![WPL 2025: ಆರ್‌ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್‌ನಿಂದ ಹೊರಕ್ಕೆ](https://www.udayavani.com/wp-content/uploads/2025/02/shreyanka-patil-415x276.jpg)
![WPL 2025: ಆರ್‌ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್‌ನಿಂದ ಹೊರಕ್ಕೆ](https://www.udayavani.com/wp-content/uploads/2025/02/shreyanka-patil-415x276.jpg)
Team Udayavani, Jan 29, 2025, 6:38 AM IST
ನವದೆಹಲಿ: ಸದ್ಯ ಅಧಿಕಾರದಲ್ಲಿ ಇರುವ ಬಿಜೆಪಿಗೆ ರದ್ದಾಗಿರುವ ಚುನಾವಣಾ ಬಾಂಡ್ ಮೂಲಕ ಭಾರೀ ಆದಾಯ ಪಡೆದುಕೊಂಡಿದೆ. ಜತೆಗೆ ಖರ್ಚು ಮಾಡುವುದರಲ್ಲೂ ಬಿಜೆಪಿ ಮುಂದಿದೆ.
2022-23ನೇ ಸಾಲಿನಲ್ಲಿ 2360.8 ಕೋಟಿ ರೂ.ಗಳಿಂದ 2023-24ನೇ ಸಾಲಿನಲ್ಲಿ ಪಕ್ಷದ ಆದಾಯ 4340.5 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ 1 ವರ್ಷದ ಅವಧಿಯಲ್ಲಿ ಪಕ್ಷದ ಆದಾಯ ಶೇ.84 ಹೆಚ್ಚಾಗಿದೆ. ಚುನಾವಣಾ ಆಯೋಗಕ್ಕೆ ಬಿಜೆಪಿ ಸಲ್ಲಿಕೆ ಮಾಡಿದ ಆಡಿಟ್ ವರದಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಪಕ್ಷವೊಂದಕ್ಕೆ ಚುನಾವಣಾ ಬಾಂಡ್ ಮೂಲಕ ಸಲ್ಲಿಕೆಯಾಗಿರುವ ಅತಿ ಹೆಚ್ಚು ಪ್ರಮಾಣದ ದೇಣಿಗೆ ಇದಾಗಿದೆ. ಜತೆಗೆ ಬಿಜೆಪಿ ಬಳಿ 7113 ಕೋಟಿ ರೂ. ಚುನಾವಣಾ ನಿಧಿ ಸೇರಿಕೊಂಡಂತಾಗಿದೆ.
ವಿಪಕ್ಷವಾಗಿರುವ ಕಾಂಗ್ರೆಸ್‌ಗೆ ಬಾಂಡ್ ಮೂಲಕ ಲಭಿಸಿರುವ ಮೊತ್ತವೂ ಏರಿಕೆಯಾಗಿದೆ. 2022-23ನೇ ಸಾಲಿನಲ್ಲಿ ಆ ಪಕ್ಷಕ್ಕೆ 452.4 ಕೋಟಿ ರೂ. ಇದ್ದ ಆದಾಯ, 2023-24ನೇ ಸಾಲಿನಲ್ಲಿ 1225 ಕೋಟಿ (ಶೇ.170) ರೂ.ಗೆ ಏರಿಕೆಯಾಗಿದೆ. ಹೀಗಾಗಿ, ಆ ಪಕ್ಷದ ಬಳಿ ಇರುವ ಒಟ್ಟು ಮೊತ್ತ 857 ಕೋಟಿ ರೂ.ಗೆ ಏರಿಕೆಯಾದಂತಾಗಿದೆ. ಇತ್ತೀಚೆಗೆ ಪ್ರಕಟವಾಗಿದ್ದ ದೇಣಿಗೆ ಮಾಹಿತಿ ಪ್ರಕಾರ ಬಿಆರ್‌ಎಸ್ 685.5 ಕೋಟಿ ರೂ., ಪಶ್ಚಿಮ ಬಂಗಾಳದ ಟಿಎಂಸಿಗೆ 612.4 ಕೋಟಿ ರೂ. ದೇಣಿಗೆ ಸಿಕ್ಕಿತ್ತು. ಹೀಗಾಗಿ, ಕಾಂಗ್ರೆಸ್ ಆ 2 ಪಕ್ಷಗಳನ್ನು ಮೀರಿಸಿದಂತಾಗಿದೆ.
