ಚಾಲಕ-ಪ್ರಯಾಣಿಕ 50 : 50 ಜವಾಬ್ದಾರಿ


Team Udayavani, Feb 19, 2020, 6:45 AM IST

bus

ಇತ್ತೀಚೆಗೆ ಕರಾವಳಿಯ “ಮಾಳಾ ಘಾಟ್‌’ನಲ್ಲಿ ಬಸ್‌ ಅವಘಡಕ್ಕೀಡಾಗಿ 9 ಮಂದಿ ಸಾವನ್ನಪ್ಪಿದ್ದರು. ಮರುದಿನ ಕರಾವಳಿಯಲ್ಲಿ 4 ಬಸ್‌ಗಳು ಪಲ್ಟಿಯಾಗಿದ್ದವು. ರಾಜ್ಯಾದ್ಯಂತ ಈ ರೀತಿಯ ಘಟನೆಗಳು ಹೆಚ್ಚುತ್ತಿವೆ. ಪ್ರವಾಸ, ಶೈಕ್ಷಣಿಕ ಪ್ರವಾಸ, ಸಮಾರಂಭಗಳಿಗೆ ತೆರಳುವ ವಾಹನಗಳು ಹೆಚ್ಚು ಅಪಘಾತಕ್ಕೀಡಾಗುತ್ತಿವೆ. ಇಂತಹ ಅವಘಡಗಳು ಸಂಭವಿಸುವುದಾದರೂ ಹೇಗೆ? ಕಾರಣಗಳೇನು? ಎಂಬುದಕ್ಕೆ ಉತ್ತರ ಹುಡುಕುವ ಪ್ರಯತ್ನವಾದರೆ ಭವಿಷ್ಯದಲ್ಲಿ ಅವಘಡಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಪಾಲಿಸಬೇಕಾದ ಸುರಕ್ಷಾ ಕ್ರಮಗಳು ಇಲ್ಲಿವೆ..

ಪ್ರವಾಸ-ಪ್ರಯಾಣದಲ್ಲಿ ಕಾಳಜಿ ಇರಲಿ
ಅವಸರವೇ ಅಪಘಾತಕ್ಕೆ ಕಾರಣ ಎಂಬಂತೆ ಕೆಲವೊಂದು ಬಾರಿ ಅತಿಯಾದ ಆತ್ಮವಿಶ್ವಾಸ ಸಹ ಅವಘಡಕ್ಕೆ ಕಾರಣವಾಗುತ್ತದೆ. ಪ್ರವಾಸಕ್ಕೆ ತೆರಳಲು ಇರುವ ಕಾಳಜಿ ಮತ್ತು ಆಸಕ್ತಿ ಪ್ರಯಾಣ ದುದ್ದಕ್ಕೂ ಅನುಸರಿಸಬೇಕಾದುದು ಅಗತ್ಯ. ಸಂಸ್ಥೆ ಅಥವಾ ಶೈಕ್ಷಣಿಕ ಪ್ರವಾಸದಲ್ಲಿ ಸುರಕ್ಷತೆಗೆ ಮಹತ್ವ ನೀಡಬೇಕು. ಶಾಲೆ ಅಥವ ಸಂಸ್ಥೆ ತಮ್ಮ ಪ್ರವಾಸದ ಹಾದಿ ಮತ್ತು ಸಾಗಬೇಕಾದ ದೂರ
ವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಹಾಕಿಕೊಳ್ಳುವುದು ಉತ್ತಮ.

