ದೇಶದ “ಆಭರಣ’ ಮಾರಬೇಡಿ: ಏರ್ಇಂಡಿಯಾ ಯೂನಿಯನ್
Team Udayavani, Dec 21, 2019, 8:10 PM IST
ನವದೆಹಲಿ: ಸಾಲದ ಶೂಲಕ್ಕೆ ಸಿಲುಕಿ ಭಾರೀ ನಷ್ಟ ಅನುಭವಿಸುತ್ತಿರುವ ಏರ್ ಇಂಡಿಯಾ ಮಾರಾಟದ ತಾರ್ಕಿಕ ಘಟ್ಟ ತಲುಪಿದೆ. ಏತನ್ಮಧ್ಯೆ, ಪೈಲಟ್ಗಳನ್ನು ಒಳಗೊಂಡ ಏರ್ ಇಂಡಿಯಾದ 6 ಒಕ್ಕೂಟಗಳು, “ಏರ್ಇಂಡಿಯಾ ದೇಶದ ಆಭರಣ. ರಾಷ್ಟ್ರೀಯತೆಯ ಸಂಕೇತವಾಗಿರುವ ಇದನ್ನು ಮಾರಾಟ ಮಾಡುವುದು ಬೇಡ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿವೆ.
ಕಳೆದ ಮೂರು ವರ್ಷಗಳಿಂದ ಏರ್ ಇಂಡಿಯಾ ಲಾಭದತ್ತ ಸಾಗುತ್ತಿದೆ. ಆದರೆ, ಭಾರೀ ಪ್ರಮಾಣದ ಸಾಲದ ಹೊರೆ ಇರುವುದರಿಂದ ವಾರ್ಷಿಕ 4 ಸಾವಿರ ಕೋಟಿ ರೂ.ಗಳನ್ನು ಸಾಲಕ್ಕೆ ಪಾವತಿಸಲಾಗುತ್ತಿದೆ. ಈ ಸಾಲ ಮನ್ನಾ ಮಾಡಬೇಕು ಹಾಗೂ ಏರ್ಇಂಡಿಯಾ ನಿರ್ವಹಣೆಗೆ ವೃತ್ತಿಪರ ಆಡಳಿತ ಮಂಡಳಿ ಸ್ಥಾಪಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪಿ.ಎಸ್.ಖರೋಲಾ, ಏರಿಂಡಿಯಾ ಸಿಎಂಡಿ ಅಶ್ವನಿ ಲೋಹಾನಿ ಅವರಿಗೆ ಪತ್ರ ಬರೆಯಲಾಗಿದೆ.
2020ರ ಮಾರ್ಚ್ 31ರೊಳಗೆ ಏರ್ ಇಂಡಿಯಾದ ಪೂರ್ಣ ಬಂಡವಾಳ ಹಿಂತೆಗೆತಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗಡುವು ವಿಧಿಸಿದ್ದಾರೆ. ಈ ಮೂಲಕ ಏರ್ಇಂಡಿಯಾ ಇತಿಹಾಸ ಪುಟಕ್ಕೆ ಸೇರಲು ಅಂತಿಮ ಘಟ್ಟ ತಲುಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.