ಚಿನ್ನ ಕಳ್ಳಸಾಗಣೆ ಮಾಡಿ, ಬೇಲ್ ಸಿಗುತ್ತೆ : ರಾಜಸ್ಥಾನ ಶಾಸಕ ವಿವಾದ
Team Udayavani, Jun 1, 2018, 11:31 AM IST
ಜೋಧ್‌ಪುರ : “ಮಾದಕ ದ್ರವ್ಯ ಕಳ್ಳಸಾಗಣೆ ಮಾಡಬೇಡಿ; ಸಿಕ್ಕಿ ಬಿದ್ದರೆ ನಿಮಗೆ ಬೇಲ್ ಸಿಗಲ್ಲ; ಆದರೆ ಚಿನ್ನ ಕಳ್ಳಸಾಗಣೆ ಮಾಡಿ; ಸಿಕ್ಕಿಬಿದ್ದರೆ ಸುಲಭದಲ್ಲಿ ಬೇಲ್ ಸಿಗುತ್ತೆ”.
ಇಂತಹ ಒಂದು ವಿವಾದಾತ್ಮಕ ಮತ್ತು ವಿವೇಚನಾರಹಿತ ಸಲಹೆಯನ್ನು ನೀಡಿದವರು ರಾಜಸ್ಥಾನದ ಬಿಲಾರಾ ಶಾಸಕ ಅರ್ಜುಲ್ ಲಾಲ್ ಗರ್ಗ್. ಅವರು ದೇವಾಸಿ ಸಮುದಾಯದವರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಪುಂಖಾನುಪುಂಖವಾಗಿ ಅವರಿಂದ ಈ ಸಲಹೆ ಪುಕ್ಕಟೆಯಾಗಿ ಬಂತು. ಅಂತೆಯೇ ಅದೀಗ ವೈರಲ್ ಆಗಿದೆ.
“ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಕಳ್ಳಸಾಗಣೆ ಪಿಡುಗಿನ ಬಗ್ಗೆ ನಾನು ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ಈ ಅಪರಾಧಕ್ಕಾಗಿ ಎಷ್ಟು ಮಂದಿಯನ್ನು ಜೋಧ್‌ಪುರ ಜೈಲಿನಲ್ಲಿ ಇಡಲಾಗಿದೆ ಎಂದು ಪ್ರಶ್ನಿಸಿದ್ದೇನೆ. ಆಗಲೇ ನನಗೆ ಗೊತ್ತಾಯಿತು : ಅತ್ಯಧಿಕ ಸಂಖ್ಯೆಯಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಜೈಲಿಗೆ ಹೋಗಿರುವವರು ದೇವಾಸಿ ಸಮುದಾಯದವರು ಮತ್ತು ಇವರು ಈ ವಿಷಯದಲ್ಲಿ ಬಿಷ್‌ಣೋಯಿ ಸಮುದಾಯದವರನ್ನು ಹಿಂದಿಕ್ಕಿದ್ದಾರೆ ಎಂದು ತಿಳಿಯಿತು’ ಎಂಬುದಾಗಿ ಗರ್ಗ್ ಹೇಳಿದರು.
“ಒಂದೊಮ್ಮೆ ನಿಮಗೆ ನಂಬರ್ 2 ಬ್ಯುಸಿನೆಸ್ ಮಾಡಬೇಕು ಅಂತ ಅನ್ನಿಸಿದರೆ ನೀವು ಮಾದಕ ದ್ರವ್ಯ ಕಳ್ಳಸಾಗಣೆ ಬದಲು ಚಿನ್ನ ಕಳ್ಳಸಾಗಣೆಯ ಬ್ಯುಸಿನೆಸ್ ಮಾಡಿ; ಏಕೆಂದರೆ ಅವೆರಡರ ಬೆಲೆಯೂ ಒಂದೇ ತೆರನಾಗಿದೆ; ನೀವು ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದರೆ ಜೈಲಿಗೆ ಹೋಗುತ್ತೀರಿ; ನಿಮಗೆ ಬೇಲ್ ಸಿಗಲ್ಲ; ಅದೇ ನೀವು ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದರೆ ನಿಮಗೆ ಬೇಲ್ ಸಿಗುತ್ತೆ; ಜೈಲು ಪಾಲಾಗುವ ಭಯ ಇರುವುದಿಲ್ಲ’ ಎಂದು ಗರ್ಗ್ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಬಯಾರಾ ದ ಜೈತವಾಸ್ ಗ್ರಾಮದಲ್ಲಿ ದೇವಾಲಯ ಸಮರ್ಪಣೆ ಕಾರ್ಯಕ್ರಮದಲ್ಲಿ ಗರ್ಗ್ ಅವರು ಮಾತನಾಡುತ್ತಿದ್ದರು. ಈ ಸಮಾರಂಭದಲ್ಲಿ ಅನೇಕ ಸಾಧು ಸಂತರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಅವರೆಲ್ಲರ ಮುಂದೆ ಗರ್ಗ್ ಅವರಿಂದ ಈ ಮಾತುಗಳು ಬಂದವು ಎನ್ನುವುದು ಮುಖ್ಯ.
ಸಮಾರಂಭದ ಬಳಿಕ ಖಾಸಗಿ ಪ್ರವಾಸಾರ್ಥವಾಗಿ ಗರ್ಗ್ ಅವರು ಲಡ್ಡಾಕ್ ಗೆ ತೆರಳಿದ ಕಾರಣ ಅವರನ್ನು “ಚಿನ್ನ ಕಳ್ಳಸಾಗಣೆ’ ಕುರಿತ ವಿವಾದಾತ್ಮಕ ಹೇಳಿಕೆಗಾಗಿ ಸ್ಪಷ್ಟೀಕರಣ ಪಡೆಯಲು ಮಾಧ್ಯಮದವರಿಗೆ ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.