ಹೊಟ್ಟೆಯಲ್ಲಿ 1.5 ಕೆಜಿ ಆಭರಣಗಳು!
Team Udayavani, Jul 26, 2019, 5:00 AM IST
ಕೋಲ್ಕತಾ: ಮಾನಸಿಕ ಸ್ತಿಮಿತ ಕಳೆದುಕೊಂಡಿ ರುವ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ವೈದ್ಯರಿಗೆ ಸಿಕ್ಕಿದ್ದೇನು ಗೊತ್ತಾ? ಬರೋಬ್ಬರಿ 1.5 ಕೆ.ಜಿ. ತೂಕದ ಆಭರಣಗಳು ಮತ್ತು ಕರೆನ್ಸಿ ನಾಣ್ಯಗಳು!
ಅಚ್ಚರಿಯಾದರೂ ಇದು ಸತ್ಯ. ಪಶ್ಚಿಮ ಬಂಗಾಲದ ಬಿಭೂìಮ್ ಜಿಲ್ಲೆಯ ಸರಕಾರಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಇವುಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 5 ರೂ. ಮತ್ತು 10 ರೂ. ಮುಖಬೆಲೆಯ 90 ನಾಣ್ಯಗಳು, ಚಿನ್ನದ ಸರ, ಮೂಗುತಿ, ಓಲೆ, ಬಳೆಗಳು, ಕಾಲ್ಗೆಜ್ಜೆ ಮುಂತಾದ ಆಭರಣಗಳು 26 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದವು. ಈ ಆಭರಣಗಳು ಕಂಚು, ತಾಮ್ರ ಮತ್ತು ಚಿನ್ನದ್ದಾಗಿವೆ ಎಂದು ವೈದ್ಯರು ಹೇಳಿದ್ದಾರೆ.
“ಮನೆಯಲ್ಲಿ ಆಭರಣ ಕಾಣೆಯಾಗುತ್ತಿತ್ತು. ಮಗಳನ್ನು ಕೇಳಿದರೆ ಆಕೆ ಉತ್ತರ ನೀಡದೇ ಅಳುತ್ತಿದ್ದಳು. ಹಲವಾರು ದಿನಗಳಿಂದ ಊಟ ಮಾಡುತ್ತಿರಲಿಲ್ಲ. ಆಕೆಯ ಮೇಲೆ ಎಷ್ಟೇ ನಿಗಾ ಇಟ್ಟರೂ ಆಕೆ ಇವುಗಳನೆಲ್ಲ ಸೇವಿಸಿದ್ದಾಳೆ’ ಎಂದು ರೋಗಿಯ ತಾಯಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.