ನಿಮಗೆ ಗೊತ್ತಾ? ಪ್ರಧಾನಿ ಮೋದಿ ಕೇವಲ ವಿಶ್ವನಾಥ ಮಂದಿರವನ್ನು ಮಾತ್ರ ನವೀಕರಿಸಿದ್ದಲ್ಲ!


Team Udayavani, Dec 14, 2021, 7:00 AM IST

ನಿಮಗೆ ಗೊತ್ತಾ? ಮೋದಿ ಕೇವಲ ವಿಶ್ವನಾಥ ಮಂದಿರವನ್ನು ಮಾತ್ರ ನವೀಕರಿಸಿದ್ದಲ್ಲ!

ಪ್ರಧಾನಿ ಮೋದಿ ಕಾಶಿ ದೇಗುಲದ ನವೀಕರಣ ಮಾಡುವ ಮೂಲಕ ಸುದ್ದಿಕೇಂದ್ರವಾಗಿದ್ದಾರೆ. ನಿಮಗೆ ಗೊತ್ತಾ? ಮೋದಿ ಕೇವಲ ವಿಶ್ವನಾಥ ಮಂದಿರವನ್ನು ಮಾತ್ರ ನವೀಕರಿಸಿದ್ದಲ್ಲ. ಕಾಶ್ಮೀರದಿಂದ ಹಿಡಿದು ಕಾಶಿಯವರೆಗೆ ದೇಶದ ಹಲವೆಡೆ ದೇಗುಲ ನಿರ್ಮಾಣ ಮಾಡಿದ್ದಾರೆ. ಗುಜರಾತ್‌, ಉತ್ತರ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲ ವಿದೇಶಗಳಲ್ಲೂ ದೇಗುಲಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಅವುಗಳ ಪರಿಚಯ ಇಲ್ಲಿದೆ.

ಸೋಮನಾಥ ದೇಗುಲ-ಗುಜರಾತ್‌
ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗಲೇ ಇತಿಹಾಸಪ್ರಸಿದ್ಧ ಸೋಮನಾಥ (ಶಿವ ದೇವಸ್ಥಾನ ) ದೇಗುಲದ ನವೀಕರಣ ಆರಂಭಿಸಿದ್ದರು. ಮೊಹಮ್ಮದ್‌ ಘಜ್ನಿ, ಔರಂಗಜೇಬನ ದಾಳಿಯಿಂದ ಈ ದೇವಸ್ಥಾನ ಧ್ವಂಸಗೊಂಡಿತ್ತು. ಹಿಂದೆ ಅಹಲ್ಯಾಬಾಯಿ ಹೋಳ್ಕರ್‌, ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ನವೀಕರಣ ಗೊಳಿಸಿದ್ದರು. ಈ ವರ್ಷ ಆಗಸ್ಟ್‌ನಲ್ಲಿ ಆ ದೇಗುಲದ ನವೀಕರಣದ ಹಲವು ಹೊಸ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ.

ಕೇದಾರನಾಥ-ಉತ್ತರಾಖಂಡ
ದೇಶದ ಇನ್ನೊಂದು ಪ್ರಮುಖ ಶಿವನ ದೇಗುಲವಾಗಿರುವ ಕೇದಾರನಾಥ ಉತ್ತರಾಖಂಡದಲ್ಲಿದೆ. ಅದು 2013ರ ಪ್ರವಾಹದಲ್ಲಿ ತೀವ್ರ ಹಾನಿಗೊಳ ಗಾಗಿತ್ತು. 2014ರಲ್ಲಿ ಮೋದಿ ಪ್ರಧಾನಿಯಾದಾಗ ದುರಸ್ತಿಗೆ ಚಾಲನೆ ನೀಡಿದ್ದರು. ಇದೀಗ ದೇಗುಲ ಸಂಪೂರ್ಣವಾಗಿ ಸಿದ್ಧಗೊಂಡು ನಿಂತಿದೆ.

ಶ್ರೀರಾಮಮಂದಿರ-ಉತ್ತರಪ್ರದೇಶ
ಕಾಶಿ ವಿಶ್ವನಾಥ ಮಂದಿರದಂತೆ, ಅಯೋಧ್ಯೆಯ ಶ್ರೀರಾಮಮಂದಿರವಿರು ವುದೂ ಉತ್ತರಪ್ರದೇಶದಲ್ಲಿ! 2019ರಲ್ಲಿ ಸರ್ವೋಚ್ಚ ನ್ಯಾಯಾಲಯ ರಾಮಮಂದಿರ ನಿರ್ಮಾಣದ ಪರ ತೀರ್ಪು ನೀಡಿದ ಬಳಿಕ 2020ರ ಆಗಸ್ಟ್‌ನಲ್ಲಿ ಮೋದಿ ನಿರ್ಮಾಣದ ಶಂಕುಸ್ಥಾಪನೆ ನೆರ ವೇರಿಸಿದ್ದರು. ಈ ಮಂದಿರ ಶತಮಾನಗಳಿಂದ ವಿವಾದಕ್ಕೊಳಗಾಗಿತ್ತು.

