ರಾಮರಾಜ್ಯ ರಥಯಾತ್ರೆಗೆ ಚಾಲನೆ
Team Udayavani, Feb 14, 2018, 9:26 AM IST
ಲಕ್ನೋ: ಆರೆಸ್ಸೆಸ್‌ನ ಅಂಗಸಂಸ್ಥೆಗಳಾದ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್(ಎಂಆರ್‌ಎಂ) ಹಮ್ಮಿಕೊಂಡಿರುವ ರಾಮರಾಜ್ಯ ರಥಯಾತ್ರೆಗೆ ಅಯೋಧ್ಯೆಯಲ್ಲಿ ಮಂಗಳ ವಾರ ಚಾಲನೆ ಸಿಕ್ಕಿದೆ. 2019ರ ಲೋಕ ಸಭೆ ಚುನಾವಣೆಗೆ ಮೊದಲೇ ರಾಮ ಮಂದಿರ ಆಂದೋಲನವನ್ನು ಪುನರೂರ್ಜಿತಗೊಳಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಮಜನ್ಮ ಭೂಮಿ- ಬಾಬರಿ ಮಸೀದಿ ಭೂವಿವಾದದ ವಿಚಾರಣೆಯು ಕೊನೆಯ ಹಂತದಲ್ಲಿ ರುವಾಗಲೇ ಈ ಯಾತ್ರೆ ಆರಂಭವಾಗಿದೆ.
ಅಯೋಧ್ಯೆಯಿಂದ ರಾಮೇಶ್ವರಂವರೆಗೆ ರಥಯಾತ್ರೆ ಸಾಗಲಿದ್ದು, ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಸಂಚರಿಸಲಿವೆ. ಒಟ್ಟು 41 ದಿನಗಳ ಕಾಲ ನಡೆಯಲಿರುವ ಯಾತ್ರೆ ಮಾ.23ಕ್ಕೆ ಸಮಾಪ್ತಿಯಾಗಲಿದೆ. 1990ರ ದಶಕದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೇಕಾದ ಕಂಬಗಳನ್ನು ಕೆತ್ತಲೆಂದು ವಿಎಚ್‌ಪಿ ಅಯೋಧ್ಯೆಯಲ್ಲಿ ಕರಸೇವಕಪುರಂ ಎಂಬ ವರ್ಕ್‌ಶಾಪ್‌ವೊಂದನ್ನು ತೆರೆದಿದ್ದು, ಅಲ್ಲೇ ಯಾತ್ರೆಗೆ ಚಾಲನೆ ನೀಡಿರುವುದು ವಿಶೇಷ.
6 ರಾಜ್ಯಗಳಲ್ಲಿ ಸಂಚಾರ: ಟಾಟಾ ಮಿನಿ ಟ್ರಕ್‌ಗೆ ಸಿಂಗಾರ ಮಾಡಿ ರಥವಾಗಿ ಮಾರ್ಪಡಿಸಲಾಗಿದೆ. ಇದು ಬಿಜೆಪಿ ಆಡಳಿತದಲ್ಲಿರುವ ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಸಂಚರಿಸಿ, ಅನಂತರ ಕರ್ನಾಟಕ ತಲುಪಲಿದೆ. ಬಳಿಕ ಕೇರಳಕ್ಕೆ ತೆರಳಿ, ಅಲ್ಲಿಂದ ತಮಿಳುನಾಡಿನ ರಾಮೇಶ್ವರಂನಲ್ಲಿ ಯಾತ್ರೆ ಸಮಾಪ್ತಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.