ಪ್ಲಾಸ್ಮಾ ಥೆರಪಿಯಿಂದ ಸೋಂಕಿತರು ಗುಣಮುಖರಾಗುತ್ತಿದ್ದಾರೆಯೇ..? : ತಜ್ಞರು ಹೇಳಿದ್ದೇನು..?
ಶ್ರೀರಾಜ್ ವಕ್ವಾಡಿ, May 13, 2021, 8:09 PM IST
ಕೋವಿಡ್ ಸೋಂಕು ಇಡಿ ವಿಶ್ವವನ್ನು ವ್ಯಾಪಿಸಿಕೊಂಡು ಒಂದು ವರ್ಷ ಕಳೆದಿದೆ. ಇದುವರೆಗೂ ಸೋಂಕನ್ನು ಹೋಗಲಾಡಿಸುವಂತಹ ಯಾವ ಔಷಧವೂ ಬಂದಿಲ್ಲ.
ಸದ್ಯಕ್ಕೆ, ಕೋವಿಡ್ ಚಿಕಿತ್ಸೆಗೆ ಈ ಹಿಂದೆ ಬೇರೆ ಬೇರೆ ರೋಗಗಳಿಗೆ ಬಳಸುತ್ತಿದ್ದ ಔಷಧಿಗಳನ್ನೇ ಬಳಸಲಾಗುತ್ತಿದೆ. ಕೆಲವು ರೋಗಿಗಳಿಗೆ ಇದು ಫಲಕಾರಿಯಾಗುತ್ತಿದೆ. ಇದರೊಂದಿಗೆ ಕೋವಿಡ್ ಸೋಂಕನ್ನು ತಡೆಗಟ್ಟಲು ಪ್ಲಾಸ್ಮಾ ಥೆರಪಿ ಅಥವಾ ಪ್ಲಾಸ್ಮಾ ಚಿಕಿತ್ಸೆಯನ್ನು ಭಾರತದಲ್ಲಿ ಹೆಚ್ಚಾಗಿ ಮಾಡಲಾಗುತ್ತಿದೆ. ಆದರೇ, ಇದು ಎಷ್ಟರ ಮಟ್ಟಿಗೆ ಸೋಂಕನ್ನು ಹೋಗಲಾಡಿಸಲು ಸಹಕಾರಿಯಾಗಿದೆ..? ಇದು ಸೋಂಕಿನ ನಿವಾರಣಾಕಾರಿಯಾಗಿ ಯಶಸ್ಸನ್ನು ಕಂಡಿದೆಯೇ..? ಆ ಕುರಿತಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : ರಾಜ್ಯದಲ್ಲಿಂದು 35,297 ಹೊಸ ಕೋವಿಡ್ ಪ್ರಕರಣ ಪತ್ತೆ: 344 ಜನರ ಸಾವು, 34,057 ಮಂದಿ ಗುಣಮುಖ
ಹೌದು.. ಮಾರಕ ಕೋವಿಡ್ ವೈರಸ್ ಗೆ ಈವರೆಗೂ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು, ಸೋಂಕಿತರಿಗೆ ಯಾವ ಚಿಕಿತ್ಸೆ ನೀಡಬೇಕು ಎಂಬ ಗೊಂದಲ ಇನ್ನೂ ವೈದ್ಯರಲ್ಲಿದೆ. ಇದರ ನಡುವೆಯೇ ಕೆಲ ದೇಶಗಳಲ್ಲಿ ಕೋವಿಡ್ ಸೋಂಕು ಹರಡಿದ ಆರಂಭಿಕ ಸಂದರ್ಭದಲ್ಲಿ ನಡೆದ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಸೋಂಕಿತರಲ್ಲಿ ಸಕಾರಾತ್ಮಕ ಚೇತರಿಕೆ ತಂದಿದ್ದು, ಇದೇ ಪ್ಲಾಸ್ಮಾ ಥೆರಪಿ ಕೋವಿಡ್ ವೈರಸ್ ನಿಂದ ಪಾರಾಗಲು ಸಂಜೀವಿನಿಯಾಗುತ್ತಿದೆ ಎಂದು ನಂಬಲಾಗಿತ್ತು.
ಪ್ಲಾಸ್ಮಾ ಥೆರಪಿ ಎಂದರೇನು..?
