ಹೈದರಾಬಾದ್ ಎನ್ ಕೌಂಟರ್: ಟಾಲಿವುಡ್ ನಟ-ನಟಿಯರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ ?
Team Udayavani, Dec 6, 2019, 11:36 AM IST
ಹೈದರಾಬಾದ್: ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಸಂತ್ರಸ್ಥೆಗೆ ಇಂದು ನ್ಯಾಯ ದೊರಕಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಆರೋಪಿಗಳೂ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿರುವುದಕ್ಕೆ ಟಾಲಿವುಡ್ ನ ನಟ ಹಾಗೂ ನಟಿಯರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಟ್ವೀಟ್ ಮಾಡಿರುವ ಜ್ಯೂನಿಯರ್ ಎನ್ ಟಿಆರ್, ಇಂದು ನ್ಯಾಯ ದೊರಕಿತು. ನೌ ರೆಸ್ಟ್ ಇನ್ ಪೀಸ್ ದಿಶಾ ಎಂದು ಹೇಳಿದ್ದಾರೆ.
JUSTICE SERVED! Now, Rest In Peace Disha.
— Jr NTR (@tarak9999) December 6, 2019
ಇದರಂತೆ ಅಲ್ಲು ಅರ್ಜುನ್ ಕೂಡ ಟ್ವೀಟ್ ಮಾಡಿದ್ದು, ನ್ಯಾಯ ದೊರಕಿತು ಎಂದು ತಿಳಿಸಿದ್ದಾರೆ.
JUSTICE SERVED pic.twitter.com/iO7F6SqlIG
— Allu Arjun (@alluarjun) December 6, 2019
ನಟಿ ಸಮಂತಾ ಅಕ್ಕಿನೇನಿ ಕೂಡ ಟ್ವೀಟ್ ಮಾಡಿದ್ದು ಐ ಲವ್ ತೆಲಂಗಾಣ ,ಭಯ ಎನ್ನುವುದು ಉತ್ತಮ ಪರಿಹಾರ ಮತ್ತು ಕೆಲವೊಮ್ಮೆ ಅದೇ ಪರಿಹಾರವಾಗುತ್ತದೆ ಎಂದು ಹೇಳಿದ್ದಾರೆ. ಈ ಟ್ವೀಟ್ ಅನ್ನು ಸಾವಿರಾರು ಮಂದಿ ರೀ ಟ್ವೀಟ್ ಮಾಡಿದ್ದಾರೆ.
I ❤️ TELANGANA . Fear is a great solution and sometimes the only solution .
— Samantha Akkineni (@Samanthaprabhu2) December 6, 2019
ನಟಿ ಅನಸೂಯಾ ಭಾರದ್ವಾಜ್ ಟ್ವೀಟ್ ಮಾಡಿ, ತೆಲಂಗಾಣ ಪೊಲೀಸರ ಕುರಿತು ಹೆಮ್ಮೆಯಾಗುತ್ತಿದೆ. ತೆಲಂಗಾಣ ಪೊಲೀಸರು ಉದಾಹರಣೆಯಾಗಿದ್ದಾರೆ. ಅತ್ಯಾಚಾರಿಗಳಿಗೆ ಸಿಕ್ಕ ಶಿಕ್ಷೆಗೆ ಸಂತೋಷವಾಗಿದೆ ಎಂದಿದ್ದಾರೆ.
I am Proud. #SettingExample #TelanganaPolice #Telangana
— Anasuya Bharadwaj (@anusuyakhasba) December 6, 2019
ನಟಿ ರಾಕುಲ್ ಪ್ರೀತ್ ಟ್ವೀಟ್ ಮಾಡಿ. ಅತ್ಯಾಚಾರದಂತಹ ಅಪರಾಧವೆಸಗಿ ಎಷ್ಟು ದೂರ ತಾನೆ ಓಡಲು ಸಾಧ್ಯ? ತೆಲಂಗಾಣ ಪೊಲೀಸರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
How far can you run away after committing a crime like Rape .. #JusticeForPriyankaReddy #Encounter ?? thankyou #Telangana police
— Rakul Singh (@Rakulpreet) December 6, 2019
ನಟಿ ಹನ್ಸಿಕಾ ಮೋಟ್ವಾಣಿ ಟ್ವೀಟ್ ಮಾಡಿ, ನ್ಯಾಯ ದೊರಕಿದು ಎಂದಿದ್ದಾರೆ.
JUSTICE SERVED! #JusticeForPriyankaReddy
— Hansika (@ihansika) December 6, 2019
ದಾನೀಶ್ ಸೇಠ್ ಟ್ವೀಟ್ ಮಾಡಿ ಹೈದರಬಾದ್ ನಲ್ಲಿ ನಡೆದ ಈ ಎನ್ ಕೌಂಟರ್ ತೀಕ್ಷ್ಣವಾದ ಅಭಿಪ್ರಾಯಗಳನ್ನು ಹುಟ್ಟಿಸುತ್ತದೆ. ನಿಜಕ್ಕೂ ಬುಲೆಟ್ ಗಳು ದುಪ್ಪಟ್ಟು ಪರಿಣಾಮ ಬೀರುತ್ತದೆ ಎಂದುಕೊಂಡಿದ್ದೇನೆ. ಗನ್ನಿನ ಶಬ್ದ ನ್ಯಾಯಾಂಗ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಲಿದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
This #Encounter in Hyderabad is bound to bring about sharp opinions. Really hope the bullet has a double effect, i’m not really brooding over the 4 monsters. Hope the sound of the gun is an alarm to our judicial system … wake up!
— Danish Sait (@DanishSait) December 6, 2019
ಸ್ಯಾಂಡಲ್ವುಡ್ ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದು ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ದೊರಕಿತು. ಇಂದು ನನಗೆ ಸಮಾಧಾನವಾಯಿತು ಎಂದಿದ್ದಾರೆ.
ದುರ್ಗಾಮಾತೆಗೆ ವಿಶೇಷ ನಮಸ್ಕಾರ ಅರ್ಪಿಸಿ ಶ್ರಿಚಕ್ರದ
7ನೆ ಮುದ್ರೆ ಯಲ್ಲಿ 108 ದಕ್ಷಿಣ ಕಾಳಿಕ ಕಿಂಕಿಣಿ ವಿಚ್ಚೆ ಚಪಮಾಡಿ..ಇನ್ನು ಸತ್ಯವಿದೆ ಭೂಮಿಯಲ್ಲಿ ಎಂದು ದನ್ಯವಾದ ಅರ್ಪಿಸಿದೆ ದೇವಿಗೆ!
ಅಮಾಯಕ ಸಹೋದರಿ ಸಾವು ನನ್ನ ಕಾಡುತ್ತಿತ್ತು ವಾರದಿಂದ ಇಂದು ಸಮಾಧಾನವಾಯಿತು!
ಈ ಕಾರ್ಯ ಮಾಡಿದ ಆರಕ್ಷಕರೆ ಆ ಮಹಾದೇವಿ ಕೃಪೆ
ನಿಮ್ಮ ಮೇಲಿರಲಿ..?? https://t.co/PTOhN0KkJl— ನವರಸನಾಯಕ ಜಗ್ಗೇಶ್ (@Jaggesh2) December 6, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.