ಮುಂದಿನ ಯುದ್ಧಕ್ಕೆ ದೇಶೀ ಶಸ್ತ್ರ
Team Udayavani, Oct 16, 2019, 6:00 AM IST
ಹೊಸದಿಲ್ಲಿ: ಸೇನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಶೀ ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸೇನಾಪಡೆ ಮುಖ್ಯಸ್ಥ ಜ| ಬಿಪಿನ್ ರಾವತ್ ಮಾತನಾಡಿದ್ದಾರೆ. ಅಲ್ಲದೆ, ಮುಂದಿನ ಯುದ್ಧ ನಡೆಯುವುದು ಭಾರತದಲ್ಲೇ ತಯಾರಿಸಿದ ಶಸ್ತ್ರಗಳಿಂದ ಎಂದೂ ಅವರು ಹೇಳಿದ್ದಾರೆ.
ಡಿಆರ್‌ಡಿಒ ನಿರ್ದೇಶಕರ 41ನೇ ಸಮ್ಮೇಳನದಲ್ಲಿ ಮಾತ ನಾಡಿದ ಅವರು, ಭವಿಷ್ಯದ ಶಸ್ತ್ರಗಳನ್ನು ಗಮನದಲ್ಲಿಟ್ಟು ಕೊಂಡು ಶಸ್ತ್ರಾಸ್ತ್ರ ಮತ್ತು ಇತರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸ ಬೇಕಿದೆ. ಭವಿಷ್ಯದ ಯುದ್ಧಗಳು ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯುವುದಿಲ್ಲ. ಇದಕ್ಕಾಗಿ ನಾವು ಸೈಬರ್‌ಸ್ಪೇಸ್, ಬಾಹ್ಯಾ ಕಾಶ, ಲೇಸರ್, ಎಲೆಕ್ಟ್ರಾನಿಕ್ ಶಸ್ತ್ರಗಳು ಮತ್ತು ರೊಬಾಟಿಕ್ಸ್ ಅನ್ನು ಅಭಿವೃದ್ಧಿಪಡಿಸಬೇಕು. ಇದರ ಜತೆಗೆ ಕೃತಕ ಬುದ್ಧಿ ಮತ್ತೆಯನ್ನೂ ಅಭಿವೃದ್ಧಿಪಡಿಸಬೇಕಿದೆ ಎಂದು ಹೇಳಿದ್ದಾರೆ. ಈಗಲೇ ಈ ಬಗ್ಗೆ ನಾವು ಯೋಚನೆ ನಡೆಸದೇ ಇದ್ದರೆ, ತುಂಬಾ ತಡವಾಗುತ್ತದೆ. ಕಳೆದ ಕೆಲವು ದಶಕಗಳಲ್ಲಿ ಡಿಆರ್‌ಡಿಒ ಸಾಧನೆ ಶ್ಲಾಘನೀಯ. ಡಿಆರ್‌ಡಿಒ ಸಾಧನೆಯಿಂದಾಗಿ ಸೇನೆಗೆ ತುಂಬಾ ಅನುಕೂಲವಾಗುತ್ತದೆ ಎಂದು ನಾವು ನಂಬಿದ್ದೇವೆ ಎಂದು ಅವರು ಹೇಳಿದ್ದಾರೆ.
ಭಾರತವು ವಿಶ್ವದಲ್ಲೇ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶವಾಗಿದೆ. ಆದರೆ ಸ್ವಾತಂತ್ರ್ಯ ಬಂದು 70 ವರ್ಷಗಳಾದ ಅನಂತರ ಈ ಹೇಳಿಕೆ ಅತ್ಯಂತ ಹೆಮ್ಮೆಯದ್ದಲ್ಲ. ಕಳೆದ ಕೆಲವು ವರ್ಷ ಗಳಿಂದ ಈ ಸ್ಥಿತಿ ಬದಲಾಗುತ್ತಿದೆ. ದೇಶದಲ್ಲೇ ನಮ್ಮ ಅಗತ್ಯಗಳು ಪೂರೈಸುವಂತೆ ಡಿಆರ್‌ಡಿಒ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ವಿಭಜನೆ ಹೇಳಿಕೆಗೆ ಪಾಕ್ ಖಂಡನೆ: ಪಾಠ ಕಲಿಯದೇ ಇದ್ದರೆ ಪಾಕಿಸ್ಥಾನವು ವಿಭಜನೆಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿರುವುದನ್ನು ಪಾಕಿಸ್ಥಾನ ಖಂಡಿಸಿದೆ. ಪಾಕಿಸ್ತಾನವನ್ನು ವಿಭಜನೆ ಮಾಡುವ ಬೆದರಿಕೆ ಒಡ್ಡುವುದು ಬೇಜವಾಬ್ದಾರಿಯುತ ಹೇಳಿಕೆ. ವಿಶ್ವ ಸಮುದಾಯವು ಈ ಹೇಳಿಕೆಯನ್ನು ಗಮನಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದೆ.
