ್ಸ್ ಮಾಡಲು ಕೆಲವರು ಯತ್ನಿಸುತ್ತಿದ್ದಾರೆ. ಇಂಥದ್ದನ್ನು ಯಾರು ಸರಿಪಡಿಸಲು ಅಥವಾ ಸುಧಾರಿಸಲು ಯತ್ನಿಸುತ್ತಾರೋ ಅವರನ್ನು “ಕೊಲ್ಲಲಾಗುತ್ತದೆ’ ಅಥವಾ “ಅವರ ಹೆಸರಿಗೆ ಕಳಂಕ ತರಲಾಗುತ್ತದೆ’. ಯಾರಿಂದಲೂ ಸುಪ್ರೀಂ ಕೋರ್ಟ್ ಅನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಕಳೆದ 3-4 ವರ್ಷಗಳಿಂದ ಸುಪ್ರೀಂ ಕೋರ್ಟ್ ಅನ್ನು ನಡೆಸಿಕೊಳ್ಳು ತ್ತಿರುವ ರೀತಿ ನೋಡಿದರೆ ಬಹಳ ಆತಂಕವಾಗುತ್ತಿದೆ. ಇದು ಹೀಗೇ ಮುಂದುವ ರಿದರೆ ಈ ಸಂಸ್ಥೆಯೇ ಉಳಿಯುವುದಿಲ್ಲ ಎಂದೂ ನ್ಯಾಯಪೀಠ ಹೇಳಿತು.
ಸಿಜೆಐ ವಿರುದ್ಧದ ಪ್ರಕರಣದಿಂದ ಓರ್ವ ಜಡ್ಜ್ ಹೊರಕ್ಕೆ
ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಸಮಿತಿಯಿಂದ ನ್ಯಾಯಮೂರ್ತಿ ಎನ್.ವಿ ರಮಣ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಮೂವರು ನ್ಯಾಯಮೂರ್ತಿಗಳ ಸಮಿತಿ ಇದಾಗಿದ್ದು, ಹಿರಿಯ ನ್ಯಾ| ಎಸ್.ಎ ಬೊಬೆx ಇದರ ನೇತೃತ್ವ ವಹಿಸಿದ್ದಾರೆ. ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ ಮಹಿಳೆಯೇ ನ್ಯಾ| ರಮಣ ಅವರು ಸಮಿತಿಯಲ್ಲಿರುವ ಬಗ್ಗೆ ಆಕ್ಷೇಪ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ನ್ಯಾ| ರಮಣ ಹಾಗೂ ನ್ಯಾ| ಗೊಗೊಯ್ ಆತ್ಮೀಯ ಸ್ನೇಹಿತರಾಗಿದ್ದು, ನ್ಯಾ| ಗೊಗೊಯ್ ಮನೆಗೆ ಪದೇ ಪದೆ ನ್ಯಾ| ರಮಣ ಭೇಟಿ ನೀಡುತ್ತಾರೆ ಎನ್ನುವ ಕಾರಣಕ್ಕೆ ಸಮಿತಿಯಲ್ಲಿ ಅವರು ಇರುವುದು ಸರಿಯಲ್ಲ ಎಂಬುದಾಗಿ ಮಹಿಳೆ ಆಕ್ಷೇಪಿಸಿದ್ದಾರೆ ಎನ್ನಲಾಗಿದೆ. ಶುಕ್ರವಾರ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಯಿದ್ದು, ಅಂದು ದೂರುದಾರ ಮಹಿಳೆಯೂ ಹಾಜರಾಗಲಿದ್ದಾರೆ.
ವಿಚಾರಣೆ ಸಮಿತಿಯಲ್ಲಿ ಕೇವಲ ಒಬ್ಬ ಮಹಿಳಾ ಸದಸ್ಯರಿದ್ದಾರೆ. ಸುಪ್ರೀಂ ಕೋರ್ಟ್‌ನ ವಿಶಾಖಾ ಮಾರ್ಗಸೂಚಿಯ ಪ್ರಕಾರ ಸಮಿತಿಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರಬೇಕು ಎಂದು ಮಹಿಳೆ ದೂರಿದ್ದಾರೆ ಎನ್ನಲಾಗಿದೆ.
ವಕೀಲರ ಆರೋಪದ ತನಿಖೆಗೆ ನ್ಯಾ| ಪಾಟ್ನಾಯಕ್ ನೇಮಕ
ಸಿಜೆಐ ರಂಜನ್ ಗೊಗೊಯ್ ಅವರಿಂದ ರಾಜೀನಾಮೆ ಕೊಡಿಸಲು ದೊಡ್ಡ ಮಟ್ಟದಲ್ಲಿ ಸಂಚು ರೂಪಿಸಲಾಗಿದೆ ಎಂದು ವಕೀಲ ಉತ್ಸವ್ ಸಿಂಗ್ ಬೇನ್ಸ್ ಆರೋಪ ಮಾಡಿದ್ದು, ಇದರ ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಾಟ್ನಾಯಕ್‌ರನ್ನು ನೇಮಿಸಲಾಗಿದೆ. ಈ ಸಮಿತಿಯು ಸಿಜೆಐ ವಿರುದ್ಧ ದಾಖಲಿಸಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸುವುದಿಲ್ಲ. ಬದಲಿಗೆ ಬೇನ್ಸ್ ಆರೋಪ ಕುರಿತು ತನಿಖೆ ನಡೆಸಲಿದೆ. ಈ ಬಗ್ಗೆ ಅರುಣ್ ಮಿಶ್ರಾ ನೇತೃತ್ವದ ವಿಶೇಷ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.