ಕಾಶ್ಮೀರ ಮಧ್ಯಸ್ಥಿಕೆ ಕೋಲಾಹಲ
ಟ್ರಂಪ್‌ಗೆ ಮೋದಿ ಮನವಿ ಮಾಡಿಲ್ಲ
Team Udayavani, Jul 24, 2019, 5:21 AM IST
ಕಲಾಪ ಬಹಿಷ್ಕರಿಸಿ ಹೊರನಡೆದ ಬಳಿಕ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹೊಸದಿಲ್ಲಿ/ವಾಷಿಂಗ್ಟನ್: ಕಾಶ್ಮೀರ ವಿಚಾರ ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ಮೋದಿ ಮನವಿ ಮಾಡಿಲ್ಲ. ಅದನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸಲಾಗುತ್ತದೆ ಎಂದು ಕೇಂದ್ರ ಸರಕಾರ ಮಂಗಳವಾರ ಸಂಸತ್‌ನಲ್ಲಿ ಸ್ಪಷ್ಟಪಡಿಸಿದೆ. ಸೋಮವಾರ ವಾಷಿಂಗ್ಟನ್‌ನಲ್ಲಿ ಪಾಕ್ ಪಿಎಂ ಇಮ್ರಾನ್ ಖಾನ್ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ಭೇಟಿ ವೇಳೆ ಪ್ರಸ್ತಾಪವಾಗಿದ್ದ ಈ ಮಾತುಗಳು ಸಂಸತ್‌ನಲ್ಲಿ ಕೋಲಾಹಲ ಉಂಟುಮಾಡಿದೆ. ಜತೆಗೆ ರಾಜಕೀಯವಾಗಿಯೂ ಕೇಂದ್ರ ಸರಕಾರ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಸೋಮವಾರ ತಡರಾತ್ರಿ ಟ್ರಂಪ್ ನೀಡಿದ ಹೇಳಿಕೆಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಂಗಳವಾರ ರಾಜ್ಯಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ ಈ ಬಗ್ಗೆ ಸದನಕ್ಕೆ ಬಂದು ಹೇಳಿಕೆ ನೀಡಬೇಕೆಂದು ವಿಪಕ್ಷ ಗಳು ಒತ್ತಾಯಿಸುತ್ತಿರುವಂತೆಯೇ, ಸರಕಾರದ ನಿಲುವು ಪ್ರಕಟಿಸಿದ ಜೈಶಂಕರ್, ಮಧ್ಯಸ್ಥಿಕೆ ವಹಿಸುವಂತೆ ಟ್ರಂಪ್ ಬಳಿ ಪ್ರಧಾನಿ ಮನವಿ ಮಾಡಿಯೇ ಇಲ್ಲ ಎಂದರು. “ಕಾಶ್ಮೀರ ದ್ವಿಪಕ್ಷೀಯ ವಿಚಾರವಾಗಿದ್ದು, ಅದು ಸೇರಿದಂತೆ ಎಲ್ಲ ವಿಚಾರಗಳನ್ನು ಭಾರತ ಮತ್ತು ಪಾಕಿಸ್ಥಾನ ಎರಡೂ ರಾಷ್ಟ್ರಗಳು ಕುಳಿತು ಬಗೆಹರಿಸಿಕೊಳ್ಳಲಿವೆ. ಈ ನಿಟ್ಟಿನಲ್ಲಿ ಕೇಂದ್ರದ ನಿಲುವಿನಲ್ಲಿ ಬದಲಾ ವಣೆಯೇ ಇಲ್ಲ. ಪಾಕಿಸ್ಥಾನ ಗಡಿಯಾಚೆಯಿಂದ ಉಗ್ರವಾದಕ್ಕೆ ನೀಡುವ ಕುಮ್ಮಕ್ಕು ನಿಂತಾಗ ಮಾತ್ರ ಆ ದೇಶದ ಜತೆಗೆ ಮಾತುಕತೆ ಸಾಧ್ಯ. ಈ ನಿಟ್ಟಿನಲ್ಲಿ ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷ ಣೆಯೇ ಮಾರ್ಗ ಸೂಚಕ’ ಎಂದು ಹೇಳಿದ್ದಾರೆ.
ಪ್ರಧಾನಿಯೇ ಬಂದು ಉತ್ತರ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಕಲಾಪವನ್ನು ಮೂರು ಬಾರಿ ಮುಂದೂಡಲಾಗಿತ್ತು. ಜತೆಗೆ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಪ್ರಧಾನಿ ಬಂದು ಉತ್ತರಿಸಿಲ್ಲ ಎಂಬ ಕಾರಣಕ್ಕೆ ಸದನದಿಂದ ಹೊರ ನಡೆದವು.