ಕಾರಣ ಏನು?
ಹೆಚ್ಚಾಗಿ ಪ್ರವಾಸ ಎಂದರೆ ಮೋಜು-ಮಸ್ತಿಯ ಸಮ್ಮಿಲನ. ಹೌದು ನಮ್ಮ ಹಕ್ಕು ಸಂಭ್ರಮಿ ಸೋಣ. ಅದರ ಜತೆಗೆ ನಿಮ್ಮ ಹಾಗೂ ಜತೆ ಬಂದವರ ಸುರಕ್ಷೆಯನ್ನು ಕಾಪಾಡಿಕೊಳ್ಳುವುದೂ ಜವಾ ಬ್ದಾರಿ ಯಾಗಿರಬೇಕು. ರಸ್ತೆ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದ್ದರೂ ಎದುರಿನಿಂದ ಬರುವ ವಾಹನಗಳ ಮೇಲೆ ಗಮನಹರಿಸುವುದು ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿ.

ಸಾಮಾನ್ಯ ಕಾರಣಗಳು
– ಹವಾಮಾನ
ಅಪಘಾತಗಳಿಗೆ ಹವಾಮಾನ ವೈಪರೀತ್ಯ ಗಳು ವಿರಳವಾಗಿ ಕಾರಣವಾಗುತ್ತವೆ. ಕೆಲವೆಡೆ ಅತಿಯಾದ ಮಂಜಿನ ಕಾರಣಕ್ಕೆ ರಸ್ತೆ ಕಾಣದೇ ಇರಬಹುದು. ರಾಜ್ಯದಲ್ಲಿ ಈ ಸಾಧ್ಯತೆ ವಿರಳ.

– ಎಡಗಡೆ ತಿರುವು
ಅತೀ ಹೆಚ್ಚು ಬಸ್‌ ಅಪಘಾತಗಳು ದಾಖಲಾಗಿದ್ದು ಎಡಗಡೆ ತಿರುವಿನಲ್ಲಿ. ಕೆಲವೊಮ್ಮೆ ಎಡಗಡೆಯ ತಿರುವಿನ ಪರಿಸ್ಥಿತಿಯನ್ನು ನಿರ್ಧರಿಸಲು (ಜಡ್ಜ್ ಮಾಡಲು) ಚಾಲ ಕರು ಗೊಂದಲಕ್ಕೀಡಾಗುತ್ತಾರೆ. ಇಂತಹ ಸಂದರ್ಭ ಅಪಘಾತಗಳು ಸಂಭವಿಸುತ್ತವೆ.

– ಬ್ಲೆ„ಂಡ್‌ ಸ್ಪಾಟ್‌
ಡ್ರೈವಿಂಗ್‌ ಭಾಷೆಯಲ್ಲಿ ಹೇಳಲಾಗುವ ಬ್ಲೆ„ಂಡ್‌ ಸ್ಪಾಟ್‌ಗಳು ಹೆಚ್ಚು ಅಪಘಾತ ವಲಯಗಳಾಗಿವೆ. ತಿರುವುಗಳಲ್ಲಿ ರಸ್ತೆಗಳು ಎತ್ತ ಚಲಿಸುತ್ತವೆ ಎಂದು ಕಾಣದೇ ಇದ್ದಾಗ ಅಪಘಾತಗಳಿಗೆ ಎಡೆಮಾಡಿಕೊಡುತ್ತದೆ. ಇಂತಹ ಕಡೆಗಳಲ್ಲಿ ಎಚ್ಚರ ಅಗತ್ಯ.