ಯಾವುದೇ ರೋಗದ ವಿರುದ್ಧ ಹೋರಾಡಲು ಮಾನವನ ದೇಹವು ರೋಗನಿರೊಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ರೋಗವನ್ನು ಉಂಟು ಮಾಡುವ ವೈರಾಣುಗಳ ವಿರುದ್ಧ ಹೋರಾಡಲು ದೇಹವು ಪ್ರತಿರೋಧಕ ಗುಣಗಳನ್ನು ಬೆಳೆಸಿಕೊಂಡಿರುತ್ತವೆ. ಕೋವಿಡ್–19 ರೋಗದಿಂದ ಗುಣಮುಖರಾದವರ ದೇಹದಲ್ಲೂ ಇಂತಹ ಪ್ರತಿರೋಧ ಕಣಗಳು ಅಭಿವೃದ್ಧಿಯಾಗಿರುತ್ತವೆ. ಇವು ರಕ್ತದ ದುಗ್ಧರಸದಲ್ಲಿ (ರಕ್ತದಲ್ಲಿರುವ ಪಾರದರ್ಶಕ ದ್ರವ) ಇರುತ್ತವೆ.
ರೋಗದಿಂದ ಗುಣಮುಖರಾದವರ ದುಗ್ಧರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದುಕೊಂಡು, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಹೀಗೆ ಒಬ್ಬ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯಿಂದ ಎರಡು ಡೋಸ್ ನಷ್ಟು ಪ್ರತಿರೋಧ ಕಣಗಳನ್ನು ತೆಗೆಯಬಹುದಾಗಿದೆ. ಒಬ್ಬ ರೋಗಿಗೆ ಒಂದು ಡೋಸ್ ನೀಡಬೇಕಾಗುತ್ತದೆ. ಹೀಗಾಗಿ ಒಬ್ಬ ಗುಣಮುಖನಾದ ಸೋಂಕಿತನಿಂದ ಇಬ್ಬರು ರೋಗಿಗಳಿಗೆ ಪ್ರತಿರೋಧ ಕಣಗಳನ್ನು ನೀಡಿ ಅವರಿಬ್ಬರನ್ನು ಗುಣಪಡಿಸಬಹುದಾಗಿದೆ.
ಪ್ಲಾಸ್ಮಾ ಥೆರಪಿಯಿಂದ ಸೋಂಕಿತರು ಗುಣಮುಖರಾಗುವುದಿಲ್ಲ..!?
ದೇಶ ಕೋವಿಡ್ ಸೋಂಕಿನ ಎರಡನೇ ಅಲೆಯ ಕಾರಣದಿಂದ ತತ್ತರಿಸಿ ಹೋಗಿದೆ. ಲಕ್ಷಾಂತರ ಮಂದಿ ದೇಶದಲ್ಲಿ ಕೋವಿಡ್ ಸೋಂಕಿಗೆ ದೇಶದಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕಿನ ಚಿಕಿತ್ಸೆಗೆ ಬೇಕಾಗುವ ಸೂಕ್ತವಾದ ಔಷದ ಇದುವರೆಗೂ ಎಲ್ಲಿಯೂ ಲಭ್ಯವಿಲ್ಲದ ಕಾರಣ ಪ್ಲಾಸ್ಮಾ ಥೆರಪಿಗೆ ಹೆಚ್ಚಿನವರು ಮೊರೆ ಹೋಗುತ್ತಿರುವ ನಡುವೆಯೇ ಈ ಪಾಸ್ಮಾ ಥೆರಪಿ ಕೋವಿಡ್ ಸೋಂಕಿನ ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಹೌದು, 18 ತಜ್ಙ ವೈದ್ಯರು, ಸಾರ್ವಜನಿಕ ಆರೋಗ್ಯ ವೃತ್ತಿಪರರು ಮತ್ತು ವಿಜ್ಞಾನಿಗಳು ಸೇರಿ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊಫೆಸರ್ ಕೆ ವಿಜಯ್ ರಾಘವನ್ ಅವರನ್ನು ಉದ್ದೇಶಿಸಿ ಪತ್ರವೊಂದನ್ನು ಬರೆದಿದ್ದು, ಭಾರತವು ಕೋವಿಡ್ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿಯನ್ನು ಬಳಸುವುದನ್ನು ನಿಲ್ಲಿಸಬೇಕು ಏಕೆಂದರೆ ಸಂಶೋಧನೆಯಿಂದ ತಿಳಿದು ಬಂದ ವರದಿಯ ಪ್ರಕಾರ, ಸೋಂಕಿತರಿಗೆ ಪ್ಲಾಸ್ಮಾ ನೀಡುವುದರಿಂದ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ಯುನೈಟೆಡ್ ಕಿಂಗ್ ಡಂನಲ್ಲಿ, 11,000 ಕ್ಕೂ ಹೆಚ್ಚು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದವರಿಗೆ ಈ ಪ್ಲಾಸ್ಮಾ ಥರಪಿ ಚಿಕಿತ್ಸೆಯನ್ನು ನೀಡಲಾಗಿತ್ತು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಅರ್ಜೆಂಟೀನಾದಲ್ಲಿ ನಡೆಸಲಾದ ಸಂಶೋಧನೆಯಲ್ಲಿಯೂ ಇದೇ ರೀತಿಯ ಫಲಿತಾಂಶ ದೊರಕಿದೆಯೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ
ಇನ್ನು, ಭಾರತ ಈ ಕುರಿತಾಗಿ ಅಧ್ಯಯನವನ್ನು ನಡೆಸಿದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ ಸಿ ಎಂ ಆರ್) ಬೆಂಬಲಿದೆ. ಅಧ್ಯಯನಗಳು 39 ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳನ್ನು ಒಳಗೊಂಡಿವೆ.
