![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
Team Udayavani, Jan 29, 2025, 2:45 PM IST
ಲಕ್ನೋ: ಎದೆ ನೋವಿನಿಂದ ಆಸ್ಪತ್ರೆಗೆ ಬಂದ ಮಹಿಳೆಗೆ ಚಿಕಿತ್ಸೆ ನೀಡುವ ಬದಲು ವೈದ್ಯರೊಬ್ಬರು ಇನ್ಸ್ಟಾಗ್ರಾಮ್ ರೀಲ್ಸ್ ನೋಡುತ್ತಾ ಕೂತ ಘಟನೆಯ ವಿಡಿಯೋ ವೈರಲ್ ಆಗಿದೆ.
ಇಲ್ಲಿನ ಮಹಾರಾಜ ತೇಜ್ ಸಿಂಗ್ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೋಗಿಯ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಆಗಿದ್ದೇನು?: ಪ್ರವೇಶ್ ಕುಮಾರಿ ಎನ್ನುವವರು ತೀವ್ರ ಎದೆನೋವು ಆಗುತ್ತಿದೆ ಎಂದು ಮಗನಿಗೆ ಹೇಳಿದ್ದಾರೆ. ಮಗ ಗುರುಶರಣ್ ಸಿಂಗ್ ತಾಯಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಮಯದಲ್ಲಿ ಅಲ್ಲಿ ಆದರ್ಶ್ ಸೆಂಗರ್ ಎನ್ನುವ ಡಾಕ್ಟರ್ ಕರ್ತವ್ಯದಲ್ಲಿದ್ದರು.
ಎದೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಬೆಡ್‌ನಲ್ಲಿ ಮಲಗಿಸಲಾಗಿದೆ. ಈ ವೇಳೆ ಡಾಕ್ಟರ್ ಆದರ್ಶ್ ಅಲ್ಲೇ ಕೂತಿದ್ದು, ರೋಗಿಯನ್ನು ಪರೀಕ್ಷೆ ಮಾಡುವ ಬದಲಿಗೆ ಇನ್ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ರೀಲ್ಸ್ ನೋಡುತ್ತಿದ್ದರು. ಹೀಗಾಗಿ ರೋಗಿಯನ್ನು ನರ್ಸ್ ಹಾಗೂ ಇತರೆ ಸಿಬ್ಬಂದಿಗಳು ಪರೀಕ್ಷೆ ಮಾಡಲು ಶುರು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
At the #Mainpuri district hospital in #UttarPradesh, a 60-year-old woman, #PraveshKumari, died of a heart attack while the doctor on duty, #DrAdarshSanger, allegedly watched reels on his mobile phone.
The woman’s family claims that crucial time was lost due to the doctor’s… pic.twitter.com/ZGLcD5ZExg
— Hate Detector 🔍 (@HateDetectors) January 29, 2025
“ನನ್ನ ತಾಯಿಯ ಸ್ಥಿತಿ ಹದಗೆಟ್ಟಿದ್ದರೂ, ಡಾ . ಸೆಂಗಾರ್ ಚಿಕಿತ್ಸೆ ನೀಡಲು ಬರಲೇ ಇಲ್ಲ. ಬಹಳ ಸಮಯದ ನಂತರ ಎದ್ದು ಬಂದು ನೋಡಿದಾಗ, ಅವರು ಆದಾಗಲೇ ಮೃತಪಟ್ಟಿದ್ದರು. ಈ ಸಮಯದಲ್ಲಿ ಹತಾಶೆಯಿಂದ ನನ್ನ ಕಪಾಳಕ್ಕೆ ಬಾರಿಸಿದ್ದಾರೆ” ಮಹಿಳೆಯ ಮಗ ಗುರುಶರಣ್ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಕಂಡ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಮದನ್ ಲಾಲ್ ಕೂಡ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
“ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಕುಟುಂಬಸ್ಥರ ಆರೋಪ ನಿಜವೆಂದು ಕಂಡುಬಂದರೆ ವೈದ್ಯರ ವಿರುದ್ಧ ಕಠಿಣ ಇಲಾಖಾ ಕ್ರಮ ಜರುಗಿಸಲಾಗುವುದು” ಎಂದು ಮದನ್ ಲಾಲ್ ಹೇಳಿದ್ದಾರೆ.
ಘಟನೆಯ ಸಂಬಂಧ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು
Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
You seem to have an Ad Blocker on.
To continue reading, please turn it off or whitelist Udayavani.