ಪರಿಸ್ಥಿತಿ ಸುಧಾರಿಸುವವರೆಗೆ ಶಾಲೆಗಳ ಆರಂಭ ಬೇಡ
ಮುಂದಿನ ತಿಂಗಳಿಂದ ಶಾಲೆ ತೆರೆಯುವ ಕೇಂದ್ರದ ನಿರ್ಧಾರಕ್ಕೆ ಆಕ್ಷೇಪ
Team Udayavani, Jun 2, 2020, 7:42 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: “ದೇಶದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಪುನಾರಂಭಿಸಬಾರದು. ಪರಿಸ್ಥಿತಿ ಸುಧಾರಿಸುವವರೆಗೆ ಅಥವಾ ಲಸಿಕೆ ಕಂಡು ಹಿಡಿಯುವವರೆಗೆ ಶಾಲೆಗಳನ್ನು ತೆರೆಯಲು ಅವಕಾಶ ನೀಡಬಾರದು’ ಎಂಬ ಅಭಿಯಾನಕ್ಕೆ ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ಪೋಷಕರು ಸಹಿ ಹಾಕಿದ್ದಾರೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈಯಲ್ಲಿ ಶಾಲಾ ಕಾಲೇಜು, ಕೋಚಿಂಗ್ ಸೆಂಟರ್‌ಗಳನ್ನು ತೆರೆಯಬಹುದು ಎಂದು ಕೇಂದ್ರ ಸರಕಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ.
“ಕೇಂದ್ರ ಸರಕಾರದ ಈ ನಿರ್ಧಾರ ಸರಿಯಲ್ಲ. ಇದರಿಂದ ಮಕ್ಕಳು ತೊಂದರೆಗೆ ಸಿಲುಕಬೇಕಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇ-ಕಲಿಕೆಗೆ ಆದ್ಯತೆ ನೀಡಬೇಕು. ವರ್ಚ್ಯುಯಲ್ ತರಗತಿಗಳನ್ನು ಮುಂದುವರಿಸಬೇಕು’ ಎಂದು ಅಭಿಯಾನದಲ್ಲಿ ಉಲ್ಲೇಖೀಸಲಾಗಿದೆ. ಇದಕ್ಕೆ ದೇಶಾದ್ಯಂತ 2.13 ಲಕ್ಷ ಪೋಷಕರು ಸಹಿ ಹಾಕಿದ್ದಾರೆ. ಮಕ್ಕಳು ಮನೆಯಲ್ಲಿದ್ದರೆ ನಾವು ನಿಗಾ ವಹಿಸುತ್ತೇವೆ. ಆದರೆ, ಶಾಲೆಗೆ ಹೋದರೆ ಊಟದ ವಿರಾಮದ ವೇಳೆ, ಶಾಲಾ ಬಸ್‌ಗಳಲ್ಲಿ ಯಾರು ಕಾಳಜಿ ವಹಿಸುತ್ತಾರೆ?, ಈ ತೀರ್ಮಾನ ಪ್ರತಿಯೊಬ್ಬರಲ್ಲೂ ಭೀತಿ ಹುಟ್ಟಿಸುತ್ತದೆ.
ಕೋವಿಡ್ ಸಂಖ್ಯೆ ಏರಿಕೆಯಾದರೆ ಮತ್ತಷ್ಟು ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ಪೋಷಕರಾದ ಸ್ವಾತಿ ಭಾರದ್ವಜ್ ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.