ಲೋಕಸಭೆಯಲ್ಲೂ ಗದ್ದಲ: ಕೆಳಮನೆಯಲ್ಲಿಯೂ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಟ್ರಂಪ್ ಮಾತಿಗೆ ವಿಪಕ್ಷಗಳ ಸದಸ್ಯರು ಕೋಲಾಹಲ ಎಬ್ಬಿಸಿದ್ದಾರೆ. ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಮಾತನಾಡಿ ಜಪಾನ್‌ನ ಒಸಾಕದಲ್ಲಿ ಟ್ರಂಪ್- ಮೋದಿ ನಡುವೆ ಏನು ಚರ್ಚೆಯಾಗಿದೆ ಎನ್ನು ವುದನ್ನು ತಿಳಿಸಿ. ಅದು ಸುಳ್ಳಾಗಿದ್ದರೆ ಆ ಬಗ್ಗೆ ಪ್ರಧಾನಿಯೇ ಸ್ಪಷ್ಟಪಡಿಸಲಿ ಎಂದು ಒತ್ತಾಯಿ ಸಿದ್ದಾರೆ. ರಾಜ್ಯಸಭೆಯಲ್ಲಿ ಹೇಳಿಕೆ ನೀಡಿ ಲೋಕ ಸಭೆಗೆ ಆಗಮಿಸಿದ ಸಚಿವ ಜೈಶಂಕರ್, ಗದ್ದಲದ ನಡುವೆಯೇ ಮಾತನಾಡುವ ಸ್ಥಿತಿ ಉಂಟಾಯಿತು. ಈ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಸಚಿವರಿಗೆ ಮತ್ತೂಮ್ಮೆ ಹೇಳಿಕೆ ನೀಡಲು ಅವಕಾಶ ನೀಡುವಂತೆ ಸ್ಪೀಕರ್‌ಗೆ ಒತ್ತಾ ಯಿಸಿದರು. ವಿದೇಶಾಂಗ ಸಚಿವರು ಸಾಂಕೇತಿಕ ವಾಗಿ ಹೇಳಿಕೆ ನೀಡುವ ಪರಿಸ್ಥಿತಿ ಉಂಟಾಯಿತು. ಕೆಳಮನೆ ಯಲ್ಲಿಯೂ ಕಾಂಗ್ರೆಸ್ ಮತ್ತು ಇತರ ಸದಸ್ಯರು ಸಭಾತ್ಯಾಗ ಮಾಡಿದರು.
ಧೈರ್ಯವೇ ಇಲ್ಲ
ಸಭಾತ್ಯಾಗದ ಮೊದಲು ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, “ಸದನದಲ್ಲಿ ಪ್ರಧಾನಿಯೇ ಉತ್ತರಿಸ ಬೇಕೆನ್ನುವುದು ನಮ್ಮ ಆಗ್ರಹ. ಈ ಬಗ್ಗೆ ಪ್ರಧಾನಿಗೆ ಸಲಹೆ ನೀಡಲು ಬಿಜೆಪಿ ಸಂಸದರಿಗೆ ಧೈರ್ಯವಿಲ್ಲ ಮತ್ತು ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮನವಿ ಮಾಡಲಾಗಿತ್ತೇ ಎಂಬ ಬಗ್ಗೆ ಸಂಪುಟದ ಯಾರೊಬ್ಬ ಸಚಿವರೂ ಉತ್ತರಿಸುತ್ತಿಲ್ಲ’ ಎಂದು ದೂರಿದರು. ಅದಕ್ಕೆ ತಿರುಗೇಟು ನೀಡಿದ ರಾಜ್ಯಸಭೆಯಲ್ಲಿನ ಸರಕಾರದ ನಾಯಕ ಥಾವರ್ ಚಂದ್ ಗೆಹಲೋಟ್ ವಿದೇಶಾಂಗ ಸಚಿವರು ಸರಕಾರದ ನಿಲುವನ್ನು ಪ್ರಕಟಿಸಿದ್ದಾರೆ ಎಂದರು.
