![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 21, 2020, 5:38 PM IST
ಅಹಮದಾಬಾದ್: ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದು, ಮತ್ತೊಂದೆಡೆ ಟ್ರಂಪ್ ಮತ್ತು ಮೋದಿಯ 22 ಕಿಲೋ ಮೀಟರ್ ದೂರದವರೆಗಿನ ರೋಡ್ ಶೋವನ್ನು 9 ಕಿಲೋಮೀಟರ್ ಗೆ ಕಡಿತಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ನಿಗದಿತ ಕಾರ್ಯಕ್ರಮದಂತೆ ಫೆ.24ರಂದು ಗುಜರಾತ್ ಗೆ ಆಗಮಿಸಲಿರುವ ಟ್ರಂಪ್ ಅವರನ್ನು ಮೋದಿ ಅವರು ಬರಮಾಡಿಕೊಂಡ ನಂತರ ಉಭಯ ನಾಯಕರು ಅಹಮದಾಬಾದ್ ವಿಮಾನ ನಿಮ್ದಾಣದಿಂದ ರೋಡ್ ಶೋ ಆರಂಭವಾಗಿ ಅದು ಮೊಟೆರಾದಿಂದ ಕೋಟೇಶ್ವರದ ಮೂಲಕ ಗಾಂಧಿನಗರ ತಲುಪುವುದಾಗಿತ್ತು. ಇದೀಗ ಗಾಂಧಿ ಆಶ್ರಮ ಭೇಟಿಯನ್ನು ಟ್ರಂಪ್ ರದ್ದುಪಡಿಸಿರುವುದಾಗಿ ವರದಿ ವಿವರಿಸಿದೆ.
9 ಕಿಲೋ ಮೀಟರ್ ಉದ್ದದ ರೋಡ್ ಶೋನಲ್ಲಿ 4 ಕಿಲೋ ಮೀಟರ್ ಗಾಂಧಿನಗರ ಸೇರಿದೆ. ಈ ಗಾಂಧಿನಗರ್ ರೋಡ್ ಶೋನ ವೇಳೆಯ ಭದ್ರತೆಯ ಹೊಣೆಯನ್ನು ವಿಶೇಷ ಭದ್ರತಾ ಪಡೆ ಜತೆ ಏಳು ಮಂದಿ ಎಸ್ಪಿ ದರ್ಜೆ ಅಧಿಕಾರಿಗಳು, 2000 ಪೊಲೀಸ್ ಸಿಬ್ಬಂದಿಗಳು ನೋಡಿಕೊಳ್ಳಲಿದ್ದಾರೆ. ಈ ಬಗ್ಗೆ ಗಾಂಧಿನಗರ್ ಪೊಲೀಸ್ ಮಹಾನಿರ್ದೇಶಕರಿಗೆ ಹೊಣೆಗಾರಿಕೆ ಒಪ್ಪಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಅತೀ ದೊಡ್ಡ ಮೈದಾನವಾದ ಮೋಟೆರಾವನ್ನು ಅಹಮದಾಬಾದ್ ನಲ್ಲಿ ಉದ್ಘಾಟಿಸಲಿದ್ದಾರೆ. ಈ ವೇಳೆ ನಡೆಲಿರುವ ನಮಸ್ತೆ ಟ್ರಂಪ್ ಕಾರ್ಯಕ್ರಮದ ಸಂದರ್ಭದಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ವರದಿ ತಿಳಿಸಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.