ವೆಚ್ಚದಲ್ಲಿ ಬಿಜೆಪಿ ಮುಂದೆ: ದೇಣಿಗೆ ಸಂಗ್ರಹದಲ್ಲಿ ಮುಂದಿರುವ ಬಿಜೆಪಿ, ತನಗೆ ಸಿಕ್ಕಿರುವ ಹಣ ವೆಚ್ಚ ಮಾಡುವುದರಲ್ಲೂ ಅಗ್ರ ಸ್ಥಾನದಲ್ಲಿದೆ. 2023-24ನೇ ಸಾಲಿನಲ್ಲಿ 1754.06 ಕೋಟಿ ರೂ. ವೆಚ್ಚ ಮಾಡಿತ್ತು. 2022-23ನೇ ಸಾಲಿನಲ್ಲಿ 1092 ಕೋಟಿ ರೂ. ವೆಚ್ಚ ಮಾಡಿತ್ತು. ಅಂದರೆ 1 ವರ್ಷದಲ್ಲಿ 662.06 ಕೋಟಿ ರೂ. ಹೆಚ್ಚು ಖರ್ಚು ಮಾಡಿದೆ. ವಿಪಕ್ಷ ಕಾಂಗ್ರೆಸ್ ಕೂಡ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. 2023-24ರಲ್ಲಿ 619.67 ಕೋಟಿ ರೂ., 2022-23ರಲ್ಲಿ 192.56 ಕೋಟಿ ರೂ. ವೆಚ್ಚ ಮಾಡಿತ್ತು. ಗಮನಾರ್ಹ ಅಂಶವೆಂದರೆ ಈ ಅಂಕಿ ಅಂಶಗಳೆಲ್ಲವೂ ಕಳೆದ ವರ್ಷದ ಮಾ.16ರಂದು ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗುವುದಕ್ಕಿಂತ ಮೊದಲಿನದ್ದು.
Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್ ಯಾದವ್
Tragedy: ಸಾವಿನ ಕದ ತಟ್ಟಿದ ವರ… ಕುದುರೆ ಮೇಲೆ ಕುಳಿತು ಮೆರವಣಿಗೆ ಹೊರಟ ವರನಿಗೆ ಹೃದಯಾಘಾತ
US; ಮುಚ್ಚಿದ ಬಾಗಿಲುಗಳ ಹಿಂದೆ ಗಡಿಪಾರು ವಿಷಯ ಮೋದಿ ಪ್ರಸ್ತಾಪಿಸಿದ್ದಾರೆಯೇ?:ತರೂರ್
Maha Kumbh: ಕುಂಭಮೇಳದ ಸೆಕ್ಟರ್ 18, 19ರಲ್ಲಿ ಭಾರೀ ಅಗ್ನಿ ಅನಾಹುತ!
ತರಗತಿಯಲ್ಲೇ ನಿದ್ರೆಗೆ ಜಾರಿದ ವಿದ್ಯಾರ್ಥಿ… ಶಾಲೆಗೆ ಬೀಗ ಹಾಕಿ ಮನೆಗೆ ತೆರಳಿದ ಶಿಕ್ಷಕ
Belthangady: ಕಾರು- ರಿಕ್ಷಾ ಅಪಘಾತ; ರಿಕ್ಷಾ ಚಾಲಕನಿಗೆ ಗಂಭೀರ ಗಾಯ
WPL 2025: ಆರ್‌ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್‌ನಿಂದ ಹೊರಕ್ಕೆ
Women’s FIH Pro League: ಭಾರತಕ್ಕೆ ಇಂಗ್ಲೆಂಡ್ ವಿರುದ್ಧ 3-2ರಿಂದ ಜಯ
Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್ ಯಾದವ್
Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ
You seem to have an Ad Blocker on.
To continue reading, please turn it off or whitelist Udayavani.