ಸಂಗಮದಲ್ಲಿ ಅನುರಣಿಸಿದ ‘ಹರ್ ಹರ್ ಗಂಗೆ’
Team Udayavani, Jan 16, 2019, 3:31 AM IST
ಪ್ರಯಾಗ್‌ರಾಜ್: ಮಂಗಳವಾರ ಮುಂಜಾನೆ ಸೂರ್ಯ ಉದಯಿಸುತ್ತಿದ್ದಂತೆ, ಉತ್ತರಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ‘ಹರ್ ಹರ್ ಗಂಗೆ’, ‘ಹರ್ ಹರ್ ಗಂಗೆ’ ಎಂಬ ಷೋಷಣೆಗಳು ಮುಗಿಲು ಮುಟ್ಟಿದ್ದವು. ಗಂಗೆ, ಯುಮನೆ ಮತ್ತು ಸರಸ್ವತಿಯ ಸಂಗಮ ಸ್ಥಳವು ಭಕ್ತಿ-ಭಾವ ಪರವಶತೆಯ ಬೀಡಾಗಿ ಪರಿವರ್ತಿತಗೊಂಡಿತ್ತು.
50 ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ಮಂಗಳವಾರ ಅದ್ಧೂರಿ ಚಾಲನೆ ದೊರೆತಿದ್ದು, ಮೊದಲ ದಿನವೇ 2.25 ಕೋಟಿ ಮಂದಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ಕುಂಭಮೇಳವನ್ನು ಕಣ್ತುಂಬಿಕೊಂಡರು. 13 ಅಖಾಡಾಗಳ ಸಾಧುಗಳು ಶಾಹಿ ಸ್ನಾನ ಮಾಡುವ ಮೂಲಕ ಪುಣ್ಯಸ್ನಾನಕ್ಕೆ ಚಾಲನೆ ನೀಡಿದರು. ಇದೇ ವೇಳೆ, ನಾಗಾ ಸಾಧುಗಳ ವ್ಯವಸ್ಥಿತ ಮೆರವಣಿಗೆಯು ಎಲ್ಲರ ಕಣ್ಮನ ಸೆಳೆಯಿತು. ಪ್ರಸಕ್ತ ಕುಂಭದಲ್ಲಿ 12 ಕೋಟಿ ಯಾತ್ರಿಗಳು ಆಗಮಿಸುವ ನಿರೀಕ್ಷೆಯಿದೆ.
350 ವರ್ಷಗಳ ಬಳಿಕ: ಬರೋಬ್ಬರಿ 350 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿದೆ ಎಂದು ಯು.ಪಿ. ಸಚಿವ ಲಕ್ಷ್ಮಿನಾರಾಯಣ ಚೌಧರಿ ಹೇಳಿದ್ದಾರೆ. 350 ವರ್ಷಗಳ ಹಿಂದೆಯೇ ಈ ನಗರಕ್ಕೆ ಪ್ರಯಾಗ್‌ರಾಜ್ ಎಂಬ ಹೆಸರಿತ್ತು. ತದನಂತರ ಅದನ್ನು ಅಲಹಾಬಾದ್ ಎಂದು ಬದಲಿಸ ಲಾಗಿತ್ತು. ಈಗ ನಮ್ಮ ಸರ್ಕಾರ ಮತ್ತೆ ಅಲಹಾ ಬಾದ್ ಅನ್ನು ಪ್ರಯಾಗ್‌ರಾಜ್ ಎಂದು ಬದಲಿಸಿದೆ. ಹಾಗಾಗಿ, 350 ವರ್ಷಗಳ ನಂತರ ಪ್ರಯಾಗ್‌ರಾಜ್‌ನಲ್ಲಿ ಕುಂಭ ನಡೆದಂತಾಗಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
4,200 ಕೋಟಿ ರೂ. ವೆಚ್ಚ: ಈ ಬಾರಿಯದ್ದು ಇತಿಹಾಸದಲ್ಲೇ ಅತ್ಯಂತ ವೆಚ್ಚದಾಯಕ ಕುಂಭಮೇಳ ಎಂಬ ಖ್ಯಾತಿ ಪಡೆದಿದೆ. ಉತ್ತರಪ್ರದೇಶ ಸರ್ಕಾರವು ಕುಂಭಕ್ಕಾಗಿ ಬರೋಬ್ಬರಿ 4,200 ಕೋಟಿ ರೂ. ಅನುದಾನ ನೀಡಿದೆ. 2013ರ ಮಹಾಕುಂಭಕ್ಕೆ ನೀಡಿದ್ದ ಅನುದಾನದ ಮೂರು ಪಟ್ಟು ಹೆಚ್ಚು ಮೊತ್ತವನ್ನು ಈ ಅರ್ಧಕುಂಭಕ್ಕೆ ನೀಡಲಾಗಿದೆ
ಸಚಿವೆ ಸ್ಮತಿ ಪುಣ್ಯಸ್ನಾನ
ಕುಂಭದ ಆರಂಭದ ದಿನವಾದ ಮಂಗಳವಾರ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಸಂಗಮದಲ್ಲಿ ಪುಣ್ಯಸ್ನಾನಗೈದರು. ಬಳಿಕ ಅದರ ಫೋಟೋವನ್ನು ‘ಹರ್ ಹರ್ ಗಂಗೆ’ ಎಂಬ ಶಿರೋನಾಮೆಯಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.