ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ
ಜಾರ್ಖಂಡ್ ಗಡಿ ಬಳಿಕ ಇರುವ ಗ್ರಾಮಕ್ಕೆ ಡ್ರೈವಿಂಗ್
Team Udayavani, Apr 7, 2020, 3:43 PM IST
ಕೊಲ್ಕೊತ್ತಾ: ಚಿಕಿತ್ಸೆಗೊಳಗಾಗಿದ್ದ ಬಾಲಕಿ ಹಾಗೂ ಆಕೆಯ ತಂದೆಯನ್ನು ವೈದ್ಯರೊಬ್ಬರು ತಮ್ಮದೇ ಕಾರಿನಲ್ಲಿ ಹತ್ತಿಸಿಕೊಂಡು 270 ಕಿ.ಮೀ. ದೂರದಲ್ಲಿದ್ದ ಅವರ ಮನೆಗೆ ಸುರಕ್ಷಿತವಾಗಿ ಸೇರಿಸಿ, ವೈದ್ಯರೊಬ್ಬರು ಔದಾರ್ಯ ಮೆರೆದಿದ್ದಾರೆ.
ಕೋಲ್ಕತಾದ ಎಸ್.ಎಸ್.ಕೆ.ಎಂ. ಆಸ್ಪತ್ರೆಗೆ ದಾಖಲಾಗಿದ್ದ 8 ವರ್ಷದ ಬಾಲಕಿಗೆ ಕರುಳಿನ ಚಿಕಿತ್ಸೆ ನೀಡಿ ಡಿಸಾcರ್ಜ್ ಮಾಡಲಾಗಿತ್ತು. ಈ ವೇಳೆ ಲಾಕ್‌ಡೌನ್ ಘೋಷಿಸಿದ್ದರಿಂದ ಆಕೆ ತಂದೆ ರಾಜೇಶ್ ಬಸ್ಕೆ, ಊರು ಸೇರಲು ಆ್ಯಂಬುಲೆನ್ಸ್ ಚಾಲಕನನ್ನು ಸಂಪರ್ಕಿಸಿದಾಗ, ದುಬಾರಿ ಹಣ ಕೇಳಿದ್ದರು. ದಿನಗೂಲಿ ನೌಕರರಾಗಿದ್ದರಿಂದ ಅವರು ಈ ಹಣವನ್ನು ಭರಿಸಲಾಗದೇ ಅಸಹಾಯಕರಾಗಿ ನಿಂತಿದ್ದರು. ಈ ದೃಶ್ಯವು ಆಸ್ಪತ್ರೆ ವೈದ್ಯ ಡಾ| ಬಬ್ಲು ಸರ್ದಾರ್ ಮನಕಲಕಿತು.
ಮರುದಿನ ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಗೆ ಹೋಗಬೇಕಿತ್ತು. ಆದರೂ ಕೂಡ ಸಂಜೆ 6 ಗಂಟೆಗೆ ಆಸ್ಪತ್ರೆ ಬಿಟ್ಟ ವೈದ್ಯರು ಮಧ್ಯರಾತ್ರಿ 3 ಗಂಟೆಗೆ ಬಾಲಕಿಯ ತವರು ಬಿರ್ಬೂಮ್ ತಲುಪಿದ್ದಾರೆ. ಈ ಗ್ರಾಮ ಝಾರ್ಖಂಡ್ ಗಡಿಯಲ್ಲಿದೆ. ಊಟವನ್ನೂ ಮಾಡದೇ ತಮ್ಮದೇ ಖರ್ಚಿನಲ್ಲಿ ರೋಗಿಯನ್ನು ಅಷ್ಟು ದೂರದ ಮನೆಗೆ ತಲುಪಿಸಿ ಹೃದಯ ವೈಶಾಲ್ಯ ತೋರಿದ್ದಾರೆ.
ಮರುದಿನ ಡಾ| ಬಬ್ಲು ಸರ್ದಾರ್ ಆಸ್ಪತ್ರೆ ತಲುಪಿದಾಗ ಅವರ ಕಾರು 540 ಕಿ.ಮೀ. ಸಂಚರಿಸಿತ್ತು. ಈ ವೈದ್ಯರು ತಮಗೆ ದೇವರಿದ್ದಂತೆ ಎಂದು ಬಾಲಕಿಯ ತಂದೆ ಗುಣಗಾನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.