ಅತ್ಯಾಧುನಿಕ ಹೈಪರ್‌ಸಾನಿಕ್ ಕ್ಷಿಪಣಿಗೆ ಶ್ರೀಕಾರ
ಶತ್ರುಗಳ ಟ್ರ್ಯಾಕಿಂಗ್ ವ್ಯವಸ್ಥೆಗೂ ಸಿಗದೆ ದಾಳಿ ನಡೆಸಬಲ್ಲ ಛಾತಿಯುಳ್ಳವು
Team Udayavani, Oct 6, 0300, 12:33 AM IST
ಹೊಸದಿಲ್ಲಿ: ಭಾರತದ ಸೇನಾ ಬಲವನ್ನು ಶಕ್ತಿಶಾಲಿಯಾಗಿಸುವಲ್ಲಿ ಕೇಂದ್ರ ಸರಕಾರ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಅದರ ಮತ್ತೂಂದು ಹೆಜ್ಜೆಯಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಮುಂದಿನ ತಲೆಮಾರಿನ ಶಬ್ದಾತೀತ (ಹೈಪರ್‌ಸಾನಿಕ್) ಮಾದರಿಯ ಕ್ಷಿಪಣಿಗಳನ್ನು ತಯಾರಿಸಲು ಮುಂದಾಗಿದೆಯಲ್ಲದೆ, ಭಾರತವನ್ನು ರಕ್ಷಣಾ ಪರಿಕರ, ಶಸ್ತ್ರಾಸ್ತ್ರ ತಯಾರಿಕಾ ತವರನ್ನಾಗಿಸಲು ಹೊಸ ಹೆಜ್ಜೆಯನ್ನಿಟ್ಟಿದೆ.
ಎಲ್ಲೆಡೆ ಶುರುವಾಗಿರುವ ಟ್ರೆಂಡ್!
ಹೈಪರ್‌ಸಾನಿಕ್ ಕ್ಷಿಪಣಿಗಳ ತಯಾರಿಕೆಯು ಈಗ ಅಭಿವೃದ್ಧಿಗೊಂಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಮೊದಲ ಆಯ್ಕೆ ಎನಿಸಿವೆ. ಪರ ಮಾಣು ದಾಳಿಗಳ ನಿಗ್ರಹ ಹಾಗೂ ಮುಂಚೂಣಿ ದಾಳಿಗಳನ್ನು ಸಂಘಟಿಸುವ ನಿಟ್ಟಿನಲ್ಲಿ ಹೈಪರ್ ಸಾನಿಕ್ ಕ್ಷಿಪಣಿ ಗಳ ಪಾತ್ರ ಹಿರಿದು ಎಂದು ಹೇಳಲಾಗಿದೆ. ಹಾಗಾಗಿ, ಚೀನ, ರಷ್ಯಾ ಹಾಗೂ ಅಮೆರಿಕ ಈ ಮಾದರಿಯ ಕ್ಷಿಪಣಿಗಳ ತಯಾರಿಕೆಯ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿವೆ. ಅದೇ ನಿಟ್ಟಿನಲ್ಲಿ ಭಾರತವೂ ಮುಂದಡಿ ಇಟ್ಟಿದ್ದು, ಕೆಲವೇ ದಿನಗಳಲ್ಲಿ ನಮ್ಮಲ್ಲೂ ಪರಿಣಾಮಕಾರಿ ಶಸ್ತ್ರಾಸ್ತ್ರಗಳು ಸಿದ್ಧವಾಗಲಿರುವುದು ನಿಶ್ಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿಗೂ ಕ್ರಮ
ಹೈಪರ್‌ಸಾನಿಕ್ ಕ್ಷಿಪಣಿಗಳ ತಯಾರಿಕೆ ನಡುವೆಯೇ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನವನ್ನೂ ಅಭಿವೃದ್ಧಿಗೊಳಿಸಲು ಡಿಆರ್‌ಡಿಒ ನಿರ್ಧರಿಸಿದೆ. ಆಧುನಿಕ ಶಸ್ತ್ರಾಸ್ತ್ರ, ಸುರಕ್ಷಾ ವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ತಾನು ಸಂಶೋಧನೆ ನಡೆಸಿ ಅಭಿವೃದ್ಧಿ ಪಡಿಸಿರುವ 1,500ಕ್ಕೂ ಹೆಚ್ಚು ಪರಿಕರಗಳ ಪೇಟೆಂಟ್‌ಗಳನ್ನು ಡಿಆರ್‌ಡಿಒ ಹೊಂದಿದೆ. ಜತೆಗೆ ಟ್ರಾನ್ಸ್‌ಫರ್ ಆಫ್ ಟೆಕ್ನಾಲಜಿ (ಟಿಒಟಿ) ಒಪ್ಪಂದಕ್ಕಿದ್ದ ಶುಲ್ಕವನ್ನು ಶೇ. 20ರಿಂದ ಶೇ. 5ಕ್ಕೆ ಇಳಿಸಲಾಗಿದೆ.