ಪ್ಲಾಸ್ಮಾ ಥೆರಪಿಯಿಂದ ಯಾವುದೇ ಪ್ರಯೋಜನವಾಗದೆ ಇರುವಾಗಲೂ ಭಾರತದಲ್ಲಿ ಪ್ಲಾಸ್ಮಾ ಥೆರಪಿಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಈ ಎಲ್ಲಾ ವೈದ್ಯಕೀಯ ಸಂಶೋಧನಾ ವರದಿಗಳ ಹೊರತಾಗಿಯೂ ವೈದ್ಯರು ಪ್ಲಾಸ್ಮಾ ಥೆರಪಿಯನ್ನೇ ಚಿಕಿತ್ಸೆಗೆ ಸೂಚಿಸುತ್ತಿದ್ದಾರೆ.
ಪತ್ರಕ್ಕೆ ಸಹಿ ಹಾಕಿದ 18 ತಜ್ಞ ವೈದ್ಯರಲ್ಲಿ ಒಬ್ಬರಾದ ಪ್ರೊಫೆಸರ್ ವಿವೇಕಾನಂದ ಜ್ಹಾ, ಪ್ಲಾಸ್ಮಾವನ್ನು ಪರೀಕ್ಷಿಸದೆ ಬಳಸುವುದರಿಂದ ಹೆಚ್ಚಿನ ಸಮಸ್ಯೆಗಳು ಉಂಟಾಗಬಹುದು. ಇದರಿಂದ ವೈರಸ್ ನ ಹೊಸ ರೂಪಾಂತರಗಳು ಹರಡುವ ಸಂಭವವೂ ಇದೆ ಎಂದು ಹೇಳಿದ್ದಾರೆ.
ಪ್ಲಾಸ್ಮಾವನ್ನು ಕ್ಲಿನಿಕಲ್ ಪ್ರಯೋಗದಲ್ಲಿ ಮಾತ್ರ ಬಳಸಬೇಕು ಮತ್ತು ಆಸ್ಪತ್ರೆಗೆ ದಾಖಲಾದ ರೋಗಿಗಳ ಮೇಲೆ ಅಲ್ಲ ಎಂದು ಇನ್ ಫೆಕ್ಶಿಯಸ್ ಡಿಸೀಸ್ ಸೊಸೈಟಿ ಆಫ್ ಅಮೇರಿಕಾ ಕಳೆದ ವರ್ಷ ಹೇಳಿತ್ತು.
ಇನ್ನು, ಕೋವಿಡ್ ಸೋಂಕನ್ನು ಹೋಗಲಾಡಿಸಲು ಪ್ಲಾಸ್ಮಾ ಥೆರಪಿ ಎಷ್ಟು ಪ್ರಯೋಜನ ಎಂಬುದನ್ನು ಅಧ್ಯಯನ ಮಾಡುತ್ತಿದ್ದ ಬ್ರಿಟನ್ ಕಳೆದ ಜನವರಿ(2021)ಯಲ್ಲಿ ಪ್ಲಾಸ್ಮಾ ಥೆರಪಿಯಿಂದ ಏನೂ ಪ್ರಯೋಜನ ಕಂಡು ಬಂದಿಲ್ಲವೆಂಬ ಉದ್ದೇಶದಿಂದ ಅಧ್ಯಯನವನ್ನು ಅರ್ಧಕ್ಕೆ ಕೈ ಬಿಟ್ಟಿತ್ತು.
ಆದಾಗ್ಯೂ, ವೈದ್ಯರು ಇದನ್ನು ಸೂಚಿಸುವುದಷ್ಟೇ ಅಲ್ಲ, ಪ್ಲಾಸ್ಮಾ ದಾನವನ್ನು ಉತ್ತೇಜಿಸಲು ದೇಶದಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆಯುತ್ತಿದೆ.