ಅವಗಣನೆಗಳ ಪರಿಣಾಮ
– ರಸ್ತೆ ಇಕ್ಕೆಲಗಳಲ್ಲಿ ವೇಗದ ಮಿತಿ ಬರೆದಿದ್ದರೂ ಅದನ್ನು ನಿರ್ಲಕ್ಷಿಸುವುದು.
– ಯಾರಾದರೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದರೆ ನೀವು ಅತಿ ಹೆಚ್ಚು ಜಾಗರೂಕರಾಗಿರಿ.
– ರಸ್ತೆ ಸಂಕೇತಗಳ ನಿರ್ಲಕ್ಷ Â ಹೆಚ್ಚಾಗು ತ್ತಿದೆೆ. ನಿರ್ಲಕ್ಷಿಸಿದಾಗ ಅಪಘಾತಕ್ಕೆ ಒಳಗಾಗುತ್ತಿರುವುದು ಖಚಿತ. ತನ್ನೊಂದಿಗೆ ಇತರರ ಪ್ರಾಣವನ್ನು ಅಪಾಯಕ್ಕೆ ಒಡ್ಡುತ್ತಾರೆ.
– ತಾನು ಏನನ್ನೂ ಮಾಡಬಹುದು. ತನ್ನಂತೆ ಬಲಿಷ್ಠ, ಪರಾಕ್ರಮಿ ಯಾರೂ ಇಲ್ಲ ಎಂದು ಯೋಚಿಸುವ ವಯಸ್ಸಿನಲ್ಲಿ ಹತ್ತು ಹಲವಾರು ಅಪಘಾ ತಗಳು ನಡೆಯುತ್ತಲೇ ಇರುತ್ತವೆೆ.
– ರಾತ್ರಿ ಹೊತ್ತಿನ ಚಾಲನೆ ( ಕೆಲವರಲ್ಲಿ ದೃಷ್ಟಿದೋಷ, ಎದುರಿನಿಂದ ಬರುವ ವಾಹನಗಳ ತೀಕ್ಷ್ಣ ಬೆಳಕು, ನಿ¨ªೆಯ ಮಂಪರು.)

ನಿಮಿಷಕ್ಕೆ 4 ಸಾವು
ಭಾರತದಲ್ಲಿ ಪ್ರತಿ 4 ನಿಮಿಷ ಒಬ್ಬರು ರಸ್ತೆ ಅಪಘಾತಗಳಲ್ಲಿ ಬಲಿಯಾಗುತ್ತಾರೆ. ಪ್ರತಿ ನಿಮಿಷಕ್ಕೆ ಒಂದು ಗಂಭೀರ ರಸ್ತೆ ಅಪಘಾತ ಸಂಭವಿಸುತ್ತದೆ. ಪ್ರತಿ ಒಂದು ಗಂಟೆಯಲ್ಲಿ 16 ಜನರು ಈ ರೀತಿ ಮರಣ ಹೊಂದುತ್ತಾರೆ ಎನ್ನುತ್ತದೆ ವರದಿಯೊಂದು.

ರಾಜ್ಯದಲ್ಲಿ 942 ಬ್ಲಾಕ್‌ ಸ್ಪಾಟ್‌ಗಳು
ರಾಜ್ಯದಲ್ಲಿ ರಸ್ತೆ ಅಪಘಾತಗಳು ಹೆಚ್ಚಿರುವ ಒಟ್ಟು 942 “ಬ್ಲಾಕ್‌ ಸ್ಪಾಟ್‌’ಗಳನ್ನು ಗುರುತಿಸಲಾಗಿದ್ದು, ರಸ್ತೆ ತಿರುವುಗಳನ್ನು ಸರಿಪಡಿಸುವುದು ಸೇರಿ ಈ ಸ್ಥಳಗಳಲ್ಲಿ ಅಪಘಾತ ಮರುಕಳಿಸದಂತೆ ತಡೆಯಲು ಕಾರ್ಯಕ್ರಮ ರೂಪಿಸಲಾಗುತ್ತಿದೆ.

