ಶಿರಾಡಿ ಘಾಟಲ್ಲಿ ಡಬಲ್ ಡೆಕ್ಕರ್
Team Udayavani, Sep 21, 2017, 9:07 AM IST
ಹೊಸದಿಲ್ಲಿ: ದಶಕಗಳ ಹಿಂದೆ ಬೆಂಗಳೂರು ನಗರದಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರ ವಿತ್ತು. ಅದೇ ಮಾದರಿಯ ಬಸ್ ಸಂಚಾರ ಮಂಗಳೂರಿನಿಂದ ಬೆಂಗಳೂರಿಗೆ ಶಿರಾಡಿ ಘಾಟ್ ಮೂಲಕ ಸಂಚರಿಸಿದರೆ ಹೇಗೆ ಇರುತ್ತದೆ? ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಅದೇ ಮಾದರಿಯ ಐಷಾರಾಮಿ ಬಸ್‌ಗಳನ್ನು ಓಡಿಸಲು ಕೇಂದ್ರ ಚಿಂತನೆ ನಡೆಸುತ್ತಿದೆ. ಕರ್ನಾಟಕ ಸೇರಿದಂತೆ ಎಂಟಕ್ಕೂ ಹೆಚ್ಚು ರಾಜ್ಯಗಳಲ್ಲಿ ಇಂಥ ಸೇವೆ ಜಾರಿಯಾಗಲಿದೆ.
ಅತಿ ದೂರದ ಪ್ರಮುಖ ನಗರಗಳಿಗೆ ಈ ಸೇವೆ ಒದಗಿಸುವುದು ಇದರ ಉದ್ದೇಶ. ದೇಶದಲ್ಲಿ ಒಟ್ಟು 75 ಮಾರ್ಗಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಬೆಂಗಳೂರು- ಮಂಗಳೂರು, ದಿಲ್ಲಿ-ಆಗ್ರಾ, ದಿಲ್ಲಿ- ಜೈಪುರ, ಲಕ್ನೋ-ಗೋರಖ್‌ಪುರ, ವಡೋದರ- ಮುಂಬೈ, ಶ್ರೀನಗರ- ಜಲಂದರ್, ಕಲ್ಲಿಕೋಟೆ-ಕೊಚ್ಚಿ ಹಾಗೂ ವಿಶಾಖಪಟ್ಟಣ -ಭುವನೇಶ್ವರ ಮಹತ್ವದ್ದಾಗಿವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ. ಅಲ್ಲದೆ, ಈ ಯೋಜನೆಗಾಗಿ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಕೇಂದ್ರ ಹಣಕಾಸಿನ ನೆರವನ್ನೂ ನೀಡಲಿದೆ. ಮೂಲಗಳ ಪ್ರಕಾರ ಮೊದಲ ಮೂರು ವರ್ಷ ಪ್ರತಿ ಕಿಲೋಮೀಟರ್‌ಗೆ 10 ರೂ.ನಂತೆ ಟಿಕೆಟ್ ದರ ನಿಗದಿಪಡಿಸಲಿದೆ.
ಪ್ರಯಾಣಿಕರ ಪ್ರಮಾಣ ಕುಸಿತ: ರಾಷ್ಟ್ರೀಯ ಹೆದ್ದಾರಿಯಲ್ಲಿ 30,000 ಕಿಲೋಮೀಟರ್‌ನಲ್ಲಿ ನಡೆಸಲಾದ ಟ್ರಾಫಿಕ್ ಸರ್ವೆಯೊಂದರ ಪ್ರಕಾರ ಸರಕಾರಿ ಬಸ್‌ಗಳಲ್ಲಿ ಓಡಾಡುವವರ ಸಂಖ್ಯೆ ಕುಸಿತ ಕಂಡಿದೆ. 2016ರಲ್ಲಿ 45%ರಷ್ಟಿತ್ತು. 2017ರಲ್ಲಿ 40%ಕ್ಕೆ ಕುಸಿದಿದೆ. ಕಾರಿನಲ್ಲಿ ಓಡಾಡುವವರ ಸಂಖ್ಯೆ 55%ರಿಂದ 60%ಕ್ಕೆ ಏರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.