ಏನಿದು ಹೈಪರ್‌ಸಾನಿಕ್?
ಸಾಮಾನ್ಯ ವಾತಾವರಣ ದಲ್ಲಿ ಶಬ್ದದ ಅಲೆಗಳು ಸಾಗುವ ವೇಗಕ್ಕಿಂತ ಐದು ಪಟ್ಟು ಹೆಚ್ಚು ವೇಗದಿಂದ ಸಾಗುವ ಸಾಮರ್ಥ್ಯ ಹೊಸ ಕ್ಷಿಪಣಿ ಗಳಿಗೆ ಇರಲಿದೆ. ಈ ತಂತ್ರ ಜ್ಞಾನಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸ ಈಗಾ ಗಲೇ ಸಾಗು ತ್ತಿದ್ದು, ಅದರ ಪ್ರಯೋಗ ಗಳಿಗಾಗಿ ಒಂದು ಸುರಂಗ ವನ್ನು ನಿರ್ಮಿಸ ಲಾಗಿದೆ ಎಂದು ಕೇಂದ್ರ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷತೆ ಏನು?
– ಸದ್ಯಕ್ಕೆ ನಮ್ಮಲ್ಲಿರುವ ಖಂಡಾಂತರ ಕ್ಷಿಪಣಿಗಳು (ಐಸಿಬಿಎಂ) ಅತೀ ವೇಗದಲ್ಲಿ ಸಾಗಬಲ್ಲ ಕ್ಷಿಪಣಿಗಳಾಗಿವೆ. ಆದರೆ ಹೈಪರ್ ಸಾನಿಕ್ ಕ್ಷಿಪಣಿಗಳು ಅವುಗಳಿಗಿಂತ ಹೆಚ್ಚು ವೇಗವಾಗಿ ಸಾಗಬಲ್ಲವು .
– ನಾವು ಉಡಾಯಿಸುವ ಕ್ಷಿಪಣಿಗಳನ್ನು ಹಾಗೂ ಅವು ಸಾಗುವ ಮಾರ್ಗಗಳನ್ನು ಪತ್ತೆಹಚ್ಚಿ ಅವುಗಳನ್ನು ನಾಶಪಡಿಸುವುದು ಈಗ ಲಭ್ಯವಿರುವ ತಂತ್ರಜ್ಞಾನದಲ್ಲಿ ಶತ್ರು ರಾಷ್ಟ್ರಗಳಿಗೆ ಸಾಧ್ಯ. ಆದರೆ ಹೈಪರ್‌ಸಾನಿಕ್ ಕ್ಷಿಪಣಿಗಳ ಪತ್ತೆ ಅಸಾಧ್ಯವಾಗಿದೆ.
– ಈ ಕ್ಷಿಪಣಿಗಳು ಪರಮಾಣು ಸಹಿತ ಇನ್ನಿತರ ಮಾದರಿಯ ಸ್ಫೋಟಕಗಳನ್ನು ನಿಖರ ಗುರಿಗೆ ತಲುಪಿಸಿ ಸ್ಫೋಟಿಸಬಲ್ಲವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.