ಪ್ರಯಾಣಿಕರ ಜವಾಬ್ದಾರಿ ಏನು?
– ಚಾಲಕನ ಮನಸ್ಸು
ಪ್ರಯಾಣದ ಸಂಭ್ರಮಕ್ಕೆ ಚಾಲಕನೂ ಭಾಗಿದಾರನೇ. ಅವನ ಮನಸ್ಸು ನಿರ್ಮಲವಾಗಿದ್ದರೆ ಮಾತ್ರ ಸುಖಕರ ಪ್ರಯಾಣ ಸಾಧ್ಯ. ಪ್ರಯಾಣದ ವೇಳೆ ಚಾಲಕನ ಮನಸ್ಸನ್ನು ಕೆಣಕದಿರಿ. ಅವರ ಜತೆ ಕೆಟ್ಟದಾಗಿ ನಡೆದುಕೊಳ್ಳುವುದು ಅಥವಾ ಬೈದುಕೊಳ್ಳಬೇಡಿ. ನಮ್ಮ ಅಗತ್ಯಕ್ಕಾಗಿ ವೇಗವಾಗಿ ಚಲಾಯಿಸಲು ಹೇಳುವ ಪ್ರಯತ್ನ ಬೇಡ.

– ಹಾಡಿಗೊಂದು ಮಿತಿ ಇರಲಿ
ಪ್ರವಾಸ ಅಥವಾ ಶುಭ ಸಮಾರಂಭಗಳಿಗೆ ತೆರಳುವ ಬಸ್‌ನಲ್ಲಿ ಅಥವ ಟೆಂಪೋ ಟ್ರಾವೆಲರ್‌ಗಳಲ್ಲಿ ಭಾರೀ ಶಬ್ದದೊಂದಿಗೆ ಹಾಡು ಕೇಳಿಬರುತ್ತದೆ. ಇಂತಹ ಸಂದರ್ಭ ಚಾಲಕನಿಗೆ ಇತ ರೆ ವಾಹನಗಳ ಹಾರ್ನ್ ಕೇಳಿಸದೇ ಇರಬಹುದು. ಇದಕ್ಕಾಗಿ ಒತ್ತಾಯದಲ್ಲಿ ಹಾಡನ್ನು ಇಡಬಾರದು. ಹಾಡಿನ ಶಬ್ದವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

– ಹಾಡು-ನೃತ್ಯ ಇರಲಿ ಮಿತಿ
ಬಸ್‌ನಲ್ಲಿ ಡಿಜೆಗಳು, ನೃತ್ಯಗಳು ಇಂದಿನ ದಿನಗಳಲ್ಲಿ ಸಾಮಾನ್ಯ. ಡ್ಯಾನ್ಸ್‌ ಸಂದರ್ಭ ಚಾಲಕನ ಮನಸ್ಸು ಗೊಂದಲಕ್ಕೀಡಾಗುವ ಸಾಧ್ಯತೆ ಇದೆ. ಪ್ರಯಾಣಿಕರ ಬೊಬ್ಬೆ, ಚೀರಾಟಗಳು ಒಟ್ಟಾರೆಯಾಗಿ ಚಾಲಕನಿಗೆ ಕಿರಿಕಿರಿಯನ್ನುಂ ಟು ಮಾಡುತ್ತವೆೆ. ಇಂತಹ ಸಂದರ್ಭ ರಸ್ತೆ ಮತ್ತು ವಾಹನಗಳತ್ತ ಚಿತ್ತ ಹರಿಸಲು ಅಸಾಧ್ಯವಾಗಿ ದುರ್ಘ‌ಟನೆಗಳು ನಡೆಯುವ ಸಾಧ್ಯತೆ ಹೆಚ್ಚು.

– ನೀರು ಕುಡಿಯಲು ವಾಹನ ನಿಲ್ಲಿಸಿ
ಬಹಳಷ್ಟು ಸಂದರ್ಭ ಡ್ರೈವಿಂಗ್‌ನಲ್ಲಿರುವ ವೇಳೆ ನೀರು ಕುಡಿಯುವುದು, ಫೋನ್‌ನಲ್ಲಿ ಮಾತನಾಡುವುದು, ಚಾರ್ಜ್‌ಗೆ ಇಡುವುದು ಹಾಡು/ಚಾನೆಲ್‌ ಬದಲಾಯಿಸುವುದು ಇತ್ಯಾದಿ ಕಂಡು ಬರುತ್ತಿವೆ. ಇವುಗಳು ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಳ್ಳಲು ಇರುವಂಥ ಸಂದ ರ್ಭಗಳಾಗಿವೆ. ಈ ವೇಳೆ ವಾಹನವನ್ನು ಬದಿಗೆ ನಿಲ್ಲಿಸಿ ನೀರು ಕುಡಿಯಿರಿ.