ಚಾರ್‌ಧಾಮ್‌ಗಳ ಸಂಪರ್ಕ ಯೋಜನೆ
ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದರೀನಾಥಗಳು ದೇಶದಲ್ಲಿ ಕಿರು ಚಾರ್‌ಧಾಮ್‌ಗಳೆಂದು ಕರೆಸಿಕೊಂಡಿವೆ. ಈ ನಾಲ್ಕೂ ಜಾಗಗಳನ್ನು ಸಲೀಸಾಗಿ ಸಂಪರ್ಕಿಸಲು ರಸ್ತೆ ನಿರ್ಮಾಣ, ರೈಲು ಮಾರ್ಗ ನಿರ್ಮಾಣಕ್ಕೆ ಮೋದಿ ಚಾಲನೆ ನೀಡಿದ್ದಾರೆ. ಈ ಮಾರ್ಗಗಳು 2025ರಿಂದ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ:ಕಾಶಿ ವಿಶ್ವನಾಥ ಕಾರಿಡಾರ್‌ ಲೋಕಾರ್ಪಣೆ: ಹೂಮಳೆ.. ಹೂಮಳೆ.. ಹೂಗಳ ಸುರಿಮಳೆ!

ಕಾಶ್ಮೀರದಲ್ಲಿ ನಿರ್ಮಾಣಗಳ ಸರಮಾರೆ
ಜಮ್ಮು-ಕಾಶ್ಮೀರದಲ್ಲಿ ಹಿಂದೆ ಒಟ್ಟು 50,000 ದೇಗುಲಗಳಿದ್ದವು ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ. ಈಗಾಗಲೇ ಅಲ್ಲಿನ ರಾಜಧಾನಿ ಶ್ರೀನಗರದಲ್ಲಿ ಹಲವು ದೇಗುಲಗಳ ಮರು ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಬಹಳ ಹಿಂದೆ ಹಿಂದೂಗಳು ಕಾಶ್ಮೀರ ತೊರೆಯಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾದ ಅನಂತರ ಈ ದೇವಸ್ಥಾನಗಳು ಹಾಳುಬಿದ್ದಿದ್ದವು. ಈ ನಿರಾಶ್ರಿತ ಹಿಂದೂಗಳು ದೇಗುಲಗಳು ಮರು ನಿರ್ಮಾಣವಾದರೆ ಮತ್ತೆ ಕಾಶ್ಮೀರಕ್ಕೆ ಮರಳು ತ್ತಾರೆ ಎಂಬ ನಿರೀಕ್ಷೆಯಿದೆ ಎನ್ನಲಾಗಿದೆ.

ವಿದೇಶಗಳಲ್ಲೂ ದೇಗುಲ
ನರೇಂದ್ರ ಮೋದಿ ಬರೀ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. 2015ರಲ್ಲಿ ಮೋದಿ ಯುಎಇಗೆ ಭೇಟಿ ನೀಡಿದ್ದಾಗ ಮಂದಿರ ನಿರ್ಮಾಣಕ್ಕೆ ಅಲ್ಲಿನ ಸರಕಾರ ಜಾಗ ನೀಡಿತ್ತು. 2018ರಲ್ಲಿ ನಿರ್ಮಾಣಕ್ಕೆ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ. ಹಾಗೆಯೇ ಬಹ್ರೈನಿನ 200 ವರ್ಷದಷ್ಟು ಹಳೆಯ ಶ್ರೀಕೃಷ್ಣ ಮಂದಿರ ನವೀಕರಣಕ್ಕೆ 2019ರಲ್ಲಿ ಚಾಲನೆ ನೀಡಿದ್ದಾರೆ.

