ಇಸ್ರೋ ವಿಜಯ ದುಂದುಭಿ
ಶತ್ರು ರಾಡಾರ್ ಮಾಪಕ ಎಮಿಸ್ಯಾಟ್ ಸಹಿತ 29 ಉಪಗ್ರಹಗಳ ಉಡಾವಣೆ
Team Udayavani, Apr 2, 2019, 6:00 AM IST
ಶ್ರೀಹರಿಕೋಟಾ: ಶತ್ರು ದೇಶಗಳ ರಾಡಾರ್‌ಗಳನ್ನು ಪತ್ತೆ ಹಚ್ಚುವ ವಿಚಕ್ಷಣ ಉಪಗ್ರಹವಾದ “ಎಮಿಸ್ಯಾಟ್’ ಸಹಿತ 29 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸೋಮವಾರ ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಗೊಳಿಸಿತು. ಒಂದೇ ರಾಕೆಟ್‌ನಲ್ಲಿ 29 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಮೂರು ಕಕ್ಷೆಗಳಲ್ಲಿ ಅವನ್ನು ಕೂರಿಸುವ ಪ್ರಯೋಗದಲ್ಲಿ ಯಶಸ್ವಿಯಾಗುವ ಮೂಲಕ ಇಸ್ರೋ ಹೊಸ ಇತಿಹಾಸ ನಿರ್ಮಿಸಿತು.
“ಪಿಎಸ್‌ಎಲ್‌ವಿ’ ಸರಣಿಯ 47ನೇ ಉಡಾವಣೆಯಲ್ಲಿ 436 ಕೆ.ಜಿ. ತೂಕದ ಎಮಿಸ್ಯಾಟ್ ಮತ್ತು ಲಿಥುಯಾನಾ, ಸ್ಪೇನ್, ಸ್ವಿಜರ್ಲೆಂಡ್, ಅಮೆರಿಕಕ್ಕೆ ಸೇರಿದ 28 ಉಪಗ್ರಹಗಳನ್ನು ಹೊತ್ತು ಬೆಳಗ್ಗೆ 9.30ರ ಸುಮಾರಿಗೆ “ಪಿಎಸ್‌ಎಲ್‌ವಿ- ಸಿ 45′ ರಾಕೆಟ್ ನಭಕ್ಕೆ ಚಿಮ್ಮಿತು.
ಮೇ ತಿಂಗಳಲ್ಲಿ “ಚಂದ್ರಯಾನ 2′
ಮೇ ತಿಂಗಳಲ್ಲಿ ಇಸ್ರೋ 2 ಮಹತ್ವದ ಯೋಜನೆಗಳನ್ನು ಹಮ್ಮಿ ಕೊಂಡಿದ್ದು, ಬಹು ನಿರೀಕ್ಷಿತ “ಚಂದ್ರಯಾನ 2′ ಯೋಜನೆಯೂ ಅದರಲ್ಲೊಂದಾಗಿರಲಿದೆ ಎಂದು ಇಸ್ರೋದ ಮುಖ್ಯಸ್ಥ ಕೆ. ಶಿವನ್ ತಿಳಿಸಿದ್ದಾರೆ. ಇದೇ ವರ್ಷಾಂತ್ಯಕ್ಕೆ ಇನ್ನೂ 30 ಉಡಾವಣೆಗಳನ್ನು ಇಸ್ರೋ ಹಮ್ಮಿಕೊಂಡಿದೆ ಎಂದು ಶಿವನ್‌ಹೇಳಿದ್ದಾರೆ.
ಮೂರು ಕಕ್ಷೆಗೆ ಬಿಟ್ಟದ್ದು ಹೇಗೆ?
1. 748 ಕಿ.ಮೀ. ಮೊದಲಿಗೆ ಎಮಿಸ್ಯಾಟ್ ಅನ್ನು ಭೂ ಮೇಲ್ಮೆ„ಯಿಂದ 748 ಕಿ.ಮೀ. ಎತ್ತರದ ಕಕ್ಷೆಗೆ ಬಿಡಲಾಯಿತು.
2. 504 ಕಿ.ಮೀ. ಪಿಎಸ್4 ಎಂಜಿನ್ ಸಹಾಯದಿಂದ ವಾಪಸ್ ಭೂಮಿಯತ್ತ ಹಿಮ್ಮುಖವಾಗಿ ಚಲಿಸಿದ ರಾಕೆಟ್‌ನಿಂದ ಭೂ ಮೇಲ್ಮೆ„ ಯಿಂದ 504 ಕಿ.ಮೀ. ಎತ್ತರದಲ್ಲಿ ಕೆಲವು ಉಪಗ್ರಹಗಳನ್ನು ಕಕ್ಷೆಗೆ ಹಾಕಿತು.
3. 485 ಕಿ.ಮೀ. 485 ಕಿ.ಮೀ. ಎತ್ತರಕ್ಕೆ ಇಳಿದ ರಾಕೆಟ್ ಉಳಿದ ಉಪಗ್ರಹಗಳನ್ನು ಹೊರಚೆಲ್ಲಿತು.
29 ಒಟ್ಟಾರೆ ಉಪಗ್ರಹಗಳ ಉಡಾವಣೆ
436 ಕೆ.ಜಿ. ಎಮಿಸ್ಯಾಟ್ ಉಪಗ್ರಹದ ತೂಕ
1,000 ಇಸ್ರೋ ಗ್ಯಾಲರಿಯಿಂದ ಜನರಿಂದ ವೀಕ್ಷಣೆ
ಒಂದೇ ರಾಕೆಟ್‌ನಲ್ಲಿ ಕೊಂಡೊಯ್ದ ಉಪಗ್ರಹ ಗಳನ್ನು ಬೇರೆ ಬೇರೆ ಕಕ್ಷೆಗೆ ಯಶಸ್ವಿಯಾಗಿ ಕೂರಿಸಿರು ವುದು ಇದೇ ಮೊದಲು. ಇದರಲ್ಲಿ ಯಶಸ್ವಿಯಾದ ಇಸ್ರೋ ಐತಿಹಾಸಿಕ ಸಾಧನೆಯನ್ನು ಮಾಡಿದೆ.
ನರೇಂದ್ರ ಮೋದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.