ದಾಖಲೆ ವೀರನಿಗೆ ಡಾಕ್ಟರೇಟ್!
Team Udayavani, May 22, 2017, 10:41 AM IST
ಹೊಸದಿಲ್ಲಿ: ಎಂಬಿಎ ಡಿಗ್ರಿ ಪಡೆದು, ಸಂಬಳ ಬರುವ ಉದ್ಯೋಗ ಹಿಡಿದು ಅಥವಾ ಸ್ವಂತದ್ದೊಂದು ವ್ಯವಹಾರ ಆರಂಭಿಸಿ ಲೈಫಲ್ಲಿ ಸೆಟ್ಲ ಆಗೋರನ್ನ ನೋಡಿದ್ದೀರ. ಆದರೆ ನೀವೀಗ ಓದುತ್ತಿರುವುದು ಎಂಬಿಎ ಓದಿದ ಅನಂತರ ದಾಖಲೆ ಮೇಲೊಂದು ದಾಖಲೆ ಮಾಡಿ, ರೆಕಾರ್ಡ್ ಬ್ರೇಕಿಂಗ್‌ನಲ್ಲಿ ಡಾಕ್ಟರೇಟ್ ಪಡೆದ ದಾಖಲೆ ವೀರನ ಬಗ್ಗೆ!
ಬರೋಬ್ಬರಿ 180 ಕೆ.ಜಿ. ತೂಕದ ಬನ್, 14 ಅಡಿ ಉದ್ದ ಮತ್ತು 6 ಅಡಿ ಅಗಲದ ಜಗತ್ತಿನ ಅತಿ ದೊಡ್ಡ ಹೂರಣಕಡುಬು, 14,353 ಸಣ್ಣ ಸಣ್ಣ ಸಕ್ಕರೆ ಅಚ್ಚುಗಳಿಂದ ಮಾಡಿದ ಬೃಹತ್ ಶುಗರ್ ಕ್ಯೂಬ್ ಹಾಗೂ 32 ಚದರ ಅಡಿ ವಿಸ್ತೀರ್ಣದ “ಮಲ್ಪುವಾ’ ಎಂಬ ಸಿಹಿ ಖಾದ್ಯ! ಇವಿಷ್ಟೂ ಜೈಪುರದ ಪ್ರೊಫೆಸರ್ ಮನೋಜ್ ಶ್ರೀವಾಸ್ತವ್ ಅವರ, ಲಿಮ್ಕಾ ಗಿನ್ನೆಸ್ ವಿಶ್ವ ದಾಖಲೆಯ ಸ್ಯಾಂಪಲ್‌ಗಳು.
ಮಣಿಪಾಲ ವಿವಿಗೆ ಸೇರಿರುವ ಜೈಪುರದ ಸ್ಕೂಲ್ ಆಫ್ ಹೊಟೇಲ್ ಮ್ಯಾನೇಜೆ¾ಂಟ್‌ನ ಮುಖ್ಯಸ್ಥರಾಗಿರುವ ಶ್ರೀವಾಸ್ತವ್ ಎಂಬಿಎ ಪದವೀಧರರು. ಹೊಟೇಲ್ ಮ್ಯಾನೇಜೆ¾ಂಟ್‌ಗೆ ಸೇರಿದ ಅನಂತರ ಅವರ ಆಸಕ್ತಿ ವಿಶ್ವ ದಾಖಲೆಯತ್ತ ಹೊರಳಿದ್ದು, 2008ರಲ್ಲಿ 180 ಕಿಲೋ ತೂಕದ, ವಿಶ್ವದ ಅತಿ ದೊಡ್ಡ ಬ್ರೆಡ್ ಪೀಸ್ ತಯಾರಿಸಿ ಗಿನ್ನೆಸ್ ಪುಸ್ತಕ ಸೇರಿದರು. ಅನಂತರ ಜಗತ್ತಿನಲ್ಲೇ ಅತಿ ದೊಡ್ಡವು ಎನಿಸಿಕೊಳ್ಳುವಂತಹ ವಿವಿಧ ಖಾದ್ಯಗಳನ್ನು ತಯಾರಿಸಿ 8 ವಿಶ್ವ ದಾಖಲೆ ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಶ್ರೀವಾಸ್ತವ್ ಅವರ ಈ ಸಾಧನೆ ಮೆಚ್ಚಿದ ಬ್ರಿಟನ್ ಮೂಲದ ವರ್ಲ್ಡ್ ರೆಕಾರ್ಡ್ಸ್ ಯೂನಿವರ್ಸಿಟಿ ಇವರಿಗೆ ಡಾಕ್ಟರೇಟ್ ನೀಡಿದೆ. ಈ ಗೌರವಕ್ಕೆ ಪಾತ್ರರಾದ ಜಗತ್ತಿನ 13 ಮಂದಿಯಲ್ಲಿ ಶ್ರೀವಾಸ್ತವ್ ಕೂಡ ಒಬ್ಬರು ಎಂಬುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.