ಡೊಕ್ಲಾಮ್‌ನಂತಹ ಘಟನೆಗಳು ಇನ್ನಷ್ಟು ಹೆಚ್ಚಾಗಬಹುದು
Team Udayavani, Aug 27, 2017, 12:41 PM IST
ಹೊಸದಿಲ್ಲಿ : ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಕ್ಕೆ ಕಾರಣವಾಗಿರುವ ಡೊಕ್ಲಾಮ್‌ನಂತಹ ಘಟನೆಗಳು ಇನ್ನಷ್ಟು ಹೆಚ್ಚಬಹುದು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಭಾರತದ ಭೌಗೋಳಿಕತೆಯ ಪ್ರಸ್ತುತ ಕಾರ್ಯತಂತ್ರದ ಸವಾಲುಗಳ ಕುರಿತು ಬಿ.ಸಿ. ಜೋಷಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಜ.ಬಿಪಿನ್ ರಾವತ್ ‘ಚೀನಾ ಸದ್ಯ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನ ಪಡುತ್ತಿದೆ. ನಾವು ಈ ಬಗ್ಗೆ ಚಿಂತಿಸಬೇಕಾದ ಅಗತ್ಯ ಇದೆ. ಮುಂದಿನ ದಿನಗಳಲ್ಲಿ ಚೀನಾದ ಯತ್ನ ಇನ್ನಷ್ಟು ಹೆಚ್ಚಬಹುದು ಎಂದಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾವತ್ ‘ನಾವು ಧೈರ್ಯಗುಂದಬಾರದು.ನಾವೀಗ ಈ ಸಮಸ್ಯೆ ಪರಿಹರಿಸಬಹುದು ಎಂದು ಹೇಳಬಹುದು, ಆದರೆ ನಮ್ಮ ಪಡೆಗಳು ಗಡಿಯಲ್ಲಿ ಮತ್ತೆ ಡೊಕ್ಲಾಮ್‌ನಂತೆ ಬೇರೆ ಕಡೆಯಲ್ಲಿ ನಡೆಯುವುದಿಲ್ಲ ಎಂದು ಸುಮ್ಮನಿರಬಾರದು. ಗಡಿಯಲ್ಲಿ ಸರ್ವ ಸನ್ನದ್ಧವಾಗಿರುವುದು ಸದ್ಯ ಅಗತ್ಯವಾಗಿದೆ. ನಿಮ್ಮ ಕಾವಲನ್ನು ಯಾವುದೇ ಕಾರಣಕ್ಕೂ ಸಡಿಲ ಮಾಡಬೇಡಿ ಎನ್ನುವುದು ನಾನು ಸೇನೆಗೆ ನೀಡುವ ಸಂದೇಶ’ ಎಂದರು.
ಡೋಕ್ಲಾಂ ವಿವಾದ ಜೀವಂತವಾಗಿರುವ ಹಿನ್ನೆಲೆಯಲ್ಲಿ ಚೀನ ಭಾರತದ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಗಡಿಯ ವಿವಿಧ ಭಾಗಗಳಲ್ಲಿ ಒಳನುಗ್ಗುವ, ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಯತ್ನಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಈಗಾಗಲೆ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ. ಇತ್ತೀಚೆಗೆ ಲಡಾಖ್‌ನ ಪೆನುಗಾಂಗ್ ಸರೋವರ ಪ್ರದೇಶ ದಲ್ಲೂ ಚೀನ ಇಂತಹುದೇ ಯತ್ನ ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.