ಯಾವುದಕ್ಕೂ ಹೆದರುವವನಲ್ಲ… ಮನೆ ಮೇಲೆ ಮಸಿ ಎರಚಿದ ಕಿಡಿಗೇಡಿಗಳಿಗೆ ಓವೈಸಿ ಪ್ರತಿಕ್ರಿಯೆ
Team Udayavani, Jun 28, 2024, 1:54 PM IST
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಅಶೋಕ ರಸ್ತೆಯಲ್ಲಿರುವ ತನ್ನ ಮನೆಯ ಮೇಲೆ ಕಿಡಿಗೇಡಿಗಳ ಗುಂಪೊಂದು ಮಸಿ ಎರಚಿರುವುದಾಗಿ ಎಐಎಂಐಎಂ ಮುಖ್ಯಸ್ಥ ಮತ್ತು ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಹೇಳಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ್ದರು ಓವೈಸಿ ಯಾ ಈ ಹೇಳಿಕೆಗೆ ಬಿಜೆಪಿ ಸೇರಿದಂತೆ ಹಲವರು ಕಿಡಿಕಾರಿದ್ದರು ಇದಾದ ಬಳಿಕ ದೆಹಲಿಯ ಅಶೋಕ ರಸ್ತೆಯ ಬಳಿ ಇರುವ ನಿವಾಸದ ಮೇಲೆ ಮಸಿ ಎರಚಲಾಗಿತ್ತು, ಈ ಕುರಿತು X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ನನ್ನ ಗುರುವಾರ ದುಷ್ಕರ್ಮಿಗಳ ಗುಂಪೊಂದು ದೆಹಲಿಯ ನಿವಾಸದ ಮೇಲೆ ಮಸಿ ಎರಚಿದ್ದಾರೆ ಇದರ ಕುರಿತು ಪೊಲೀಸ್ ಠಾಣೆಯ ಅಧಿಕಾರಿಗಳ ಬಳಿ ಹೇಳಿಕೊಂಡರೆ ಅವರು ಅಸಹಾಯಕತೆಯನ್ನು ತೋರಿಸಿದ್ದಾರೆ ಈ ರೀತಿ ನಡೆದಿರುವುದು ಇದೆ ಮೊದಲಲ್ಲ ಹಾಗಾಗಿ ನಾನು ಇಂತಹ ಗೊಡ್ಡು ಬೆದರಿಕೆಗೆ ಹೆದರುವವನಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹಾಗೂ ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ನನ್ನ ಮನೆಯ ಮೇಲೆ ಆಗಾಗ ಕಿಡಿಗೇಡಿಗಳಿಂದ ಮಸಿ ಎಸೆಯುವುದು, ಕಲ್ಲು ತೂರಾಟ ನಡೆಸುವುದು ಸೇರಿದಂತೆ ಲೆಕ್ಕಕ್ಕೆ ಸಿಗದಷ್ಟು ಬಾರಿ ದಾಳಿಗಳು ನಡೆದಿದೆ ಹಾಗಾಗಿ ಕಿಡಿಗೇಡಿಗಳಿಗೆ ನಾನು ಹೇಳುವುದೇನೆಂದರೆ ಧೈರ್ಯವಿದ್ದರೆ ನನ್ನನ್ನು ಎದುರಿಸಿ ಅದು ಬಿಟ್ಟು ಮನೆಯ ಹೊರಗೆ ಕಲ್ಲು ತೂರಾಟ ನಡೆಸುವುದು, ಮಸಿ ಎಸೆಯುವುದು ಇದಕ್ಕೆಲ್ಲ ನಾನು ಹೆದರುವವನಲ್ಲ ಎಂದು ಹೇಳಿದ್ದಾರೆ.
Some “unknown miscreants” vandalised my house with black ink today. I have now lost count the number of times my Delhi residence has targeted. When I asked @DelhiPolice officials how this was happening right under their nose, they expressed helplessness. @AmitShah this is… pic.twitter.com/LmOuXu6W63
— Asaduddin Owaisi (@asadowaisi) June 27, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.