– ಪಾರ್ಟಿ ಮೂಡ್‌ ಡ್ರೈವಿಂಗ್‌ ಬೇಡ
ಪ್ರವಾಸದ ಜೋಶ್‌ನಲ್ಲಿ ಪಾರ್ಟಿ ಮಾಡುವುದು ಇತ್ತೀಚಿನ ಟ್ರೆಂಡ್‌. ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಅವಘಡಗಳು ಹೆಚ್ಚುತ್ತಿವೆ. ಬಹುತೇಕ ರಾತ್ರಿ ಪ್ರಯಾಣದಲ್ಲೇ ಅಪಘಾತಗಳು ಹೆಚ್ಚಾ ಗಿವೆ. ದುರ್ಘ‌ಟನೆ ನಡೆದ ಬಳಿಕ ಚಾಲಕ ಪಾನಮತ್ತರಾಗಿದ್ದರು ಎಂಬ ಆರೋಪಗಳು ಸಾಮಾನ್ಯ. ಇಲ್ಲಿ ಬಸ್‌ನ ಪ್ರಯಾಣಿಕರ ಪಾಲೂ ಇದೆ.

– ಚಾಲಕನೊಂದಿಗೆ ಹರಟೆ
ರಾತ್ರಿ ಪ್ರಯಾಣದಲ್ಲಿ ಚಾಲಕನೊಂದಿಗೆ ಸಹ ಚಾಲಕನೊಬ್ಬ ಇರುತ್ತಾನೆ. ರಸ್ತೆ ಮಧ್ಯದಲ್ಲಿ ಇವರು ಪರಸ್ಪರ ಸ್ಟೇರಿಂಗ್‌ ಹಂಚಿಕೊಳ್ಳುತ್ತಾರೆ. ಆದರೆ ಚಾಲಕನ ಪಕ್ಕದ ಸೀಟ್‌ನಲ್ಲಿ ಕುಳಿತು ಮಾತನಾಡುವುದರಿಂದ ಆತನ ಲಕ್ಷ್ಯ ಬೇರೆಡೆ ತೆರಳುತ್ತದೆ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಚಾಲಕನ ಕ್ಯಾಬಿನ್‌ಗೆ ಬಂದು ಹರಟೆ ಹೊಡೆಯಬಾರದು.

– ಶಾರ್ಟ್‌ ಕಟ್‌ ರಸ್ತೆ; ಇರಲಿ ಎಚ್ಚರ
ಪ್ರವಾಸ ಬಂದವರು ಮ್ಯಾಪ್‌ ಸಹಾಯದಿಂದ ಶಾರ್ಟ್‌ಕಟ್‌ ರೂಟ್‌ಗಳನ್ನು ಬಳಸುವುದು ಹೆಚ್ಚಾಗುತ್ತಿವೆ. ಆ ರಸ್ತೆಯೂ ಕೆಟ್ಟು ಹೋಗಿರು ವುದರ ಜತೆಗೆ ಕಡಿದಾದ ಟರ್ನ್ಗಳಿಂದ ಕೂಡಿರುವ ಸಾಧ್ಯತೆ ಇದೆ. ಇದರ ಬದಲು ಪರಿಚಿತ ಮತ್ತು ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿ ಯನ್ನೇ ಬಳ‌ಸುವುದು ಹೆಚ್ಚು ಸೂಕ್ತ. ಸೇಫ್ ಡ್ರೈವಿಂಗ್‌ ನಿಮ್ಮ ಕರ್ತವ್ಯ.

- ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

delhi air

Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.