ಭಾರತಕ್ಕೆ ಉಗ್ರ ಕಳಂಕ ಹಚ್ಚಲು ಪಾಕ್ ಕುತಂತ್ರ
ಭಾರತದ ವಿರುದ್ಧ ಏನೇನೋ ಮಸಲತ್ತು ಮಾಡಿ ವಿಫಲವಾಗಿರುವ ಪಾಕಿಸ್ಥಾನ ಈಗ “ಉಗ್ರ ಕಳಂಕ’ ಹಚ್ಚುವ ಹೊಸ ಕುತಂತ್ರಕ್ಕೆ ಕೈಹಾಕಿದೆ. ಭಾರತದ ಪ್ರಜೆ ಅಜೊಯ್ ಮಿಸಿŒ ಎಂಬವರನ್ನು ಐಸಿಸ್ ಉಗ್ರ ಸಂಘಟನೆಗೆ ಸೇರಿದವರು ಎಂದು ಬಿಂಬಿಸುವ ಪ್ರಯತ್ನವನ್ನು ಪಾಕಿಸ್ಥಾನ ಸರಕಾರ ಚೀನ ಜತೆಗೂಡಿ ಮಾಡಿದ ಪ್ರಯತ್ನ ಇದೀಗ ಬಯಲಾಗಿದೆ. ಇಷ್ಟು ಮಾತ್ರವಲ್ಲ ಮಿಸಿŒ ವಿರುದ್ಧ ಕ್ರಮಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಲ್‌ಖೈದಾ ನಿಷೇಧ ಸಮಿತಿಗೆ ದೂರು ಸಲ್ಲಿಸಿ, ಭಾರತದ ವರ್ಚಸ್ಸಿಗೆ ಮಸಿ ಬಳಿ ಯುವ ವ್ಯರ್ಥ ಪ್ರಯತ್ನ ಮಾಡಿರುವ ಅಂಶವೂ ಬಯಲಾಗಿದೆ.
ಕಳೆದ ತಿಂಗಳಷ್ಟೇ ಅಫ್ಘಾನಿಸ್ಥಾನದಲ್ಲಿ ಕೆಲಸ ಮಾಡುತ್ತಿ ರುವ ಭಾರತದ ಎಂಜಿನಿಯರ್ ವೇಣು ಮಾಧವ ಡೊಂಗಾರ ಎಂಬವರ ವಿರುದ್ಧ ಚೀನ ನೆರವು ಮೂಲಕ ಕಠಿನ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದ ಪಾಕಿಸ್ಥಾನದ ಕುಟಿಲ ಯತ್ನ ಅಮೆರಿಕದ ನೆರವಿಂದ ಭಗ್ನವಾಗಿತ್ತು. ಆ.5ರಂದು ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಪಾಕಿಸ್ಥಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಚ್ಯುತಿ ತರುವ ನಿಟ್ಟಿನಲ್ಲಿ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದರೂ, ಅದು ಯಶಸ್ವಿಯಾಗಿಲ್ಲ. ಹಾಗಾಗಿ, ಈಗ ಹೊಸ ತಂತ್ರದ ಮೊರೆ ಹೋಗಿರುವ ಪಾಕ್, ತಮ್ಮ ದೇಶದ ಮೇಲೆ ದಾಳಿ ನಡೆಸಲು ಬಂದಿರುವ ಐಸಿಸ್ ಉಗ್ರ ಎಂದು ಮಿಸಿŒಯನ್ನು ಬಿಂಬಿಸಿ, ವಿಶ್ವಸಂಸ್ಥೆಗೆ ದೂರು ನೀಡುವ ಕೆಲಸಕ್ಕೆ ಕೈಹಾಕಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಎಂಬ ಪರೋಕ್ಷ ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ 370ನೇ ವಿಧಿ ರದ್ದು ಮಾಡಿತು. ಇದೊಂದು ನಿರ್ಣಾಯಕ ಹೋರಾಟ.
ಅಮಿತ್ ಶಾ, ಕೇಂದ್ರ ಗೃಹ ಸಚಿವ
ಭಾರತವು ಎದುರಿಸುತ್ತಿರುವ ಪ್ರಮುಖ ಬಾಹ್ಯ ಸವಾಲುಗಳೆಂದರೆ, ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆ ಮತ್ತು ಜಿಹಾದಿ ಚಟುವಟಿಕೆಗಳು. ಇದು ನಾಗರಿಕ ಸಮಾಜಕ್ಕೆ ಶಾಪ ಮತ್ತು ಆಧುನಿಕ ಬೆಳವಣಿಗೆಗೆ ಅಡ್ಡಿ.
ಜಿ. ಕಿಶನ್ ರೆಡ್ಡಿ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Junior Doctor: ಮಾತನಾಡಲು ಕರೆಸಿ ಕಿರಿಯ ವೈದ್ಯೆ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.