ಬಾಂಧವ್ಯಕ್ಕೆ ಧಕ್ಕೆ
ಅಧ್ಯಕ್ಷ ಟ್ರಂಪ್ ನೀಡಿರುವ ಮಧ್ಯಸ್ಥಿಕೆ ಹೇಳಿಕೆ ಭಾರತ ಮತ್ತು ಅಮೆರಿಕ ನಡು ವಿನ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡಲಿದೆ. ಹೀಗೆಂದು ಅಮೆರಿಕದ ಮಾಜಿ ಸಂಸದರು ಮತ್ತು ರಾಜತಾಂತ್ರಿಕ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದ ವಿದೇಶಾಂಗ ಇಲಾಖೆ ನಿವೃತ್ತ ಅಧಿಕಾರಿ ಅಲ್ಯಾಸ್ಸಾ ಐರಿಸ್ ಪ್ರತಿಕ್ರಿಯೆ ನೀಡಿ, ಟ್ರಂಪ್ ಸೂಚನೆ ಇಲ್ಲದೆ ಪಾಕ್ ಪಿಎಂ ಜತೆಗೆ ಸಭೆ ನಡೆಸಿದ್ದರಿಂದ ಹೀಗಾಗಿದೆ ಎಂದಿದ್ದಾರೆ. ಜಾರ್ಜ್ ಬುಷ್ ಅವಧಿ ಯಲ್ಲಿ ವಿದೇಶಾಂಗ ಸಚಿವರಾಗಿದ್ದ ನಿಕೋ ಲಸ್ ಬರ್ನ್ಸ್ ಮಾತನಾಡಿ, ಕಾಶ್ಮೀರ ವಿಚಾರದಲ್ಲಿ ತೃತೀಯ ಪಕ್ಷ ಮಧ್ಯ ಸ್ಥಿಕೆ ವಹಿಸುವುದನ್ನು ನಿರಾಕರಿ ಸುತ್ತಾ ಬಂದಿತ್ತು ಎಂದಿದ್ದಾರೆ. ಭಾರತ ದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ರಿಚರ್ಡ್ ವರ್ಮಾ ಮಾತನಾಡಿ, ಅಧ್ಯಕ್ಷ ಟ್ರಂಪ್ ಬಾಂಧವ್ಯದ ನಿಟ್ಟಿನಲ್ಲಿ ಭಾರಿ ಧಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
ಕಾಶ್ಮೀರ ವಿವಾದ ಬಗೆಹರಿಸಲು ಟ್ರಂಪ್ ಮಧ್ಯ ಸ್ಥಿಕೆ ವಹಿಸಬೇಕು ಎಂದು ಪ್ರಧಾನಿ ಹೇಳಿದ್ದೇ ಆದರೆ ದೇಶದ ಹಿತಾಸಕ್ತಿಗೆ ಬಗೆದ ದ್ರೋಹವಾಗಿದೆ. ಇಂಥ ಕ್ರಮದ ಮೂಲಕ ದೇಶಕ್ಕೆ ಮತ್ತು 1972ರ ಶಿಮ್ಲಾ ಒಪ್ಪಂದಕ್ಕೆ ಮೋಸ ಮಾಡಿದಂತಾಗುತ್ತದೆ.
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಅಮೆರಿಕ ಅಧ್ಯಕ್ಷರು ನೀಡಿರುವ ಹೇಳಿಕೆ ಬಗ್ಗೆ ಪ್ರಧಾನಿ ಮೋದಿಯವರೇ ಹೇಳಿಕೆ ನೀಡಬೇಕು ಎನ್ನುವ ವಿಪಕ್ಷಗಳ ಒತ್ತಾಯ ಬೇಜವಾಬ್ದಾರಿಯದ್ದು. ರಾಷ್ಟ್ರೀಯ ಹಿತಾಸಕ್ತಿಯಲ್ಲಿ ರಾಜಕೀಯ ತರುವ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಿಲುವು ಖಂಡನೀಯ.
ಪ್ರಕಾಶ್ ಜಾವಡೇಕರ್, ಕೇಂದ್ರ ಅರಣ್ಯ ಸಚಿವ
ಮಧ್ಯಸ್ಥಿಕೆ ಕುರಿತ ಟ್ರಂಪ್ ಹೇಳಿಕೆಗೆ ಭಾರತದ ಪ್ರತಿಕ್ರಿಯೆ ನೋಡಿ ಅಚ್ಚರಿಯಾಗುತ್ತಿದೆ. ಕಾಶ್ಮೀರಿಗರ ಹಲವು ತಲೆಮಾರುಗಳು ಪ್ರತಿ ನಿತ್ಯ ಈ ಸಂಘರ್ಷದಿಂದ ನರಳುವಂತಾಗಿದೆ. ಅದಕ್ಕೆ ಆದಷ್ಟು ಬೇಗ ಒಂದು ಪರಿಹಾರ ಸಿಗಲೇಬೇಕು.
ಇಮ್ರಾನ್ ಖಾನ್, ಪಾಕ್ ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.