ಕಾರ್ಮಿಕರ ಜತೆಗೆ ಸಹಭೋಜನ
ಕಾಶಿ ಕಾರಿಡಾರ್‌ ಯೋಜನೆಯ ಮೊದಲ ಹಂತದ ಕಾಮಗಾರಿಯಲ್ಲಿ ದುಡಿದ ಸುಮಾರು 2,500 ಕಾರ್ಮಿಕರ ಜತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಧ್ಯಾಹ್ನ ಭೋಜನ ಸವಿದಿದ್ದು ವಿಶೇಷವಾಗಿತ್ತು. ಅಚ್ಚುಕಟ್ಟಾಗಿ ಜೋಡಿಸಲಾಗಿದ್ದ ಶಾಮಿಯಾನ ಟೇಬಲ್‌ನಲ್ಲಿ ಎಲ್ಲರೊಂದಿಗೆ ಮೋದಿ ಊಟ ಮಾಡಿದರು. ಎಲ್ಲರಿಗೂ ಊಟಕ್ಕೆ ರೋಟಿ, ದಾಲ್‌, ಅನ್ನ, ತರಕಾರಿಗಳ ಸಮ್ಮಿಶ್ರಣದ ಸಾಂಬಾರ್‌ ಹಾಗೂ ಹಪ್ಪಳ ನೀಡಲಾಗಿತ್ತು. ಊಟದ ಅನಂತರ ಮಾಧ್ಯಮಗಳೊಂದಿಗೆ ಮಾತನಾಡಿದ, ಬಿಹಾರ ಮೂಲದ ರಾಮ್‌ಚಂದ ಕುಮಾರ್‌ ಎಂಬ ಕಾರ್ಮಿಕ, ಜನಸಾಮಾನ್ಯರ ಜತೆಗೆ ದೇಶದ ಪ್ರಧಾನಿ ಬಂದು ಕುಳಿತು ಊಟ ಮಾಡುವುದನ್ನು ನೋಡಿ ಆನಂದ ವಾಯಿತು. ನಮ್ಮ ಕೆಲಸ ಕಾರ್ಯಗಳನ್ನು ಶ್ಲಾ ಸಿದ್ದು ಮತ್ತಷ್ಟು ಖುಷಿ ಕೊಟ್ಟಿತು. ಇದೊಂದು ಚಿರಸ್ಮರಣೀಯ ನೆನಪಾಗಿರಲಿದೆ ಎಂದರು.

ಹತ್ತಿರಕ್ಕೆ ಬನ್ನಿ.. : ಕಾರ್ಮಿಕರ ಜತೆಗೆ ಫೋಟೋ ತೆಗೆಯಿಸಿಕೊಳ್ಳುವಾಗ ಸಂಕೋಚದಿಂದ ಕೊಂಚ ದೂರಕ್ಕೆ ಸರಿದು ನಿಂತಿದ್ದ ಕಾರ್ಮಿಕರನ್ನು ಹತ್ತಿರಕ್ಕೆ ಬನ್ನಿ ಎಂದು ಕರೆದು ಸನಿಹದಲ್ಲಿ ಕೂರಿಸಿಕೊಂಡು ಫೋಟೋ ತೆಗೆಯಿಸಿಕೊಂಡಿದ್ದೂ ಕಾರ್ಮಿಕರಿಗೆ ಖುಷಿ ಕೊಟ್ಟಿತು.

ಕಾಶಿ ನಿರ್ಮಾತೃ ಅಹಲ್ಯಾಬಾಯಿ ಸ್ಮರಣೆ
18ನೇ ಶತಮಾನದಲ್ಲಿ ಭಾರತದಾದ್ಯಂತ ಹಲವಾರು ದೇಗುಲಗಳನ್ನು ನಿರ್ಮಿಸಿದ ಹೆಗ್ಗಳಿಕೆ ಮರಾಠಾ ರಾಣಿಯಾದ ಅಹಲ್ಯಾಬಾಯಿ ಹೋಳ್ಕರ್‌ ಅವರದ್ದು. ಮಧ್ಯಪ್ರದೇಶದ ಇಂದೋರ್‌ನ ದಕ್ಷಿಣ ಭಾಗದಲ್ಲಿರುವ ನರ್ಮದಾ ನದಿಯ ದಡದಲ್ಲಿರುವ ಮಹೇಶ್ವರ ರಾಜ್ಯದ ರಾಣಿ ಆಕೆ. 1669ರಲ್ಲಿ ಔರಂಗಜೇಬ್‌ ದೇಗುಲ ನಾಶಕ್ಕೆ ಆದೇಶ ನೀಡಿದ್ದರಿಂದಾಗಿ ಕಾಶಿ ನಗರದ ಮೇಲೆ ಮೊಘಲರ ದಾಳಿಯಾಗಿತ್ತು. ಆಗ ಕಾಶಿಯಲ್ಲಿನ ವಿಶ್ವನಾಥ ದೇಗುಲ ನಾಶವಾಗಿತ್ತು. ಇದನ್ನರಿತ ರಾಣಿ ಅಹಲ್ಯಾ ಬಾಯಿ 1780ರಲ್ಲಿ ವಿಶ್ವನಾಥ ದೇಗುಲವನ್ನು ಹೊಸತಾಗಿ ನಿರ್ಮಾಣ ಮಾಡಿಸಿದ್ದಳು. ಪ್ರಧಾನಿ ನರೇಂದ್ರ ಮೋದಿಯವರೂ ಸೋಮವಾರದ ತಮ್ಮ ಭಾಷಣದಲ್ಲಿ ರಾಣಿ ಅಹಲ್ಯಾ ಬಾಯಿ ದೇಗುಲ ಪುನರ್‌ ನಿರ್ಮಾಣ ಮಾಡಿದ್ದನ್ನು ಮುಕ್ತಕಂಠದಿಂದ ಶ್ಲಾ ಸಿದ್ದಾರೆ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.