ಕುಲಭೂಷಣ್ ಎಲ್ಲಿದ್ದಾರೆ,ಹೇಗಿದ್ದಾರೆ ನಮಗೆ ಗೊತ್ತಿಲ್ಲ: ಭಾರತ ಸರಕಾರ
Team Udayavani, Apr 13, 2017, 4:58 PM IST
ಹೊಸದಿಲ್ಲಿ : ಪಾಕಿಸ್ಥಾನದ ಮಿಲಿಟರಿ ಕೋರ್ಟ್‌ನಿಂದ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿರುವ ಭಾರತೀಯ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಪಾಕಿಸ್ಥಾನದಲ್ಲಿ ಎಲ್ಲಿದ್ದಾರೆ, ಹೇಗಿದ್ದಾರೆ, ಅವರ ಸ್ಥಿತಿಗತಿ ಏನು ಎಂಬಿತ್ಯಾದಿ ಯಾವುದೇ ಮಾಹಿತಿಗಳು ಭಾರತಕ್ಕೆ ಇದು ವರೆಗೆ ಸಿಕ್ಕಿಲ್ಲ ಎಂದು ವಿದೇಶ ವ್ಯವಹಾರಗಳ ಸಚಿವಾಲಯ ಇಂದು ಗುರುವಾರ ಹೇಳಿದೆ.
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್‌ಲಾಯ್ ಅವರು “ಕುಲಭೂಷಣ್ ಜಾಧವ್ ಅವರನ್ನು ಇಡಲಾಗಿರುವ ಸ್ಥಳ, ಅವರ ದೇಹ ಸ್ಥಿತಿ ಇತ್ಯಾದಿಗಳ ಬಗ್ಗೆ ಯಾವುದೇ ಮಾಹಿತಿಯನ್ನು ಪಾಕಿಸ್ಥಾನ ಭಾರತದೊಂದಿಗೆ ಇದು ವರೆಗೆ ಹಂಚಿಕೊಂಡಿಲ್ಲ’ ಎಂದು ಹೇಳಿದರು.
ಭಾರತೀಯ ಬೇಹು ಸಂಸ್ಥೆ ರಾ ಇದರ ಏಜಂಟ್ ಎಂದು ಆರೋಪಿಸಿ ಪಾಕ್ ಮಿಲಿಟರಿ ಕೋರ್ಟಿನಿಂದ ಗಲ್ಲು ಶಿಕ್ಷೆ ನೀಡಲ್ಪಟ್ಟಿರುವ ಕುಲಭೂಷಣ್ ಜಾಧವ್ ಅವರೊಂದಿಗೆ ಭಾರತಕ್ಕೆ ಯಾವುದೇ ಸಂಪರ್ಕ ಹೊಂದಲು ಸಾಧ್ಯವಾಗಿಲ್ಲ. ಜಾಧವ್‌ಗೆ ಕಾನ್ಸುಲರ್ ಸಂಪರ್ಕ ಒದಗಿಸುವಂತೆ ಭಾರತ ಮಾಡಿಕೊಂಡ ಎಲ್ಲ ಕೋರಿಕೆಗಳನ್ನು ಪಾಕಿಸ್ಥಾನ ತಿರಸ್ಕರಿಸಿದೆ. ಜಾಧವ್ ಪ್ರಕರಣದಲ್ಲಿ ಪಾಕಿಸ್ಥಾನ ನಡೆಸಿರುವ ಎಲ್ಲ ತಥಾಕಥಿತ ನ್ಯಾಯಾಂಗ ಉಪಕ್ರಮಗಳು ಅಪಾರದರ್ಶಕವಾಗಿವೆ’ ಎಂದು ಬಾಗ್‌ಲಾಯ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