ವಿಚ್ಛೇದನಕ್ಕೆ 6 ತಿಂಗಳು ಕಾಯಬೇಕಿಲ್ಲ: ಸು.ಕೋ.
Team Udayavani, Sep 13, 2017, 6:05 AM IST
ಹೊಸದಿಲ್ಲಿ: ಹಿಂದೂ ವಿವಾದ ಕಾಯ್ದೆಯಲ್ಲಿ ಬದಲಾವಣೆ ಮಾಡಿರುವ ಸುಪ್ರೀಂ ಕೋರ್ಟ್, ಡೈವೋರ್ಸ್ ಸಂದರ್ಭದಲ್ಲಿ
“6 ತಿಂಗಳ ಕಾಯುವಿಕೆ’ ಬೇಡ ಎಂದು ಮಹಣ್ತೀದ ತೀರ್ಪು ನೀಡಿದೆ. ನ್ಯಾ| ಆದರ್ಶ್ ಕೆ. ಗೋಯಲ್ ಮತ್ತು ನ್ಯಾ| ಉದಯ್ ಯು. ಲಲಿತ್ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದ್ದು, ಪತಿ-ಪತ್ನಿ ಒಪ್ಪಿ ಸ್ವಯಂ ಪ್ರೇರಿತವಾಗಿ ವಿಚ್ಛೇದನಕ್ಕೆ ಮುಂದಾದರೆ 6 ತಿಂಗಳು ಕಾಯುವ ಆವಶ್ಯಕತೆ ಇಲ್ಲ ಎಂದು ಹೇಳಿದೆ.
ಇದಷ್ಟೇ ಅಲ್ಲ, ಬೇರೆ ಬೇರೆಯಾಗಿ ಒಂದು ವರ್ಷವಾಯ್ತು, ಹೀಗಾಗಿ ಡೈವೋರ್ಸ್ ಕೊಡಿ ಎಂದು ಕೇಳುವ ಅಗತ್ಯವೂ ಇಲ್ಲ ಎಂದಿದೆ. ಅಂದರೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(ಬಿ) ನಲ್ಲಿ 18 ತಿಂಗಳು ಕಾಯು ವಿಕೆ ಅವಧಿ ಅನಂತರ ಡೈವೋರ್ಸ್ ಕೊಡಬಹುದು ಎಂದಿದೆ.
ಸೆಕ್ಷನ್ 13(1)ರಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸುವ ಮುನ್ನ ಒಂದು ವರ್ಷ ಬೇರೆ ಬೇರೆಯಾಗಿರಬೇಕು ಎಂದಿದೆ. ಹಾಗೆಯೇ ಸೆಕ್ಷನ್ 13ಬಿ(2)ನಲ್ಲಿ ವಿಚ್ಛೇದನ ಪ್ರಕ್ರಿಯೆ ಶುರುವಾದ ಮೇಲೆ ಆರು ತಿಂಗಳು ಮತ್ತೆ ಜತೆಯಾಗಿರಬೇಕು. ಅಂದರೆ ಒಟ್ಟಾರೆ 18 ತಿಂಗಳುಗಳ ಕಾಲ ಒಟ್ಟಾಗಿರಬೇಕು ಎಂದು ಹೇಳಿದೆ.
ಪತಿ-ಪತ್ನಿ ಸಮ್ಮತಿಯಿಂದಲೇ ಡೈವೋರ್ಸ್‌ಗೆ ಅರ್ಜಿ ಸಲ್ಲಿಸುವ ಮುನ್ನ ಒಂದು ವರ್ಷ ಹಾಗೂ ಅನಂತರ ಆರು ತಿಂಗಳು ಜತೆಯಲ್ಲಿ ಇರಬೇಕು ಎಂಬ ನಿಯಮಗಳನ್ನೇ ಸುಪ್ರೀಂ ಕೋರ್ಟ್ ತೆಗೆದು ಹಾಕಿದೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ಬಿ ಪ್ರಕಾರ ಪರಸ್ಪರ ಒಪ್ಪಿಗೆ ಇದ್ದರೆ ಡೈವೋರ್ಸ್ ಕೊಡಬಹುದು ಎಂದಿದೆ. ಆದರೆ ಪತಿ-ಪತ್ನಿಗೆ ಒಟ್ಟಾಗಿ ಬದುಕುವುದೇ ಅಸಾಧ್ಯವೆಂಬ ಪರಿಸ್ಥಿತಿ ನಿರ್ಮಾಣವಾದಾಗ ಡೈವೋರ್ಸ್ ಕೊಡಬಹುದು ಎಂದಿದೆ.
ಕಾಯ್ದೆಯ ಪ್ರಕಾರ, ಆರು ತಿಂಗಳ ಅವಧಿ ಇರುವುದು ತೀರಾ ಅವ ಸರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು. ಒಂದು ವೇಳೆ ಪತಿ-ಪತ್ನಿ ಈ ಸಂದರ್ಭದಲ್ಲಿ ಪರಸ್ಪರ ಅರಿತು ಒಟ್ಟಾಗಿ ಜೀವನ ನಡೆಸಲು ಒಪ್ಪಿದರೂ ಒಪ್ಪಬಹುದು ಎಂಬ ಕಾರಣಕ್ಕೆ ಈ ಅವಧಿ ಇದೆ.
ಕಾಯ್ದೆಯ ಈ ಅಂಶ ಚೆನ್ನಾ ಗಿಯೇ ಇದೆ. ಆದರೆ, ಪತಿ-ಪತ್ನಿಗೆ ಜತೆಯಲ್ಲಿ ಬಾಳಲು ಸಾಧ್ಯವೇ ಇಲ್ಲ ಎಂದು ಅರಿವಾದ ಮೇಲೆ ಜತೆಯಲ್ಲಿ ಬಾಳುವೆ ನಡೆಸಿ ಎಂದು ಹೇಳುವುದರಲ್ಲಿ ಯಾವುದೇ ಅರ್ಥ ವಿಲ್ಲ. ಹೀಗಾಗಿ ಈ ಕೂಲಿಂಗ್ ಆಫ್ ಅವಧಿಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ನಿಯಮವಿದೆ ಎಂಬ ಕಾರಣಕ್ಕೆ ತತ್‌ಕ್ಷಣವೇ ಡೈವೋರ್ಸ್ ನೀಡ ಬಾರದು. ಪತಿ-ಪತ್ನಿ ಜತೆ ಚರ್ಚೆ ನಡೆಸಿ, ಪರಿಸ್ಥಿತಿ ನೋಡಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಕೆಳಹಂತದ ಕೋರ್ಟ್‌ಗಳಿಗೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.