Drink and Drive: ಗೋವಾ ಟ್ರಾಫಿಕ್ ಪೊಲೀಸರಿಂದ ಜನಜಾಗೃತಿ ಅಭಿಯಾನ
Team Udayavani, Aug 13, 2023, 12:50 PM IST
ಪಣಜಿ: ಕೆಲ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವ ಹಿನ್ನೆಲೆಯಲ್ಲಿ ಗೋವಾ ಟ್ರಾಫಿಕ್ ಪೊಲೀಸರು ಹೊಸ ಟ್ರಿಕ್ ಮೂಲಕ ಇಂತಹವರನ್ನು ಕುಡಿದು ವಾಹನ ಏರುವ ಮುನ್ನವೇ ಬಂಧಿಸಲು ಹೊಸ ಪ್ಲ್ಯಾನ್ ರೂಪಿಸಿದ್ದಾರೆ.
ಕಿಕ್ಕಿರಿದು ತುಂಬಿರುವ ಬಾರ್ ಗಳಿಂದ ಹೊರಬರುವ ಜನರ ಮೇಲೆ ಕಣ್ಣಿಡಲು ಅಂತಹ ಬಾರ್ ಗಳ ಹೊರಗೆ ಪೊಲೀಸರನ್ನು ಸಾಮಾನ್ಯ ಉಡುಪಿನಲ್ಲಿ ನಿಯೋಜಿಸಲು ಪೋಲಿಸ್ ಇಲಾಖೆ ಮುಂದಾಗಿದೆ.
ಗೋವಾದ ಬಾಣಸ್ತರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಪಘಾತದ ನಂತರ ಸಂಚಾರ ಪೊಲೀಸರು, ʼಕುಡಿದು ವಾಹನ ಚಲಾಯಿಸುವ’ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ. ಆದರೂ ಕೆಲವರು ಈ ನಿಯಮ ಪಾಲಿಸುತ್ತಿಲ್ಲ. ಕುಡಿದು ವಾಹನ ಚಲಾಯಿಸುವವರ ವಿರುದ್ಧ ಆಗಾಗ್ಗೆ ಅಭಿಯಾನಗಳನ್ನು ಪ್ರಾರಂಭಿಸಲಾಗುತ್ತದೆ. ಪೊಲೀಸರು ಜನಜಾಗೃತಿ ಅಭಿಯಾನ ನಡೆಸಿದರೂ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದಾರೆ.
ರಾತ್ರಿ ಪಾರ್ಟಿಗಳಿಗೆ ತೆರಳಿದಾಗ ಯಾವುದೇ ವಾಹನ ಚಾಲಕರು ಮದ್ಯ ಸೇವಿಸಬಾರದು ಎಂಬ ನಿಯಮವಿದ್ದರೂ ಅದನ್ನು ಪಾಲಿಸುತ್ತಿಲ್ಲ ಎಂಬ ಅಂಶವನ್ನು ಪೋಲಿಸರು ಗಂಭೀರವಾಗಿ ಪರಿಗಣಿಸಿ ಇದೀಗ ಹೊಸ ಪ್ಲ್ಯಾನ್ ಸಿದ್ಧಪಡಿಸಿದ್ದಾರೆ.
ಈ ಹಿಂದೆ ಸಂಚಾರ ಪೊಲೀಸರು ಮದ್ಯದಂಗಡಿಗಳಲ್ಲಿ ಚಾಲಕರು ಮದ್ಯಪಾನ ಮಾಡದಂತೆ ಎಚ್ಚರಿಕೆ ನೀಡುವ ಫಲಕಗಳನ್ನು ಹಾಕುವಂತೆ ಸೂಚನೆ ನೀಡಿದ್ದರು. ಆದರೆ ಕೆಲವು ಬಾರ್ ಗಳು ಇದನ್ನು ಜಾರಿಗೆ ತಂದರೆ, ಮತ್ತೆ ಕೆಲವರು ಕಡೆಗಣಿಸಿದವು.
ಆದ್ದರಿಂದ ಈ ಸೂಚನೆಗಳನ್ನು ಪಾಲಿಸುವಂತೆ ಮದ್ಯದಂಗಡಿಗಳಿಗೆ ಮರು ಸೂಚನೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಲ್ಕೋಹಾಲ್ ಪರೀಕ್ಷೆ: 364 ಚಾಲಕರ ಮೇಲೆ ಕ್ರಮ
ಬಾರ್ ಗಳಿಂದ ಹೊರಗೆ ಬಂದ ನಂತರ ವಾಹನ ಚಾಲನೆ ಮಾಡುವವರ ಮೇಲೆ ನಿಗಾ ಇಡುವಂತೆ ಹಾಗೂ ಮದ್ಯಪಾನ ಪರೀಕ್ಷೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಚಾರಿ ಪೊಲೀಸ್ ಇಲಾಖೆ ಸೂಚನೆ ನೀಡಿದೆ.
ಕುಡಿದು ವಾಹನ ಚಲಾಯಿಸುವವರ ವಿರುದ್ಧದ ಅಭಿಯಾನದ ಭಾಗವಾಗಿ ಉತ್ತರ ಗೋವಾದಲ್ಲಿ ಗುರುವಾರ ತಡರಾತ್ರಿಯವರೆಗೆ 364 ಜನರನ್ನು ಬಂಧಿಸಲಾಗಿದೆ ಎಂದು ಸಂಚಾರ ಪೊಲೀಸ್ ಉಪ ಅಧೀಕ್ಷಕ ಸಿದ್ಧಾಂತ್ ಶಿರೋಡ್ಕರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.