ಸೋಂಕಿತ ರೋಗಿಗಳಿಗೆ ಯಾವ ಔಷಧಿಗಳನ್ನು ಶಿಫಾರಸು ಮಾಡಬಹುದು, ಯಾವಾಗ ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕು ಮತ್ತು ಯಾವಾಗ ರೆಮ್ ಡೆಸಿವಿರ್ ನನ್ನು ನೀಡಬೇಕು ಎಂಬ ವಿಚಾರಗಳನ್ನು ಒಳಗೊಂಡಂತೆ. ಸೋಂಕಿತ ರೋಗಿಗಳಿಗೆ ವೈದ್ಯರು ಏನು ಮಾಡಬಹುದು ಎಂಬ ವಿಚಾರವನ್ನು ಭಾರತದ ವೈದ್ಯರಿಗಾಗಿ ಐ ಸಿ ಎಂ ಆರ್ ನ ಮಾರ್ಗಸೂಚಿಗಳು ಸ್ಪಷ್ಟವಾಗಿ ತಿಳಿಸಿದೆ.
ಐ ಸಿ ಎಂ ಆರ್ ನ ಮಾರ್ಗಸೂಚಿಗಳು ಇನ್ನೂ ಪ್ಲಾಸ್ಮಾ ಥೆರಪಿಯ ಬಳಕೆಯನ್ನು ಪಾಲಿಸುವಂತೆ ಹೇಳುತ್ತದೆ ಮತ್ತು ಅದನ್ನೇ ವೈದ್ಯರು ಅನುಸರಿಸುತ್ತಾರೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಮೂರು ರಿಂದ ಏಳು ದಿನಗಳವರೆಗೆ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವವರಿಗೆ ರೋಗಿಗಳಿಗೆ ಚಿಕಿತ್ಸೆಯ ಪ್ರೋಟೋಕಾಲ್ ನ ಭಾಗವಾಗಿ ಪ್ಲಾಸ್ಮಾ ಥರಪಿಯನ್ನು ನೀಡಲಾಗುತ್ತಿದೆ.
ಆದಾಗ್ಯೂ, ಎಲ್ಲರಿಗೂ ಪ್ಲಾಸ್ಮಾ ಥೆರಪಿಯನ್ನು ನೀಡಲಾಗುವುದಿಲ್ಲ. ರೋಗಲಕ್ಷಣಗಳು ಪ್ರಾರಂಭವಾದ ಏಳು ದಿನಗಳಲ್ಲಿ ಅವರಿಗೆ ಪ್ಲಾಸ್ಮಾ ಥೆರಪಿಯನ್ನು ನೀಡಲಾಗುತ್ತದೆ. ಆದರೆ ಭಾರತದಲ್ಲಿ ಎಷ್ಟು ರೋಗಿಗಳಿಗೆ ಈ ಹಂತದಲ್ಲಿ ಪ್ಲಾಸ್ಮಾ ಥೆರಪಿಯನ್ನು ನೀಡಲಾಗಿದೆ ಮತ್ತು ನೀಡಲಾಗುತ್ತಿದೆ ಎನ್ನುವುದರ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಒಟ್ಟಿನಲ್ಲಿ, ತಜ್ಞ ವೈದ್ಯರ ಸ0ಶೋಧನೆ, ಈ ಪ್ಲಾಸ್ಮಾ ಥರಪಿಯಿಂದ ಯಾವುದೇ ಪ್ರಯೋಜನವಿಲ್ಲ. ಮತ್ತು ಇದು ರೂಪಾಂತರಿ ಸೋಂಕಿನ ಹರಡುವಿಕೆಗೆ ಕೂಡ ಕಾರಣವಾಗಬಹುದು ಎಂದು ಹೇಳಿದೆ.
ಆಮ್ಲಜನಕ, ಹಾಗೂ ಸೂಕ್ತವಾದ ಔಷಧಿಗಳಿಂದ ಮಾತ್ರ ಕೋವಿಡ್ ಚಿಕಿತ್ಸೆಗಳಿಗೆ ಪ್ರಯೋಜನವಾಗುತ್ತವೆ. ಲಸಿಕೆಗಳು ಸೋಂಕು ಬಾರದಂತೆ ತಡೆಯುತ್ತವೆ ಎಂದು ತಜ್ಞ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : ನಿರ್ಬಂಧಗಳು ಜಾರಿಯಾದ ಬಳಿಕ ಸೋಂಕು ಪ್ರಕರಣಗಳಲ್ಲಿ ಇಳಿಕೆ: ಸಿಎಂ ಯಡಿಯೂರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
ರಾಜಸ್ಥಾನದಲ್ಲಿ ಮತ್ತೊಂದು ಬೋರ್ ವೆಲ್ ದುರಂತ… 150 ಅಡಿ ಆಳದಲ್ಲಿ ಸಿಲುಕಿದ 3 ವರ್ಷದ ಬಾಲಕಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ಕೊನೆಗೂ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.