ಕಾಲೇಜು ಅಧ್ಯಾಪಕರ ಭಡ್ತಿಗೆ ಸಂಶೋಧನೆ ಅಗತ್ಯವಿಲ್ಲ
Team Udayavani, Jul 31, 2017, 8:30 AM IST
ಹೊಸದಿಲ್ಲಿ: ಕಾಲೇಜು ಅಧ್ಯಾಪಕರ ಭಡ್ತಿಗೆ ಸಂಶೋಧನೆ ಭಾಗೀದಾರಿಕೆ ಅಗತ್ಯ ಎಂಬ ಈಗಿನ ಪದ್ಧತಿಗೆ ಕೇಂದ್ರ ಸರಕಾರ ತಿಲಾಂಜಲಿ ನೀಡಲಿದೆ. ಅದರ ಬದಲಿಗೆ, ಅವರು ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಾಮುದಾಯಿಕ ಚಟುವಟಿಕೆಗಳಲ್ಲಿ ಭಾಗಿಗಳಾಗಿರಬೇಕು ಎಂದು ಹೇಳಿದೆ.
ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ನಡೆದ ಉನ್ನತ ಶಿಕ್ಷಣ ಕುರಿತ ವಿಚಾರ ಸಂಕಿರಣದಲ್ಲಿ ಘೋಷಿಸಿದ್ದಾರೆ. ಶೀಘ್ರ ಈ ಬಗ್ಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದಿದ್ದಾರೆ. “ಇದುವರೆಗೆ ಭಡ್ತಿಗೆ ಸಂಶೋಧನೆ ನಡೆಸುವುದು ಕಡ್ಡಾಯ ಎಂದಿತ್ತು. ಆದರೆ ಇದನ್ನು ಬದಲು ಮಾಡಿ ಅಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ವಿವಿಧ ಸಾಮುದಾಯಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅಗತ್ಯ ಎಂದು ಮಾಡಲಾಗುತ್ತದೆ. ಅದರಲ್ಲಿನ ಅಂಕಗಳನ್ನು ಆಧರಿಸಿ ಭಡ್ತಿ ನೀಡಬಹುದು’ ಎಂದಿದ್ದಾರೆ. “ಕಾಲೇಜು ಅಧ್ಯಾಪಕರು ಹೆಚ್ಚಾಗಿ ಬೋಧನೆಯಲ್ಲೇ ತೊಡಗಿದ್ದರೆ, ವಿವಿ ಅಧ್ಯಾಪಕರು ಹಾಗಲ್ಲ. ಭಡ್ತಿಗೆ ಸಂಶೋಧನೆ ಕಡ್ಡಾಯ ಎಂದರೆ, ಅದರ ಗುಣಮಟ್ಟ ಕುಸಿಯುತ್ತದೆ’ ಎಂದಿದ್ದಾರೆ ಜಾವಡೇಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.