“ರ್ಯಾಲಿ ಫಾರ್ ರಿವರ್ಸ್’ ಕರಡು ಶಿಫಾರಸು ಸಲ್ಲಿಕೆ
Team Udayavani, Oct 7, 2017, 9:31 AM IST
ನವದೆಹಲಿ: ಇಶಾ ಫೌಂಡೇಷನ್‌ನ ಸ್ಥಾಪಕ, ಸದ್ಗುರು ಜಗ್ಗಿ ವಾಸುದೇವ್ ಅವರು ಕೈಗೊಂಡಿದ್ದ ರಾಷ್ಟ್ರವ್ಯಾಪಿ ನದಿ
ಪುನಶ್ಚೇತನ ಅಭಿಯಾನ “ರ್ಯಾಲಿ ಫಾರ್ ರಿವರ್ಸ್’ ಸಮಾರೋಪಗೊಂಡ ಬೆನ್ನಲ್ಲೇ, 761 ಪುಟಗಳ ಕರಡು ಶಿಫಾರ ಸನ್ನು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಲಾಗಿದೆ. ದೇಶಾದ್ಯಂತದ ನದಿಗಳನ್ನು ಸಂರಕ್ಷಿಸುವ ಹಾಗೂ ಪುನಶ್ಚೇತನಗೊಳಿ ಸುವ ನಿಟ್ಟಿನಲ್ಲಿ ಹಲವು ಶಿಫಾರಸು
ಗಳನ್ನು ಈ ಮೂಲಕ ಮಾಡಲಾಗಿದೆ.
ಸ್ವತಃ ಸದ್ಗುರು ಅವರೇ ಅ.3ರಂದು ಪ್ರಧಾನಿ ಮೋದಿ ಅವರನ್ನು ಭೇಟಿ ಯಾಗಿ ಈ ಕರಡನ್ನು ನೀಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗ ಳೊಂದಿಗೆ ಈ ಶಿಫಾರಸುಗಳ ಕುರಿತು ಚರ್ಚಿಸಲು ಇಶಾ ಫೌಂಡೇಷನ್ ಮತ್ತು ತಜ್ಞರು ಮುಂದಾಗಿದ್ದಾರೆ. ತಜ್ಞರ ಸಮಿತಿಯು ಕರಡನ್ನು ಸಿದ್ಧಪಡಿಸಿದೆ.
ಕರಡಲ್ಲಿ ಏನಿದೆ?: ಶಿಫಾರಸಿನ ಕರಡನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ. ಅವೆಂದರೆ, ಭಾರತದ ನದಿಗಳು, ಅವು
ಗಳ ಪುನಶ್ಚೇತನದ ಮೂಲತತ್ವಗಳು, ಜಲ ದಕ್ಷ ನೆಡುತೋಪು ಹಾಗೂ ನದಿಗಳ ಪುನಶ್ಚೇತನ ಮತ್ತು ಸಂರಕ್ಷಣೆಗೆ ಪರಿ ಹಾರ. ಇದರಲ್ಲಿ, ನದಿಗಳ ಎರಡೂ ಬದಿಗಳಲ್ಲಿ ಕನಿಷ್ಠ 1 ಕಿ.ಮೀ. ದೂರದ ವರೆಗೆ ಗಿಡಗಳನ್ನು ನೆಡಬೇಕು, ನದಿ ತೀರದ ಎಲ್ಲ ಸರ್ಕಾರಿ ಭೂಮಿಯನ್ನು ಅರಣ್ಯ ಭೂಮಿಯಾಗಿ ಪರಿವರ್ತಿಸಬೇಕು ಮುಂತಾದ ಶಿಫಾರಸುಗಳು ಇವೆ. ಕರಡು ಪ್ರತಿಯಲ್ಲಿನ ಶಿಫಾರಸುಗಳು ಅನುಷ್ಠಾನವಾದರೆ ನದಿಗಳ ಪರಿಸ್ಥಿತಿ ಸುಧಾರಿಸುತ್ತವೆ, ಸಾಮಾಜಿಕ ಒಳಗೊಳ್ಳುವಿಕೆಯು ಬಲಿ ಷ್ಠವಾಗುತ್ತವೆ, ಪರಿಸರ ಸುಸ್ಥಿರತೆಯಲ್ಲೂ ಸುಧಾರಣೆ ಯಾಗುತ್ತದೆ ಎಂದು ಹೇಳಲಾಗಿದೆ.
ಇದೇ ವೇಳೆ, ಶಿಫಾರಸಿನ ಕರಡನ್ನು ಇದೀಗ Rallyforrivers.orgನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅದಕ್ಕೆ ಸಾರ್ವಜನಿಕರ ಸಲಹೆಗಳನ್ನು ಕಳುಹಿಸಬಹುದು ಎಂದು ಸದ್ಗುರು ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಜತೆಗೆ, ರ್ಯಾಲಿ ಫಾರ್ ರಿವರ್ಸ್‌ನ ಜಾಗೃತಿ ಅಭಿಯಾನ ಇನ್ನೂ ಒಂದು ತಿಂಗಳು ಮುಂದುವರಿಯಲಿದ್ದು, ಸಾರ್ವಜನಿಕರು
ಅ.31ರವರೆಗೂ 8000980009ಗೆ ಮಿಸ್ಡ್ ಕಾಲ್ ಕೊಡಬಹುದು ಎಂದೂ ಸದ್ಗುರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.